ಭಾರತದಲ್ಲಿ ಇಂದಿನಿಂದ Motorola Razr 60 ಸೇಲ್: ಇಲ್ಲಿದೆ ಸಂಪೂರ್ಣ ಮಾಹಿತಿ!'
ಭಾರತೀಯ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಹೊಸ ಫ್ಲಿಪ್-ಶೈಲಿಯ ಫೋಲ್ಡಬಲ್ ಸ್ಮಾರ್ಟ್‌ಫೋನ್ Motorola Razr 60 ಇಂದು ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಇಂದು (ಜೂನ್ 4) ಮಧ್ಯಾಹ್ನ 12 ಗಂಟೆಯಿಂದ Flipkart, motorola.com ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ Motorola Razr 60 ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಅವಕಾಶವಿದ್ದು,. ಪ್ರೀಮಿಯಂ ಫೋಲ್ಡಬಲ್ ಫೋನ್ ಅನುಭವವನ್ನು ಬಯಸುವ ಆದರೆ ಅಲ್ಟ್ರಾ-ಫ್ಲಾಗ್‌ಶಿಪ್ ಬೆಲೆ ನೀಡಲು ಇಚ್ಚಸದ ಗ್ರಾಹಕರನ್ನು ಇದು ಗುರಿಯಾಗಿಸಿಕೊಂಡಿದೆ. ಹಾಗಾದರೆ, ಹೊಸ Motorola Razr 60 ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಮತ್ತು ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಬೆಲೆ ಮತ್ತು ಲಭ್ಯತೆ
Motorola Razr 60 ಒಂದೇ ರೂಪಾಂತರದಲ್ಲಿ (8GB RAM ಮತ್ತು 256GB ಸಂಗ್ರಹಣೆ) ಲಭ್ಯವಿದ್ದು, ಇದರ ಬೆಲೆ 49,999 ರೂ. ಆಗಿದೆ. ಇದು ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತದೆ: ಪ್ಯಾಂಟೋನ್ ಜಿಬ್ರಾಲ್ಟರ್ ಸೀ, ಪ್ಯಾಂಟೋನ್ ಲೈಟೆಸ್ಟ್ ಸ್ಕೈ, ಮತ್ತು ಸ್ಪ್ರಿಂಗ್ ಬಡ್. ಖರೀದಿದಾರರು Flipkart, Motorola ವೆಬ್‌ಸೈಟ್ ಅಥವಾ ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಿಂದ ಇದನ್ನು ಖರೀದಿಸಬಹುದು. ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ (No-cost EMI) ಆಯ್ಕೆಯೂ ಲಭ್ಯವಿದೆ.
Motorola Razr 60 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು,
ಹೊಸ Motorola Razr 60 ಸ್ಮಾರ್ಟ್‌ಫೋನ್ 6.9-ಇಂಚಿನ ಪೂರ್ಣ HD+ (1,080×2,640 ಪಿಕ್ಸೆಲ್‌ಗಳು) pOLED LTPO ಮುಖ್ಯ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ದರ, 3,000 nits ವರೆಗೆ ಗರಿಷ್ಠ ಹೊಳಪು, 120 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಕವರೇಜ್ ಮತ್ತು HDR10+ ಬೆಂಬಲದೊಂದಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಇದರ 3.63-ಇಂಚಿನ pOLED ಕವರ್ ಡಿಸ್‌ಪ್ಲೇಯು 1,056×1,066 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ವರೆಗೆ ರಿಫ್ರೆಶ್ ದರ, 1,700 nits ವರೆಗೆ ಗರಿಷ್ಠ ಹೊಳಪು ಮತ್ತು HDR10 ಬೆಂಬಲವನ್ನು ಹೊಂದಿದೆ. ಜೊತೆಗೆ, ಹೊರ ಡಿಸ್‌ಪ್ಲೇಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ನೀಡಲಾಗಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400X ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಜೊತೆಗೆ 8GB LPDDR4X RAM ಮತ್ತು 256GB UFS 2.2 ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ. ಇದು ಆಂಡ್ರಾಯ್ಡ್ 15-ಆಧಾರಿತ Hello UI ಸ್ಕಿನ್‌ನೊಂದಿಗೆ ಬರುತ್ತದೆ ಮತ್ತು 30W ಟರ್ಬೊಪವರ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Motorola Razr 60 ಸ್ಮಾರ್ಟ್‌ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹೊರ ಕ್ಯಾಮೆರಾ (f/1.7 ಅಪರ್ಚರ್ ಮತ್ತು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನ) ಮತ್ತು f/2.2 ಅಪರ್ಚರ್ ಹೊಂದಿರುವ 13-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಅನ್ನು ಹೊಂದಿದೆ. ಸೆಲ್ಫಿಗಾಗಿ, ಇದು ಒಳಗಿನ ಡಿಸ್‌ಪ್ಲೇಯ ಮೇಲ್ಭಾಗದಲ್ಲಿ f/2.4 ಅಪರ್ಚರ್ ಹೊಂದಿರುವ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಇದು AI-ಬೆಂಬಲಿತ ಇಮೇಜಿಂಗ್ ಮತ್ತು ಉತ್ಪಾದಕತಾ ಪರಿಕರಗಳನ್ನು ಒಳಗೊಂಡಿರುವ Moto AI ಸೂಟ್‌ನೊಂದಿಗೆ ಸಜ್ಜುಗೊಂಡಿದೆ.ಸುರಕ್ಷತೆಗಾಗಿ, ಈ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP48 ರೇಟಿಂಗ್ ಅನ್ನು ಪಡೆದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ. Motorola Razr 60 ಸ್ಮಾರ್ಟ್‌ಫೋನ್ ಬಿಚ್ಚಿದಾಗ, 73.99×171.30×7.25mm ಗಾತ್ರವನ್ನು ಹೊಂದಿದ್ದು, ಸುಮಾರು 188g ತೂಗುತ್ತದೆ.


Click it and Unblock the Notifications








