Home
ಸುದ್ದಿಜಾಲ

ಮೊಟಾರೊಲಾದಿಂದ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಲಾಂಚ್

By Lekhaka

ಈಗಾಗಲೇ ಮೊಟೊ ಮೋಡ್ ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ವಿವಿಧ ಮಾದರಿಯ ಮೊಟೊ ಮೋಡ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಮೊಟೊರೊಲಾ ಅಮೇರಿಕಾದ ಮಾರುಕಟ್ಟೆಯಲ್ಲಿ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಅನ್ನು ಲಾಂಚ್ ಮಾಡಿದೆ. ಈ ಮೋಡ್ ಬೆಲೆ $199.99 ಆಗಿದ್ದು, (ಸರಿ ಸುಮಾರು ರೂ.13,000) ಮೊಟಾರೊಲಾ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಿ ಬುಕಿಂಗ್ ಮಾಡಬಹುದಾಗಿದೆ.

ಮೊಟಾರೊಲಾದಿಂದ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಲಾಂಚ್

ಮೊಟಾರೊಲಾ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಮೊಟೊ Z ಸರಣಿಯ ಸ್ಮಾರ್ಟ್ ಫೋನ್ ಗಳೊಂದಿಗೆ ಕಾರ್ಯನಿರ್ವಹಿಸಲಿದ್ದು, 2X3 ಇಂಚಿನ ಸೈಜಿನಲ್ಲಿ ಫೋಟೋಗಳನ್ನು ಪ್ರಿಂಟ್ ಮಾಡಿಕೊಡಲಿದೆ. ಅದುವೇ ಜಿಕ್ ಪೇಪರ್ನಲ್ಲಿ ಪ್ರಿಂಟ್ ಮಾಡಲಿದೆ.

ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ನಲ್ಲಿ ನೀವು ನಿಮ್ಮ ಫೋನಿನ ಗ್ಯಾಲರಿಯಲ್ಲಿ ಇರುವ ಫೋಟೋಗಳನ್ನು, ಸೋಶಿಯಲ್ ಮೀಡಿಯಾದಲ್ಲಿ ಇರುವ ಫೋಟೋಗಳನ್ನು ಸಹ ಪ್ರಿಂಟ್ ತೆಗಯಬಹುದಾಗಿದೆ. ಇದು ನಿಮ್ಮ ಫೋನಿ ಹಿಂಭಾಗದ ಅಂದವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.

ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ನಲ್ಲಿ 500mAh ಬ್ಯಾಟರಿಯನ್ನು ಸಹ ನೀಡಲಾಗಿದೆ. ಅಲ್ಲದೇ ವಿವಿದ ಮಾದರಿಯಲ್ಲಿಯೂ ಫೋಟೋಗಳನ್ನು ಪ್ರಿಂಟ್ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 20 ಫೋಟೋ ಪ್ರಿಂಟ್ ಮಾಡಬಹುದಾಗಿದೆ. ಒಮ್ಮೆಗೆ 10 ಫೋಟೋಗಳನ್ನು ಪ್ರಿಂಟ್ ಮಾಡಲಿದೆ.

ಮುಂದಿನ ತಿಂಗಳಿನಲ್ಲಿ ಈ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಎಲ್ಲಾ ದೇಶಗಳಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಈಗಾಗಲೇ ಈ ಪೋಲರಯ್ಡ್ ಇನ್ಸಟಾ ಪ್ರಿಂಟರ್ ಮೋಡ್ ಬೇಡಿಕೆಸಹ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಗೂ ಶೀಘ್ರವೇ ಲಗ್ಗೆ ಇಡಲಿದೆ.

Best Mobiles in India

English summary
Motorola has announced the launch of the Polaroid Insta-Share Printer Moto Mod at a whopping $199.99 price tag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+