Home
ಸುದ್ದಿಜಾಲ

Motorola: ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಈ ಫೋನ್‌ 42% ಡಿಸ್ಕೌಂಟ್‌ ಪಡೆದಿದೆ!

ಮಡಚುವ ಮೊಬೈಲ್‌ ವಿಭಾಗದಲ್ಲಿ ಕ್ಲಾಸಿಕ್‌ ಮೊಬೈಲ್‌ ಎಂದೆನಿಸಿಕೊಂಡಿರುವ ಮೊಟೊರೊಲಾ ರೇಜರ್‌ 40 ಅಲ್ಟ್ರಾ ಫೋನ್‌ ಇದೀಗ ಡಿಸ್ಕೌಂಟ್‌ನಲ್ಲಿ ಲಭ್ಯವಾಗುತ್ತಿದೆ. ಆಶ್ಚರ್ಯವಾಗುತ್ತಿದೆಯಾ? ಅಚ್ಚರಿ ಎನಿಸಿದರೂ ಕೂಡ ಇದು ಸತ್ಯ. ಏಕೆಂದರೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬರೋಬ್ಬರಿ 42% ಡಿಸ್ಕೌಂಟ್‌ ಪಡೆದುಕೊಂಡಿದೆ.

ಹೌದು, Motorola razr 40 Ultra ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಇದರಿಂದ ಸ್ಮಾರ್ಟ್‌ಫೋನ್‌ ಪ್ರಿಯರು ದಂಗಾಗುವಂತೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಬೇಕೆಂದುಕೊಂಡವರಿಗೆ ಇದಕ್ಕಿಂತ ಬೆಸ್ಟ್‌ ಟೈಂ ಮತ್ತೆ ಸಿಗುವುದಿಲ್ಲ. ಹಾಗಾದ್ರೆ Motorola razr 40 Ultra ಸ್ಮಾರ್ಟ್‌ಫೋನ್‌ ಮೇಲೆ ಡಿಸ್ಕೌಂಟ್‌ ದೊರೆತ ನಂತರ ಅದರ ಬೆಲೆ ಎಷ್ಟು ಇಳಿಕೆಯಾಗಿದೆ? ಇದರ ಫೀಚರ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಈ ಫೋನ್‌ 42% ಡಿಸ್ಕೌಂಟ್‌ ಪಡೆದಿದೆ!

ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು?
Motorola razr 40 Ultra ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ 1,19,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಬರೋಬ್ಬರಿ 42% ಡಿಸ್ಕೌಂಟ್‌ ಲಭ್ಯವಿದ್ದು, ಇದೀಗ ಕೇವಲ 69,999ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದಲ್ಲದೆ ಸ್ಮಾರ್ಟ್‌ಪೋನ್‌ ಮೇಲೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಆಫರ್‌ ಕೂಡ ದೊರೆಯಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಪರಿಣಾಮಕಾರಿ ಬೆಲೆ ಇಳಿಕೆಯನ್ನು ಕಾಣಬಹುದಾಗಿದೆ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಡಿಸ್‌ಪ್ಲೇ ರಚನೆ
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.9 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1080 x 2640 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಡಿಸ್‌ಪ್ಲೇ 85.1% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 413 ppi ಸಾಂದ್ರತೆಯನ್ನು ಹೊಂದಿದ್ದು, 1100 ಗರಿಷ್ಠ ನಿಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಹೊಂದಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಸಹ ಹೊಂದಿದೆ.

ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಈ ಫೋನ್‌ 42% ಡಿಸ್ಕೌಂಟ್‌ ಪಡೆದಿದೆ!

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಪ್ರೊಸೆಸರ್‌ ಯಾವುದು?
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್‌ 1 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MyUX ಅನ್ನು ರನ್‌ ಮಾಡಲಿದೆ. ಹಾಗೇಯೆ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೆಮೊರಿ ಕಾರ್ಡ್‌ ಬೆಂಬಲವನ್ನು ನೀಡಲಾಗಿಲ್ಲ.

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಕ್ಯಾಮೆರಾ ರಚನೆ ಹೇಗಿದೆ?
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ OIS ಮತ್ತು ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಸೆನ್ಸರ್‌ ಪಡೆದಿದೆ. ಇದರೊಂದಿಗೆ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಈ ಫೋನ್‌ 42% ಡಿಸ್ಕೌಂಟ್‌ ಪಡೆದಿದೆ!

ಮೊಟೊರೊಲಾ ರೇಜರ್‌ 40 ಅಲ್ಟ್ರಾ ಬ್ಯಾಟರಿ ಮತ್ತು ಇತರೆ ಸೌಲಭ್ಯ
ಮೊಟೊರೊಲಾ ರೇಜರ್‌ 40 ಅಲ್ಟ್ರಾ ಸ್ಮಾರ್ಟ್‌ಫೋನ್‌ 3,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 30W ವೈರ್ಡ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಯುಎಸ್‌ಬಿ 2.0 ಪೋರ್ಟ್ ಅನ್ನು ಹೊಂದಿದೆ. ಇದು ವಿವಾ ಮೆಜೆಂಟಾ ಕಲರ್‌ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.

Best Mobiles in India

English summary
Motorola razr 40 Ultra Smartphone Get Huge Discount in Amazon: Offer Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+