Home
ಸುದ್ದಿಜಾಲ

ಇದೇ ಡಿ.3ಕ್ಕೆ ಲಾಂಚ್‌ ಆಗಲಿದೆ 'ಮೊಟೊರೊಲಾ ಒನ್‌ ಹೈಪರ್‌' ಫೋನ್‌!

ಟೆಕ್‌ಲೋಕದಲ್ಲಿ ಸ್ಮಾರ್ಟ್‌ಪೋನ್‌ಗಳ ಬಿಡುಗಡೆಯ ಭರಾಟೆ ದಿನನಿತ್ಯ ನಡೆಯುತ್ತಲೇ ಇರುತ್ತೆ. ಸ್ಮಾರ್ಟ್‌ ಪೋನ್‌ ಕಂಪನಿಗಳು ಹೊಸ ಹೊಸ ಫೀಚರ್‌ಗಳುಳ್ಳ ಸ್ಮಾರ್ಟ್‌ಪೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಲೇ ಸಾಗಿವೆ. ಅದೇ ರೀತಿ ಈಗ ಲೆನೊವೊ ಒಡೆತನದ ಮೊಟೊರೊಲಾ ಕಂಪೆನಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನ್ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ.

ಮೊಟೊರೊಲಾ

ಹೌದು ಮೊಟೊರೊಲಾ ಹೊಸ ಬಗೆಯ ಸ್ಮಾರ್ಟ್‌ಫೋನ್‌ ಅನ್ನು ಇದೇ ಡಿಸೆಂಬರ್‌ 3ಕ್ಕೆ ಬಿಡುಗಡೆ ಮಾಡಲಿದೆ. ಈಗಾಗ್ಲೆ ಬ್ರೆಜಿಲ್‌ನಲ್ಲಿ ಕಾರ್ಯಕ್ರಮವೊಂದಕ್ಕೆ ಆಹ್ವಾನ ಪತ್ರಿಕೆಯನ್ನ ಲೆನೊವೊ ಕಂಪೆನಿ ನೀಡಿರೋದು ತಿಳಿದು ಬಂದಿದೆ. ಇದೇ ಕಾರ್ಯಕ್ರಮದಲ್ಲಿ ಮೊಟೊರೊಲಾ ಒನ್ ಹೈಪರ್ ಅನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಅದಾಗ್ಯೂ ಬಿಡುಗಡೆಗೂ ಮುನ್ನವೇ ಮೊಟೊರೊಲಾ ಒನ್‌ ಹೈಪರ್‌ ಸ್ಮಾರ್ಟ್‌ಪೋನ್‌ನ ಫಿಚರ್ಸ್‌ ಹೇಗಿರಲಿದೆ ಅನ್ನೋ ಮಾಹಿತಿ ಲೀಕ್‌ ಆಗಿದೆ. ಸದ್ಯದ ಮಾಹಿತಿ ಪ್ರಕಾರ ಮೊಟೊರೊಲಾ ಒನ್‌ ಹೈಪರ್‌ ಫೋನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ನೋಡಿ,

ಡಿಸ್‌ಪ್ಲೇ

ಡಿಸ್‌ಪ್ಲೇ

ಮೊಟೊರೊಲಾ ಒನ್ ಹೈಪರ್ ಸ್ಮಾರ್ಟ್‌ಫೋನ್‌ 6.39-ಇಂಚಿನ ಫುಲ್‌ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಫಿಂಗರ್‌ ಪ್ರಿಂಟ್‌ ಅವಕಾಶವನ್ನು ಸಹ ನೀಡಿದೆ. ವಿಡಿಯೊ ವೀಕ್ಷಣೆಗೆ ಹೆಚ್ಚು ಪೂರಕವಾಗಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಮೊಟೊರೊಲಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಹೊಂದಿದ್ದು 675 ಎಸ್‌ಒಸಿ ಯಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, 4GB RAM ಮತ್ತು 128GB ಶೇಖರಣ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಮೊಟೊರೊಲಾ ಒನ್ ಹೈಪರ್ ಗೂಗಲ್‌ನ ಆಂಡ್ರಾಯ್ಡ್ ಒನ್ ಬ್ರ್ಯಾಂಡಿಂಗ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಕ್ಯಾಮೆರಾ

ಕ್ಯಾಮೆರಾ

ಬಿಡುಗಡೆಗೂ ಮುನ್ನವೇ ನಿರೀಕ್ಷೆ ಹುಟ್ಟು ಹಾಕಿರೋ ಮೊಟೊರೊಲಾ ಹೈಪರ್‌ ಒನ್‌ ಸ್ಮಾರ್ಟ್‌ ಪೋನ್‌ನ ಮುಂಭಾಗದಲ್ಲಿ 32 ಎಂಪಿ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಇದ್ದು ಅದನ್ನ ಸ್ಮಾರ್ಟ್‌ಫೋನ್‌ನ ಎಲಿವೇಟಿಂಗ್ ಸ್ಲೈಡರ್‌ನಲ್ಲಿ ಇರಿಸಲಾಗಿದೆ. ಸ್ಮಾರ್ಟ್‌ಪೋನ್‌ನ ಹಿಂಭಾಗದಲ್ಲಿ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಇದ್ದು ಕ್ರಮವಾಗಿ 64 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಲೆನ್ಸ್‌ ಕ್ಯಾಮೆರಾ ಇರಲಿದೆ . ಅಲ್ಲದೆ ಫ್ರಂಟ್‌ ಕ್ಯಾಮೆರಾದಲ್ಲಿ F / 2.0 ಲೆನ್ಸ್ ಹೊಂದಿದೆ ಎಂದು ಹೇಳಲಾಗಿದೆ.

ಬ್ಯಾಟರಿ

ಬ್ಯಾಟರಿ

ಮೊಟೊರೊಲಾ ಒನ್ ಹೈಪರ್ ಫೋನ್‌ ಯುಎಸ್ಬಿ ಟೈಪ್-ಸಿಗಿಂತ ವೇಗವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ಬ್ಯಾಟರಿ ಸಾಮರ್ಥ್ಯ 4,000 ಎಮ್ಎಹೆಚ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಗೇಮಿಂಗ್‌ಗೆ ಬ್ಯಾಟರಿ ಅತ್ಯುತ್ತಮ ಬ್ಯಾಕ್‌ಅಪ್‌ ನೀಡಲಿದೆ.

Best Mobiles in India

English summary
Motorola One Hyper, the rumoured pop-up selfie camera smartphone by the Lenovo-owned company, is likely to debut on December 3. The company has reportedly sent out an invite for an event in Brazil where it is expected to unveil the Motorola One Hyper.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+