Home
ಸುದ್ದಿಜಾಲ

ಮೊಟೊರೊಲಾದ ಈ ಸ್ಮಾರ್ಟ್‌ಫೋನ್‌ ಮೇಲೆ ಸಿಗ್ತಾ ಇದೆ 55% ಡಿಸ್ಕೌಂಟ್‌:..256GB ಸ್ಟೋರೇಜ್‌ ಆಯ್ಕೆ!

ಕಳೆದ ವರ್ಷ ಟೆಕ್‌ ವಲಯದಲ್ಲಿ ಪ್ರತಿಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮೊಟೊರೊಲಾ ರೇಜರ್‌ 40 ಸ್ಮಾರ್ಟ್‌ಫೋನ್‌ ಇದೀಗ ಭಾರಿ ರಿಯಾಯಿತಿ ಪಡೆದುಕೊಂಡಿದೆ. ಅಮೆಜಾನ್‌ ತಾಣದಲ್ಲಿ ಮೊಟೊರೊಲಾ ರೇಜರ್‌ 40 ಮೇಲೆ ಬಿಗ್‌ ಡಿಸ್ಕೌಂಟ್‌ ನೀಡಲಾಗ್ತಿದೆ. ಇದರಿಂದ ಹೊಸ ವರ್ಷದಲ್ಲಿ ಫೋಲ್ಡಬಲ್‌ ಫೋನ್‌ ಖರೀದಿಸುವವರಿಗೆ ಬೆಸ್ಟ್‌ ಆಯ್ಕೆ ಆಗಿದೆ.

ಹೌದು, ಮೊಟೊರೊಲಾ ರೇಜರ್‌ 40 ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಬಿಗ್‌ ಆಫರ್‌ನಲ್ಲಿ ದೊರೆಯುತ್ತಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ಎಷ್ಟು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಟೊರೊಲಾದ ಈ ಫೋನ್‌ ಮೇಲೆ ಸಿಗ್ತಾ ಇದೆ 55% ಡಿಸ್ಕೌಂಟ್‌:256GB ಸ್ಟೋರೇಜ್‌ ಆಯ್ಕೆ

ಮೊಟೊರೊಲಾ ರೇಜರ್‌ 40 ಡಿಸ್ಕೌಂಟ್‌ ಎಷ್ಟಿದೆ?
ಮೊಟೊರೊಲಾ ರೇಜರ್‌ 40 ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ 99,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್‌ನಲ್ಲಿ 55% ಡಿಸ್ಕೌಂಟ್‌ ಪಡೆದುಕೊಂಡಿರುವುದರಿಂದ ಸ್ಮಾರ್ಟ್‌ಫೋನ್‌ ಬೆಲೆ 44,999ರೂ ಗಳಿಗೆ ಇಳಿದಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಇನ್ನಷ್ಟು ರಿಯಾಯಿತಿ ದೊರೆಯಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.

ಮೊಟೊರೊಲಾ ರೇಜರ್‌ 40 ಫೀಚರ್ಸ್‌ ಹೇಗಿದೆ?
ಮೊಟೊರೊಲಾ ರೇಜರ್‌ 40 ಫೋನ್‌ 1080 x 2640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.9 ಇಂಚಿನ ಮೇನ್‌ ಡಿಸ್‌ಪ್ಲೇ ಹೊಂದಿದೆ. ಇದು 85.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ 1.5 ಇಂಚಿನ ಸೆಕೆಂಡರಿ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಜೊತೆಗೆ 194 x 368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿದೆ.

ಮೊಟೊರೊಲಾದ ಈ ಫೋನ್‌ ಮೇಲೆ ಸಿಗ್ತಾ ಇದೆ 55% ಡಿಸ್ಕೌಂಟ್‌:256GB ಸ್ಟೋರೇಜ್‌ ಆಯ್ಕೆ

ಮೊಟೊರೊಲಾ ರೇಜರ್‌ 40 ಪ್ರೊಸೆಸರ್‌ ಯಾವುದು?
ಮೊಟೊರೊಲಾ ರೇಜರ್‌ 40 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್‌ ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸುವುದಿಲ್ಲ ಅನ್ನೋದು ವಿಶೇಷ.

ಮೊಟೊರೊಲಾ ರೇಜರ್‌ 40 ಕ್ಯಾಮೆರಾ ಸೆಟಪ್‌ ಏನಿದೆ?
ಮೊಟೊರೊಲಾ ರೇಜರ್‌ 40 ಫೋನ್‌ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ ವೈಡ್‌ ಲೆನ್ಸ್‌ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ, ಹೆಚ್‌ಡಿಆರ್‌ ಅನ್ನು ಒಳಗೊಂಡಿದೆ.

ಮೊಟೊರೊಲಾದ ಈ ಫೋನ್‌ ಮೇಲೆ ಸಿಗ್ತಾ ಇದೆ 55% ಡಿಸ್ಕೌಂಟ್‌:256GB ಸ್ಟೋರೇಜ್‌ ಆಯ್ಕೆ

ಮೊಟೊರೊಲಾ ರೇಜರ್‌ 40 ಬ್ಯಾಟರಿ ಮತ್ತು ಇತರೆ
ಮೊಟೊರೊಲಾ ರೇಜರ್‌ 40 ಫೋನ್‌ 4200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 30W ವೈರ್ಡ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಹೊಂದಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಗೈರೊ, ಪ್ರಾಕ್ಸಿಮಿಟಿ ಸೆನ್ಸಾರ್‌, ಕಂಪಾಸ್‌, ಬ್ಯಾರೋಮೀಟರ್ ಅನ್ನು ಒಳಗೊಂಡಿದೆ.

Best Mobiles in India

English summary
Motorola razr 40 Smartphone Gets a 55% Discount in amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+