ಮೊಟೊರೊಲಾ ಸಂಸ್ಥೆಯಿಂದ ತ್ರಿ ಇನ್ ಒನ್ ಇಯರ್‌ಫೋನ್ ಬಿಡುಗಡೆ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ ಸಂಸ್ಥೆ ತನ್ನ ಗುಣಮಟ್ಟದ ಇಯರ್‌ಫೋನ್‌ಗಳಿಗೂ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಮೊಟೊರೊಲಾ ತನ್ನ ಹೊಸ ಟೆಕ್ 3 ಟ್ರೈಕ್ಸ್ ಥ್ರೀ ಇನ್ ಒನ್ ಇಯರ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್ ಅನ್ನು ಬಳಕೆದಾರರು ಅವರ ಆದ್ಯತೆಗಳ ಆಧಾರದ ಮೇಲೆ wires, wireless, ಮತ್ತು ಟ್ರೂ ವಾಯರ್‌ಲೆಸ್ ಮಾದರಿಯಲ್ಲಿ ಬಳಸುವ ಅವಕಾಶ ನೀಡಿದೆ. ಅಲ್ಲದೆ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಅನ್ನು TWS ಇಯರ್‌ಬಡ್ಸ್‌ಗಳಾಗಿ ಬಳಸಬಹುದಾಗಿದೆ.

ಹೌದು, ಮೊಟೊರೊಲಾ ಸಂಸ್ಥೆ ತನ್ನ ಹೊಸ ಟೆಕ್ 3 ಟ್ರೈಕ್ಸ್ ಥ್ರೀ ಇನ್ ಒನ್ ಇಯರ್‌ಫೋನ್‌ಗಳನ್ನ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಇಯರ್‌ಫೋನ್‌ಗಳನ್ನು ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ಆಗಿಯೂ ಸಹ ಬಳಸಬಹುದು. ಅಷ್ಟೇ ಅಲ್ಲ ಬಳಕೆದಾರರು ಬಯಸಿದಲ್ಲಿ ನೆಕ್‌ಬ್ಯಾಂಡ್ ಅಥವಾ ವೈರ್ಡ್ ಹೆಡ್ಸೆಟ್ ಆಗಿ ಸಹ ಬಳಸುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, 18 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಫೋನ್ ವಿಶೇಷತೆ ಏನೆಂದರೆ ಇದನ್ನು ವೈರ್ಡ್ ಅಥವಾ ವಾಯರ್‌ಲೆಸ್ ಇಯರ್‌ಬಡ್‌ಗಳಾಗಿ ಬಳಸಲು ಅವಕಾಶ ನೀಡಿರುವುದು. ಅಲ್ಲದೆ ಈ ಇಯರ್‌ಬಡ್ಸ್ ವಿಶಿಷ್ಟವಾದ ಹೈಬ್ರಿಡ್ ವಿನ್ಯಾಸವನ್ನು ಹೊಂದಿದೆ. ಇದು ವೈರ್ಡ್, ವಾಯರ್‌ಲೆಸ್ ಮತ್ತು ಟ್ರೂಲಿ ವಾಯರ್‌ಲೆಸ್ ಅನ್ನು ಮೂರು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳುತ್ತದೆ. TWS ಮೋಡ್‌ನಲ್ಲಿ, ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಬಡ್‌ಗಳು ಬ್ಲೂಟೂತ್ 5.0 ಕನೆಕ್ಟಿವಿಟಿ ಸಹಾಯದಿಂದ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಅಲ್ಲದೆ ಸ್ಪೋರ್ಟ್ ಲೂಪ್ ಎಂದು ಕರೆಯಲ್ಪಡುವ ವಾಯರ್‌ಲೆಸ್ ಮೋಡ್, ಇಯರ್‌ಬಡ್‌ಗಳನ್ನು ನೆಕ್‌ಬ್ಯಾಂಡ್ ಮಾದರಿಯಲ್ಲಿ ಬಳಸುವುದಕ್ಕೆ ಅನುವು ಮಾಡಿಕೊಡುತ್ತದೆ. ಇನ್ನು ಬ್ಯಾಟರಿ ಚಾರ್ಜ್ ಅನ್ನು ಬಳಸದ ನೇರ ಪ್ಲಗ್-ಇನ್ ಮೋಡ್‌ನಲ್ಲಿ ಇಯರ್‌ಫೋನ್‌ಗಳನ್ನು ಬಳಸಲು ಹೆಚ್ಚುವರಿ ಕೇಬಲ್ ನಿಮಗೆ ಅನುಮತಿಸುತ್ತದೆ. ಈ ಕೇಬಲ್ ಮ್ಯಾಗ್ನೆಟಿಕ್ ಡಾಕ್ ಮೂಲಕ ಸ್ಪೋರ್ಟ್ ಲೂಪ್ ಕನೆಕ್ಟಿವಿಟಿಯನ್ನು ಹೊಂದಿದೆ. ಇದಲ್ಲದೆ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಫೋನ್‌ಗಳು ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯ್ಸ್ ಅಸಿಸ್ಟೆಟೆಂಟ್ ಮತ್ತು ವೆರ್ವ್ ಲೈಫ್ ಆಪ್ ಮೂಲಕ ಸ್ಮಾರ್ಟ್‌ಫೋನ್ ಹೊಂದಿರುವ ಜೋಡಿಗಳನ್ನು ಬೆಂಬಲಿಸುತ್ತವೆ.

ಈ ಇಯರ್‌ಫೋನ್ ಕಳೆದು ಹೋದರೆ ಇದನ್ನು ಕಂಡುಹಿಡಿಯಲು ಇಯರ್ ಡಿಟೆಕ್ಟ್ ಫೀಚರ್ಸ್ ಅನ್ನು ಸಹ ನೀಡಲಾಗಿದೆ. ಜೊತೆಗೆಮೊಟೊರೊಲಾ ಟೆಕ್ 3 ಟ್ರೈಕ್ಸ್ ಅನ್ನು ಪ್ಲಗ್ ಇನ್ ಮಾಡಿದಾಗ ಆನ್ ಮಾಡುತ್ತದೆ ಮತ್ತು ಎರಡೂ ಇಯರ್‌ಬಡ್‌ಗಳನ್ನು ಕಿವಿಯಿಂದ ತೆಗೆದುಹಾಕಿದಾಗ ಆಫ್ ಮಾಡುತ್ತದೆ. ಅಲ್ಲದೆ IPX5 ವಾಟರ್‌ಪ್ರೂಪ್ ವ್ಯವಸ್ಥೆಯನ್ನು ಹೊಂದಿದೆ.

ಇನ್ನು ಹೊಸ ಮೊಟೊರೊಲಾ ಟೆಕ್ 3 ಟ್ರೈಎಕ್ಸ್ ಇಯರ್‌ಫೋನ್‌ಗಳು ಭಾರತದಲ್ಲಿ 9,999 ರೂ.ಬೆಲೆಯನ್ನು ಹೊಂದಿವೆ. ಆದರೆ ಫ್ಲಿಪ್‌ಕಾರ್ಟ್ ನ ದಿ ಬಿಗ್ ಬಿಲಿಯನ್ ಡೇಸ್ ಸೇಲ್ ಪ್ರಯುಕ್ತ ರಿಯಾಯಿತಿ ದರದಲ್ಲಿ ಕೇವಲ 5,999 ರೂ.ಗೆ ಲಭ್ಯವಾಗಲಿದೆ. ಇನ್ನು ಈ ತ್ರಿ ಇನ್ ಒನ್ ಇಯರ್‌ಫೋನ್ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications