ಭಾರತದಲ್ಲಿ ಮೊಟೊರೊಲಾ ರೇಜರ್ 5G ಫೋಲ್ಡಬಲ್ ಫೋನ್ ಬಿಡುಗಡೆ!
ಮೊಟೊರೊಲಾ ಸಂಸ್ಥೆ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ತನ್ನ ಹೊಸ ರೇಜರ್ 5G ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.2-ಇಂಚಿನ ಹೊಂದಿಕೊಳ್ಳುವ OLED ಡಿಸ್‌ಪ್ಲೇಯನ್ನು ಉಳಿಸಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ನೊಟೀಫೀಕೇನ್ ಅನ್ನು ಡಿಸ್‌ಪ್ಲೇ ಮಾಡುವ ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

ಹೌದು, ಮೊಟೊರೊಲಾ ಕಂಪೆನಿ ತನ್ನ ಹೊಸ ರೇಜರ್ 5G ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಮಡಚಬಹುದಾದ ಡಿಸ್‌ಪ್ಲೇಯನ್ನು ಹೊಂದಿರುವುದರಿಂದ ನಿಮ್ಮ ಫೋನ್‌ಗೆ ಬರುವ ನೊಟೀಪೀಕೇಷನ್ ಅನ್ನು ನೋಡುಬುದಕ್ಕೆ "Quick View" ಡಿಸ್‌ಪ್ಲೇ ಯನ್ನು ಸಹ ನೀಡಲಾಗಿದೆ. ಇದಲ್ಲದೆ, ಮೊಟೊರೊಲಾ ರೇಜರ್ 5G 3D ರೂಪುಗೊಂಡ ಗಾಜು ಮತ್ತು 7000 ಸರಣಿ ಅಲ್ಯೂಮಿನಿಯಂನಿಂದ ಮಾಡಿದ ಲೋಹ ಮತ್ತು ಗಾಜಿನ ದೇಹವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ವಿನ್ಯಾಸ
ಮೊಟೊರೊಲಾ ರೇಜರ್ 5G ಫೋಲ್ಡಬಲ್ ಫೋನ್ 876x2,142 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು 21: 9ರಚನೆಯ ಅನುಪಾತ ಹೊಂದಿರುವ ಮಡಿಸಬಹುದಾದ 6.2-ಇಂಚಿನ ಪ್ಲಾಸ್ಟಿಕ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಫ್ಲಿಪ್ ಪ್ಯಾನೆಲ್‌ನ ಮೇಲ್ಭಾಗದಲ್ಲಿ 600x800 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 2.7-ಇಂಚಿನ ಸೆಕೆಂಡರಿ ಡಿಸ್‌ಪ್ಲೇ ಹೊಂದಿದೆ. ಇದು 4: 3 ರಚನೆಯ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಬಲ
ಮೊಟೊರೊಲಾ ರೇಜರ್ 5G ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 765G SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಇದು 8 GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.

ಕ್ಯಾಮೆರಾ ವಿಶೇಷ
ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಅನ್ನು ಒಳಗೊಂಡಿದೆ. ಜೊತೆಗೆ ಇದರಲ್ಲಿ ಲೇಸರ್ ಆಟೋಫೋಕಸ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅನ್ನು ಮಡಿಸಿದಾಗ ಸೆಕೆಂಡರಿ ಕ್ಯಾಮೆರಾ ಸೆಲ್ಫಿ ಕ್ಯಾಮೆರಾದಂತೆ ದ್ವಿಗುಣಗೊಳ್ಳುತ್ತದೆ. ಇದು 20 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದರಲ್ಲಿ ಸೆನ್ಸರ್ ಗ್ರೂಪ್ ಸೆಲ್ಫಿ, ಪೋರ್ಟ್ರೇಟ್ ಮೋಡ್ ಮತ್ತು ಸ್ಪಾಟ್ ಕಲರ್ ಸೇರಿದಂತೆ ವಿವಿಧ ವಿಧಾನಗಳನ್ನು ಬೆಂಬಲಿಸುತ್ತದೆ.

ಬ್ಯಾಟರಿ ಮತ್ತು ಇತರೆ
ಮೊಟೊರೊಲಾ ರೇಜರ್ 5G 2,800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 15W ಟರ್ಬೊಪವರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಮೊಟೊರೊಲಾ ರೇಜರ್ 5G ಬೆಲೆ 1,24,999 ರೂ. ಆಗಿದೆ. ಇನ್ನು ಈ ಫೋನ್ ಪೋಲಿಷ್ ಗ್ರ್ಯಾಫೈಟ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಆದರೆ ಇದರ ಮಾರಾಟವನ್ನು ಅಕ್ಟೋಬರ್ 12 ರಂದು ಎಲ್ಲಾ ಪ್ರಮುಖ ಚಿಲ್ಲರೆ ಅಂಗಡಿಗಳು ಮತ್ತು ಫ್ಲಿಪ್‌ಕಾರ್ಟ್ ಮೂಲಕ ನಿಗದಿಪಡಿಸಲಾಗಿದೆ. ಜೊತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಮೂಲಕ ಖರೀದಿಸಿದರೆ 10,000 ರೂಗಳ ತ್ವರಿತ ರಿಯಾಯಿತಿ ಅನ್ನು ನೀಡಲಾಗಿದೆ.


Click it and Unblock the Notifications




