Home
ಸುದ್ದಿಜಾಲ

ಭಾರತದಲ್ಲಿ ಮೊಟೊರೊಲಾ ಕಂಪೆನಿಯ ಪೋಲ್ಡೆಬಲ್ ಫೋನ್ Razr 60 Ultra ಬಿಡುಗಡೆ!

ಮೊಟೊರೊಲಾ ಕಂಪನಿಯು ತನ್ನ ಹೊಚ್ಚಹೊಸ ಕ್ಲಾಮ್‌ಶೆಲ್ ಮಾದರಿಯ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆದ ಮೊಟೊರೊಲಾ Razr 60 Ultra ವನ್ನು ಭಾರತೀಯ ಮಾರುಕಟ್ಟೆಗೆ ಇಂದು (ಮಗಳವಾರ) ಬಿಡುಗಡೆ ಮಾಡಿದೆ. ಈ ಮೊದಲು ಏಪ್ರಿಲ್ ತಿಂಗಳಲ್ಲಿ ಜಾಗತಿಕವಾಗಿ ಅನಾವರಣಗೊಂದಡಿದ್ದ ಈ ಫೋನ್, ನಿರೀಕ್ಷೆಯಂತೆಯೇ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಒಳಗೊಂಡಿದ್ದು, ಕ್ವಾಲ್ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 16GB RAM ಅನ್ನು ಹೊಂದಿದೆ. ಇದರೊಂದಿಗೆ, ಈ ಫೋನ್ 4-ಇಂಚಿನ ಕವರ್ ಡಿಸ್ಪ್ಲೇ ಮತ್ತು 7-ಇಂಚಿನ ಫೋಲ್ಡಬಲ್ ಡಿಸ್‌ಪ್ಲೇಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ ಎರಡು 50-ಮೆಗಾಪಿಕ್ಸೆಲ್ ಮತ್ತು ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗಾದರೆ, ಹೊಸ Motorola Razr 60 Ultra ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Motorola Razr 60 Ultra ಫೋನ್ ವೈಶಿಷ್ಟ್ಯಗಳು,
ನೂತ Motorola Razr 60 Ultra ಫೋನ್ 7-ಇಂಚಿನ 1.5K pOLED LTPO ಫೋಲ್ಡಬಲ್ ಮುಖ್ಯ ಡಿಸ್‌ಪ್ಲೆಯನ್ನು ಹೊಂದಿದೆ, ಇದು 165Hz ರಿಫ್ರೆಶ್ ದರ ಮತ್ತು 4,000 ನಿಟ್ಸ್ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಇದರೊಂದಿಗೆ HDR10+ ಮತ್ತು ಡಾಲ್ಬಿ ವಿಷನ್‌ನಂತಹ ವೈಶಿಷ್ಟ್ಯಗಳು ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಹೊರಭಾಗದಲ್ಲಿ 4-ಇಂಚಿನ pOLED LTPO ಕವರ್ ಡಿಸ್‌ಪ್ಲೇ ಇದ್ದು, ಇದು 1,272 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 3,000 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಈ ಡಿಸ್‌ಪ್ಲೆಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್‌ನಿಂದ ರಕ್ಷಿಸಲ್ಪಟ್ಟಿದೆ ಮತ್ತು 165Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ. ತೆರೆದಾಗ, ಈ ಫೋನ್ 73.99 x 171.48 x 7.19mm ಅಳತೆ ಮತ್ತು 199g ತೂಕವನ್ನು ಹೊಂದಿದೆ.

ಭಾರತದಲ್ಲಿ ಮೊಟೊರೊಲಾ ಕಂಪೆನಿಯ ಪೋಲ್ಡೆಬಲ್ ಫೋನ್ Razr 60 Ultra ಬಿಡುಗಡೆ!

ಕಾರ್ಯಕ್ಷಮತೆಗಾಗಿ, ಈ Motorola Razr 60 Ultra ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 16GB LPDDR5X RAM ಮತ್ತು 512GB UFS 4.1 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಹಲೋ UI ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮೂರು ಪ್ರಮುಖ ಓಎಸ್ ಅಪ್‌ಗ್ರೇಡ್‌ಗಳು ಹಾಗೂ ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಭರವಸೆಯನ್ನು ನೀಡಲಾಗಿದೆ. ಇನ್ನು ಈ ಫೋನ್ ಮೋಟೋ AI 2.0 ಸೂಟ್ ವೈಶಿಷ್ಟ್ಯಗಳನ್ನು ಮತ್ತು ಎಡಭಾಗದಲ್ಲಿ ಮೀಸಲಾದ ಮೋಟೋ AI ಕೀಲಿಯನ್ನು ಸಹ ಒಳಗೊಂಡಿದೆ. ಬ್ಯಾಟಿ ವಿಭಾಗದಲ್ಲಿ, 4,700mAh ಬ್ಯಾಟರಿಯನ್ನು ಹೊಂದಿರುವ ಈ ಫೋನ್ 68W ವೈರ್ಡ್ ಟರ್ಬೊಪವರ್, 30W ವೈರ್‌ಲೆಸ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Motorola Razr 60 Ultra ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ (f/1.8 ಅಪರ್ಚರ್ ಮತ್ತು OIS ನೊಂದಿಗೆ) ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ (f/2.0 ಅಪರ್ಚರ್‌ನೊಂದಿಗೆ) ಇವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು (f/2.0 ಅಪರ್ಚರ್‌ನೊಂದಿಗೆ) ನೀಡಲಾಗಿದೆ. ಭದ್ರತೆಗಾಗಿ, ಫೇಸ್ ಅನ್‌ಲಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ. ಸುರಕ್ಷತೆಗಾಗಿ ಈ ಫೋನ್ IP48 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನ ಪ್ರತಿರೋಧವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಪೋರ್ಟ್ ನಂತಹ ವೈಶಿಷ್ಟ್ಯಗಳಿವೆ.

Motorola Razr 60 Ultra ಫೋನ್ ಬೆಲೆ, ಆಫರ್ ಮತ್ತು ಲಭ್ಯತೆ,
ಭಾರತದಲ್ಲಿMotorola Razr 60 Ultra ಫೋನ್ 16GB RAM ಮತ್ತು 512GB ಸಂಗ್ರಹಣೆಯ ಏಕೈಕ ಸಂರಚನೆಯಲ್ಲಿ ಲಭ್ಯವಿದ್ದು, ಇದರ ಬೆಲೆಯನ್ನು ರೂ. 99,999 ಎಂದು ಕಂಪನಿಯು ತಿಳಿಸಿದೆ. ಆದರೆ, ಆಯ್ದ ಬ್ಯಾಂಕ್‌ಗಳ ಗ್ರಾಹಕರು 10,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆದು ಈ ಫೋನ್ ಅನ್ನು ರೂ. 89,999 ಕ್ಕೆ ಖರೀದಿಸಬಹುದು. ಅಲ್ಲದೆ, ಕೆಲವು ಗ್ರಾಹಕರಿಗೆ ತಿಂಗಳಿಗೆ ರೂ. 7,500 ರಿಂದ ಪ್ರಾರಂಭವಾಗುವ 12 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆಗಳು ಲಭ್ಯವಿರುತ್ತವೆ. ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ರೂ. 749 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಟಿವಿ, ಜಿಯೋಐಕ್ಲೌಡ್‌ನಂತಹ ಸುಮಾರು 15,000 ರೂಪಾಯಿಗಳ ಮೌಲ್ಯದ ಪ್ರಯೋಜನಗಳು ದೊರೆಯುತ್ತವೆ. ಇದರೊಂದಿಗೆ, 36 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಯೋಜನೆಗಳೊಂದಿಗೆ 10GB ಡೇಟಾ ವೋಚರ್‌ಗಳನ್ನು ಸಹ ಪಡೆಯಬಹುದು.ಈ ಸ್ಮಾರ್ಟ್‌ಫೋನ್ ಮೌಂಟೇನ್ ಟ್ರಯಲ್, ರಿಯೊ ರೆಡ್ ಮತ್ತು ಸ್ಕಾರಬ್ ಎಂಬ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಇದೇ ಮೇ 21 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್, ಮೊಟೊರೊಲಾ ಅಧಿಕೃತ ವೆಬ್‌ಸೈಟ್, ರಿಲಯನ್ಸ್ ಡಿಜಿಟಲ್ ಮತ್ತು ಆಯ್ದ ಆಫ್‌ಲೈನ್ ಮಳಿಗೆಗಳ ಮೂಲಕ ಈ ಫೋನ್ ಅನ್ನು ಖರೀದಿಸಬಹುದು ಎಂದು ಮೊಟೊರೊಲಾ ತಿಳಿಸಿದೆ.

Best Mobiles in India

English summary
Motorola Razr 60 Ultra features a 4,700mAh battery that supports 68W wired TurboPower, 30W wireless charging, and 5W reverse charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+