ಹೊಸ ಮಾದರಿಯ ಫಾಗ್ ಶಿಪ್ ಬ್ರೌಸರ್: ಮೌಜಿಲಾ ಫಿನಿಕ್ಸ್...!
ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಅಧಿಕವಾಗಿದ್ದು, ಬೇರೆ ಎಲ್ಲಾ OS ಗಳಿಗಿಂತಲೂ ಆಂಡ್ರಾಯ್ಡ್ OS ಬಳಕೆಯೂ ಹೆಚ್ಚಾಗಿರುವ ಕಾರಣದಿಂದಾಗಿ ಆಂಡ್ರಾಯ್ಡ್ ಆಪ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ವೆಬ್ ಬ್ರೌಸರ್ ನಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಮೊಜಿಲಾ ಆಂಡ್ರಾಯ್ಡ್ ಗಾಗಿಯೇ ಹೊಸದೊಂದು ಬ್ರೌಸರ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಿಂದಾಗಿ ಆಂಡ್ರಾಯ್ಡ್ ವೆಬ್ ಬ್ರೌಸಿಂಗ್ ಸಾಕಷ್ಟು ಸುಲಭವಾಗಲಿದೆ.

ಫಿನಿಕ್ಸ್ ಹೆಸರಿನಲ್ಲಿ ಆಂಡ್ರಾಯ್ಡ್ ವೆಬ್ ಬ್ರೌಸರ್ ಅಭಿವೃದ್ಧಿಪಡಿಸಲು ಮುಂದಾಗಿದೆ. ಶೀಘ್ರವೇ ಲಾಂಚ್ ಆಗಲಿರುವ ಬ್ರೌಸರ್ ಕುರಿತು ಸಾಕಷ್ಟು ನಿರೀಕ್ಷೆಗಳು ನಿರ್ಮಾಣವಾಗಿದೆ. ಇದಾಗಲೇ ಮಾರುಕಟ್ಟೆಯಲ್ಲಿ ಹಲವು ಬ್ರೌಸರ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಹೊಸದಾಗಿ ಬರುತ್ತಿರುವ ಫಿನಿಕ್ಸ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ.
ಹೊಸದಾಗಿ ಮಾರುಕಟ್ಟೆಗೆ ಬರಲಿರುವ ಬ್ರೌಸರ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಡದಂತಹ ಮೋಜಿಲಾ, ಹೊಸ ಮಾದರಿಯ ಬ್ರೌಸಿಂಗ್ ಅನುಭವನ್ನು ನೀಡಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿರುವ ಹಲವು ಬ್ರೌಸರ್ ಗಳಿಗೆ ಬೇಡಿಕೆಯೂ ಕಡಿಮೆಯಾಗುವ ಸಾಧ್ಯತೆಯೂ ದಟ್ಟವಾಗಿದೆ.
ಈಗಾಗಲೇ ಪ್ಲೇ ಸ್ಟೋರಿನಲ್ಲಿ ದೊರೆಯುತ್ತಿರುವ ದೊರೆಯುತ್ತಿರುವ ಮೊಜಿಲಾ ಫೈರ್ ಫಾಕ್ಸ್ ಸುಮಾರು 100 ಮಿಲಿಯನ್ ಡೌನ್ ಲೋಡ್ ಅನ್ನು ಕಂಡಿದೆ. ಇದೇ ಹಿನ್ನಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಕೆದಾರರಿಗೆ ಇನ್ನಷ್ಟು ದೊಡ್ಡ ಪ್ರಮಾಣದ ಆಯ್ಕೆಗಳನ್ನು ಹೊಂದಿರುವ ಬ್ರೌಸರ್ ಅನ್ನು ನೀಡಲು ಮುಂದಾಗಿದೆ.

ಈಗಾಗಲೇ ಭವಿಷ್ಯದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಮೋಜಿಲಾ ಫಿನಿಕ್ಸ್ ಹೊಸ ಮಾದರಿಯ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಿಕೊಳ್ಳಿದೆ ಎನ್ನಲಾಗಿದೆ.
ಫಾಗ್ ಫಿಪ್ ಬ್ರೌಸರ್:
ಇದು ಹೊಸ ಮಾದರಿಯಲ್ಲಿ ಫಾಗ್ ಫಿಪ್ ಬ್ರೌಸರ್ ಎನ್ನಲಾಗಿದೆ. ಇದರಲ್ಲಿ ಹೊಸ ಹೊಸ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಹೆಚ್ಚಿನ ಸೆಕ್ಯೂರಿಟಿಯನ್ನು ನೀಡಲಿದೆ. ಆನ್ ಲೈನ್ ವಹಿವಾಟು ನಡೆಸಲು ಇದು ಹೇಳಿ ಮಾಡಿಸಿದಂತೆ ಇದು ಕಾರ್ಯನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.


Click it and Unblock the Notifications