ಮಾರ್ಚ್‌ 16ಕ್ಕೆ ಮೊಟೊರೊಲಾ ರೇಜರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ವಲಯದಲ್ಲಿ ದಿನದಿಂದ ದಿನಕ್ಕೆ ಭಾರಿ ಬದಲಾವಣೆಗಳಾಗುತ್ತಿವೆ. ತಂತ್ರಜ್ಞಾನ ಮುಂದುವರೆದಂತೆ ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಸ್ಮಾರ್ಟ್‌ ಆಗುತ್ತಿವೆ. ಪ್ರಾರಂಭದಲ್ಲಿ ಅಂಗೈ ಅಗಲ ಗಾತ್ರವಿದ್ದ ಸ್ಮಾರ್ಟ್‌ಫೋನ್‌ಗಳು ಇಂದು ಫೊಲ್ಡೇಬಲ್‌ ಮಾದರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಸಾಕಷ್ಟು ವೈವಿಧ್ಯಮಯದಿಂದ ಕೂಡಿರುವ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡ್ತಿವೆ. ಇದೀಗ ಅಮೆರಿಕದ ಸ್ಮಾರ್ಟ್‌ಫೋನ್‌ ಕಂಪೆನಿ ಮೊಟೊರೊಲಾ ತನ್ನ ಹೊಸ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿದೆ.

ಹೌದು

ಹೌದು, ಜನಪ್ರಿಯ ಮೊಬೈಲ್‌ ತಯಾರಕ ಕಂಪೆನಿ ಮೊಟೊರೊಲಾ ತನ್ನ ಹೊಸ ಮೊಟೊರೊಲಾ ರೇಜರ್‌ ಫೊಲ್ಡೇಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಅಲ್ಲದೆ ಇದೇ ಮಾರ್ಚ್‌ 16 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 710 SoC ಪ್ರೊಸೆಸರ್‌ ಹೊಂದಿದೆ. ಅಲ್ಲದೆ ಉತ್ತಮ ಡಿಸ್‌ಪ್ಲೇ ವಿನ್ಯಾಸವನ್ನ ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಮೊಟೊರೊಲಾ ರೇಜರ್‌ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ 2142 x 876 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ 6.2 ಇಂಚಿನ P-OLED ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಅನ್ನು ಫೊಲ್ಡ್‌ ಮಾಡಿದಾಗ ಮೇಲ್ಭಾಗದಲ್ಲಿ ನಾಚ್ ಕಟೌಟ್‌ವಿನ್ಯಾಸವನ್ನ ನೀಡಲಾಗಿದ್ದು, 2.7 ಇಂಚಿನ G-OLED ಸ್ಕ್ರಿನ್‌ ಡಿಸ್‌ಪ್ಲೇ ಅನ್ನು ನೀಡಲಾಗಿದೆ. ಈ ಡಿಸ್‌ಪ್ಲೇ ಫೋನ್‌ ಅನ್ನು ಫೊಲ್ಡ್‌ ಮಾಡಿದಾಗ ಕರೆ ಅಥವಾ ಸಂದೇಶಗಳು ಬಂದರೆ ಉತ್ತರಿಸಲು ಹಾಗೂ ವೀಕ್ಷಿಸಲು ನೇರವಾಗುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 21:9 ರಚನೆಯ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 710 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಆದರೆ ಎಷ್ಟು GB ವರೆಗೆ ವಿಸ್ತರಿಸಬಹುದು ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಮೊಟೊರೊಲಾ ರೇಜರ್‌ ಫೊಲ್ಡೇಬಲ್‌ ಸ್ಮಾರ್ಟ್‌ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಈ ಕ್ಯಾಮೆರಾ 16 ಮೆಗಾ ಪಿಕ್ಸೆಲ್‌ TOF 3D ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಜೊತೆಗೆ ಡ್ಯುಯೆಲ್‌ ಎಲ್‌ಇಡಿ ಪ್ಲ್ಯಾಶ್‌ ಅನ್ನು ನೀಡಲಾಗಿದೆ. ಅಲ್ಲದೆ ಇದರಲ್ಲಿ ಗೈರೊಸ್ಕೋಪ್-ಆಧಾರಿತ ಎಲೆಕ್ಟ್ರಾನಿಕ್ ಇಮೇಜ್ ಸ್ಟ್ಯಾಬಿಲೈಜೇಶನ್‌ ಅನ್ನು ಸಹ ಅಳವಡಿಸಲಾಗಿದೆ. ಇದಲ್ಲದೆ 5ಮೆಗಾ ಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಈ ಸ್ಮಾರ್ಟ್‌ಫೋನ್‌ 2,510mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ v5.0, ಹಾಟ್‌ಸ್ಪಾಟ್‌, ವೈಫೈ, GPS, ಟೈಪ್‌ಸಿ ಪೋರ್ಟ್‌, ಅನ್ನು ಬೆಂಬಲಿಸಲಿದೆ. ಇದಲ್ಲದೆ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ $1,499 (ಅಂದಾಜು 1,09,585.ರೂ) ಇರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ನಾಯರ್‌ ಬ್ಲಾಕ್‌, ಬ್ಲಶ್‌ ಗೋಲ್ಡ್‌ ಕಲರ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
The India launch of the Motorola RAZR comes more than three months after the global announcement. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X