Home
ಸುದ್ದಿಜಾಲ

Motorola: ಟೆಕ್‌ ವಲಯವನ್ನೇ ನಡುಗಿಸಿದ್ದ ಈ ಫೋನ್‌ ಬೆಲೆ ಇದೀಗ 10,000ರೂ ಕಡಿಮೆ ಆಗಿದೆ!

ಈ ವರ್ಷ ಮೊಬೈಲ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಕೂಡ ಒಂದು. ಈ ಸ್ಮಾರ್ಟ್‌ಫೋನ್‌ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಬಿಡುಗಡೆ ಆದ ದಿನದಿಂದಲೂ ಸಖತ್‌ ಸೌಂಡ್‌ ಮಾಡುತ್ತಿದೆ. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಮೊಟೊರೊಲಾ ಕಂಪೆನಿ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಮಾಡಿದೆ.

ಹೌದು, ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಇದು ಗ್ರಾಹಕರನ್ನು ಅಚ್ಚರಿಗೆ ದೂಡಿದ್ದು, ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಒಳ್ಳೆಯ ಅವಕಾಶ ನೀಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್‌ ವಲಯವನ್ನೇ ನಡುಗಿಸಿದ್ದ ಈ ಫೋನ್‌ ಬೆಲೆ ಇದೀಗ 10,000ರೂ ಕಡಿಮೆ ಆಗಿದೆ!

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಬೆಲೆಯಲ್ಲಿ ಭಾರಿ ಕಡಿತ
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬರೋಬ್ಬರಿ 10,000ರೂ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಇದರ ಮೂಲ ಬೆಲೆ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 89,999ರೂ. ಆಗಿದ್ದು, ಬೆಲೆ ಕಡಿತದ ನಂತರ 79,999ರೂ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಅಲ್ಟ್ರಾ ಮಾದರಿಯು ಇನ್ಫೈನೈಟ್ ಬ್ಲ್ಯಾಕ್ ಮತ್ತು ವಿವಾ ಮೆಜೆಂಟಾ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಆಫರ್‌ ಡಿಸೆಂಬರ್ 24 ರವರೆಗೆ ನಡೆಯುತ್ತಿರುವ ಮೋಟೋ ಡೇಸ್‌ ಸೇಲ್‌ನಲ್ಲಿ ದೊರೆಯಲಿದ್ದು, ಸೀಮಿತ ಅವಧಿಯ ರಿಯಾಯಿತಿಗಳನ್ನು ನೀಡುತ್ತಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೀಚರ್ಸ್‌ ಹೇಗಿದೆ?
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಫೋಲ್ಡಬಲ್‌ ಫೋನ್‌ ಆಗಿದೆ. ಇದು 6.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 165Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಜೊತೆಗೆ 3.6-ಇಂಚಿನ ಔಟರ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 1,056x1,066 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇದು 144Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಪ್ರೊಸೆಸರ್‌ ಯಾವುದು?
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MyUX ನಲ್ಲಿ ರನ್ ಆಗಲಿದೆ. ಹಾಗೆಯೇ 8GB RAM + 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯಲ್ಲಿ ದೊರೆಯಲಿದೆ.

ಟೆಕ್‌ ವಲಯವನ್ನೇ ನಡುಗಿಸಿದ್ದ ಈ ಫೋನ್‌ ಬೆಲೆ ಇದೀಗ 10,000ರೂ ಕಡಿಮೆ ಆಗಿದೆ!

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಕ್ಯಾಮೆರಾ ಸೆಟಪ್‌ ಏನಿದೆ?
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ. ಇದರಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಬ್ಯಾಟರಿ ಮತ್ತು ಇತರೆ
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ 3,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Motorola Razr 40 Ultra Price in India Slashed by Rs 10000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+