Home
ಸುದ್ದಿಜಾಲ

ಮೊಜಿಲಾ ದಿಂದ ಹೊಸ ಮಾದರಿಯ ಫೈರ್ ಫಾಕ್ಸ್ ಬ್ರೌಸರ್

By Lekhaka

ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಮಾದರಿಯ ಬ್ರೌಸರ್ ಲಾಂಚ್ ಆಗಿದೆ, ಮೊಜಿಲಾ ಹೊಸದಾಗಿ ಫೈರ್ ಫಾಕ್ಸ್ ಕ್ವಾಟಮ್ ಎನ್ನುವ ನೂತನ ಬ್ರೌಸರ್ ಒಂದನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಈ ಬ್ರೌಸರ್ ಕೋರ್ ಇಂಜಿನ್ ಅನ್ನು ಹೊಂದಿದ್ದು, ಫೈರ್ ಫಾಕ್ಸ್ ಗಿಂತಲೂ ಎರಡು ಪಟ್ಟು ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯೇ ತಿಳಿಸಿದೆ.

ಮೊಜಿಲಾ ದಿಂದ ಹೊಸ ಮಾದರಿಯ ಫೈರ್ ಫಾಕ್ಸ್ ಬ್ರೌಸರ್

ಫೈರ್ ಫಾಕ್ಸ್ ಕ್ವಾಟಮ್ ಬ್ರೌಸರ್ ಹೆಚ್ಚು ಪೇಜ್ ಗಳನ್ನು ಸರ್ಫ್ ಮಾಡಲು ಅನುವು ಮಾಡಿಕೊಡಲಿದೆ. ಈ ಬ್ರೌಸರ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರೌಸರ್ ಗಳಿಗಿಂತ ವಿಭಿನ್ನವಾಗಿದೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರ ಬಳಕೆಯು ಸುಲಭವಾಗಿದ್ದು, ಬಳಕೆದಾರರ ಸ್ನೇಹಿಯಾಗಿವರ್ತಿಸಲಿದೆ. ಅಲ್ಲದೇ ವಿನ್ಯಾಸವು ಉತ್ತಮವಾಗಿದ್ದು, ಬಳಕೆ ಮಾಡುವ ಸಂದರ್ಭದಲ್ಲಿ ಹೊಸ ಅನುಭವನ್ನು ನೀಡಲಿದೆ.

ಈಗಾಗಲೇ ಅಮೆರಿಕಾ ಮತ್ತು ಕೆನೆಡಾದಲ್ಲಿ ಹೆಚ್ಚಿನ ಮಂದಿಯೂ ಫೈರ್ ಫಾಕ್ಸ್ ಕ್ವಾಟಮ್ ಬ್ರೌಸರ್ ಬಳಕೆ ಶುರು ಮಾಡಿದ್ದು, ಹೆಚ್ಚಿನ ಮಂದಿ ಗೂಗಲ್ ಡಿಫಲ್ಟ್ ಸರ್ಚ್ ಆಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕಡಿಮೆ ಮತ್ತು ಡೊಡ್ಡ ಪ್ರಮಾಣದ ಡೇಟಾ ಹೊಂದಿರುವ ಪೇಜ್ ಗಳನ್ನು ಸರ್ಫ್ ಮಾಡುವುದು ಈ ಬ್ರೌಸರ್ ನಲ್ಲಿ ಸುಲಭವಾಗಿದೆ ಈ ಹಿನ್ನಲೆಯಲ್ಲಿ ಹೆಚ್ಚಿನ ಮಂದಿಯನ್ನು ಆಕರ್ಷಿಸುತ್ತಿದೆ.

ಅಲ್ಲದೇ ನೋಡಲು ಸಹ ಉತ್ತಮ ವಿನ್ಯಾಸ ಹೊಂದಿದೆ ಎನ್ನಲಾಗಿದ್ದು, ಫೈರ್ ಫಾಕ್ಸ್ ಕ್ವಾಟಮ್ ಬ್ರೌಸರ್ ಈ ಹಿಂದಿನ ಫೈರ್ ಫಾಕ್ಸ್ ಚಹರೆಯನ್ನು ಕೊಂಚ ಪ್ರಮಾಣದಲ್ಲಿ ಮೈ ಗೂಡಿಸಿಕೊಂಡಿದೆ. ಬಳಕೆದಾರರಿಗೆ ತಮಗೆ ಬೇಕಾದ ಮಾದರಿಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲು ಬದಲಾಯಿಸಿಕೊಳ್ಳಬಹುದಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಕ್ರೋಮ್ ಬ್ರೌಸರ್ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಗೂಗಲ್ ಕಾರಣ ಎಂದರೂ ತಪ್ಪಾಗುವುದಿಲ್ಲ. ಹೀಗಾಗಿ ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಬ್ರೌಸರ್ ಲಾಂಚ್ ಮಾಡಿದೆ ಎನ್ನುವ ಮಾತು ಕೇಳಿಬಂದಿದೆ.

Best Mobiles in India

English summary
Mozilla has just launched its latest browser called Firefox Quantum.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+