Home
ಸುದ್ದಿಜಾಲ

ಮೊಟೊರೊಲಾ ಸಂಸ್ಥೆ ಯಿಂದ ಬರಲಿದೆ ''ಒನ್ ಮಿಡ್‌‌'' ಸ್ಮಾರ್ಟ್‌ಫೋನ್‌!

ಮೊಟೊರೊಲಾ ಸ್ಮಾರ್ಟ್‌ಫೋನ್‌ ಕಂಪೆನಿ ಜಾಗತಿಕವಾಗಿ ಉತ್ತಮ ಮಾರುಕಟ್ಟೆಯನ್ನ ಹೊಂದಿದೆ. ಸದಾ ಹೊಸತನದ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನ ಮಿಡ್‌ರೇಂಜ್‌ ಬೆಲೆಯಲ್ಲಿ ಪರಿಚಯಿಸಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಇನ್ನು ಈಗಾಗ್ಲೆ ಹಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್‌ ಮಾಡಿರುವ ಮೊಟೊರೊಲಾ ಇದೀಗ ಮೊಟರೊಲಾ ಮಿಡ್‌ ಒನ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವುದಕ್ಕೆ ವೇದಿಕೆ ಸಿದ್ದಪಡಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಅಮೆರಿಕಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಮೊಟೊರೊಲಾ ಇದೀಗ ಒನ್ ಮಿಡ್‌‌ ಅನ್ನೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಮಿಡ್‌ಒನ್‌ ಅನ್ನುವ ಹೆಸರೇ ಇನ್ನು ಅಂತಿಮ ಎಂದು ಹೇಳಿಲ್ಲವಾದರೂ ಈ ಸ್ಮಾರ್ಟ್‌ಫೋನ್‌ ಕೂಡ ಮಿಡ್‌ರೇಂಜ್‌ ಬೆಲೆಯಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಇಂತಹದೊಂದು ಸ್ಮಾರ್ಟ್‌ಫೋನ್‌ ಸಿದ್ದವಾಗಿದೆ ಅನ್ನೊದನ್ನ ಮೊಟೊರೊಲಾ ಹೇಳಿಲ್ಲವಾದರೂ ಆನ್‌ಲೈನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೇನು ಅನ್ನೊದು ಲೀಕ್‌ ಆಗಿದೆ. ಸದ್ಯ ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಮೊಟೊರೊಲಾ ಒನ್‌ಮಿಡ್‌

ಮೊಟೊರೊಲಾ ಒನ್‌ಮಿಡ್‌

ಈ ಸ್ಮಾರ್ಟ್‌ಫೋನ್‌ 2340 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.53 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ವಾಟರ್‌ಡ್ರಾಪ್‌ ನಾಚ್‌ ಶೈಲಿಯನ್ನ ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್‌ ಕ್ವಾಲ್ಕಾಮ್‌ SoC 1.8GHz ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು 6GB RAM ಹೊಂದಿರುವ ಸಾದ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ವಿಶೇಷತೆ

ವಿಶೇಷತೆ

ಇತ್ತೀಚಿಗೆ ಮೊಟೊರೊಲಾ ಕಂಪೆನಿ ಮೊಟೊ G8, Gಸ್ಟೈಲಶ್‌, G8 power, G8 power lite, ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇದರ ನಡುವೆ ಇದೀಗ ಮಿಡ್‌ಒನ್‌ ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೊಟೊರೊಲಾ ಮುಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಟೆಸ್ಟ್‌ನಲ್ಲಿ 2534 ಮತ್ತು 6961 ಸ್ಕೋರ್‌ ಅನ್ನು ಮಾಡಿದೆ. ಇದರಿಂದಾಗಿ ಈ ಹಿಂದಿನ ಸ್ಮಾರ್ಟ್‌ಫೋನ್‌ಗಳ ಪ್ರೊಸೆಸರ್‌ ಮುಂದುವರೆಯಲಿದೆಯೋ ಇಲ್ಲ ಬದಲಾಗಲಿದೆಯೋ ಅನ್ನೊ ಕುತೂಹಲ ಟೆಕ್‌ವಲಯದಲ್ಲಿ ಮೂಡಿದೆ.

ಮೊಟೊ G8 ಸ್ಮಾರ್ಟ್‌ಫೋನ್‌

ಮೊಟೊ G8 ಸ್ಮಾರ್ಟ್‌ಫೋನ್‌

ಇನ್ನು ಮೊಟೊರೊಲಾ ಕಂಪೆನಿ ಕೆಲವೇ ದಿನಗಳ ಹಿಂದೆ ಮೊಟೊ G8 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.4 ಇಂಚಿನ ಮ್ಯಾಕ್ಸ್‌ ವಿಷನ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 665SoC ಪ್ರೊಸೆಸರ್‌ ಹೊಂದಿದೆ. ಅಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಮುಖ್ಯ ಕ್ಯಾಮೆರಾವನ್ನ ಒಳಗೊಂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿದೆ.

ಇತರೆ

ಇತರೆ

ಸದ್ಯ ಮೊಟೊರೊಲಾ ಕಂಪೆನಿ ಬಿಡುಗಡೆ ಮಾಡಿರುವ G8 ಸರಣಿಯ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಹಾಗೂ ಅತ್ಯುತ್ತಮ ವೇಗದ ಪ್ರೊಸೆಸರ್‌ ಮಾದರಿಯನ್ನ ಹೊಂದಿರುವುದರಿಂದ ಒನ್‌ಮಿಡ್‌ ಸ್ಮಾರ್ಟ್‌ಫೋನ್‌ನಲ್ಲಿಯೂ ಇದನ್ನೇ ನಿರೀಕ್ಷಿಸಬಹುದಾಗಿದೆ. ಅಲ್ಲದೆ 5591MB ಮೆಮೊರಿ ಎಂದು ಆನ್‌ಲೈನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಉತ್ತಮ ಸ್ಟೋರೇಜ್‌ ಕ್ಯಾಪಾಸಿಟಿ ಹಾಗೂ ಬ್ಯಾಟರಿ ಪ್ಯಾಕ್‌ಅಪ್‌ ಜೊತೆ ಬರುವ ಸಾಧ್ಯತೆ ಇದೆ.

Best Mobiles in India

English summary
The Motorola One Mid is supposed to another -midrange offering and is now listed on the benchmark website, as of March 9.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+