Just In
Don't Miss
- Finance
ರಿಲಯನ್ಸ್ ಜಿಯೋ ತ್ರೈಮಾಸಿಕ ನಿವ್ವಳ ಲಾಭ ಶೇ. 15.5ರಷ್ಟು ಏರಿಕೆ
- Movies
ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
- News
ಅಕ್ರಮ ಕಲ್ಲು ಕ್ವಾರಿಗಳಿಗೆ ಮೂಗುದಾರ ಹಾಕಲು ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ
- Automobiles
ಟಾಟಾ ಬಹುನೀರಿಕ್ಷಿತ ಆಲ್ಟ್ರೊಜ್ ಐ-ಟರ್ಬೊ ವರ್ಷನ್ ಬಿಡುಗಡೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಎಂಎಸ್ಐ' ಸಂಸ್ಥೆಯಿಂದ 2020ಕ್ಕೆ ಮಿನಿ ಎಲ್‌ಇಡಿ ಲ್ಯಾಪ್‌ಟಾಪ್ ಲಾಂಚ್!
ಪ್ರಸ್ತುತ ಮಾರುಕಟ್ಟೆಯಲ್ಲಿ ನಾನಾ ಬಗೆಯ ಲ್ಯಾಪ್‌ಟಾಪ್‌ಗಳು ಸಿಗುತ್ತವೆ. ಇತ್ತಿಚೀಗಂತೂ ಸಾಕಷ್ಟು ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗ ಲ್ಯಾಪ್‌ಟಾಪ್ ಬಳಕೆದಾರರ ನೆಚ್ಚಿನ ಕಂಪೆನಿಗಳಲ್ಲಿ ಒಂದಾದ ಮೈಕ್ರೋ-ಸ್ಟಾರ್ ಇಂಟರ್ನ್ಯಾಷನಲ್(MSI) ಕಂಪೆನಿ ತನ್ನ ಹೊಸ ಆವೃತ್ತಿಯ ಲ್ಯಾಪ್‌ಟಾಪ್ ಎಂಎಸ್ಐ 17 ಎಂದು ಹೆಸರಿಸಿದೆ. ಪರಿಚಯಿಸಿದೆ. ಅಷ್ಟೇ ಅಲ್ಲ ಇದು ಸಿಇಎಸ್ ಲ್ಯಾಪ್‌ಟಾಪ್ ಆಗಿದ್ದು 2020 ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗ್ತಿದೆ.

ಹೌದು, ಎಂಎಸ್‌ಐ ಕಂಪೆನಿ ತನ್ನ ಮುಂದಿನ ಆವೃತ್ತಿಯ ಹೊಸ ಮಾದರಿಯ ಲ್ಯಾಪ್‌ಟಾಪ್ ಎಂಎಸ್ಐ 17 ಅನ್ನು 2020ರಲ್ಲಿ ಬಿಡುಗಡೆ ಮಾಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ನ ಪ್ರಮುಖ ವಿಶೇಷತೆಯೆಂದರೆ ಡಿಸ್‌ಪ್ಲೇ ವಿನ್ಯಾಸ ಎನ್ನಲಾಗಿದ್ದು, ಮಿನಿ ಎಲ್ಇಡಿ ಡಿಸ್‌ಪ್ಲೇ ಯನ್ನ ಹೊಂದಿರುವ ಮೊದಲ ಲ್ಯಾಪ್‌ಟಾಪ್ ಇದಾಗಿರಲಿದೆ ಎನ್ನಲಾಗ್ತಿದೆ. ಮೊದಲ ಎಲ್‌ಇಡಿ ವಿನ್ಯಾಸದ ಡಿಸ್‌ಪ್ಲೇ ಲ್ಯಾಪ್‌ಟಾಪ್ ಆಗಿರೊದ್ರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್ ಮಾಡೋ ಸೂಚನೆ ನೀಡಿದೆ.

ಇನ್ನು ಎಂಎಸ್ಐ 17 ಲ್ಯಾಪ್‌ಟಾಪ್ ನಲ್ಲಿ ನೀಡಿರುವ ಮಿನಿ ಎಲ್ಇಡಿ ತಂತ್ರಜ್ಞಾನ ಉತ್ತಮ್ಮ ವಿನ್ಯಾಸವಾಗಿದ್ದು, ಇದು ಇತರೆ ಡಿಸ್‌ಪ್ಲೇ ಗಳಿಗಿಂತ ಉತ್ತಮವಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಂತ ಮಿನಿ ಎಲ್ಇಡಿ ಹೊಚ್ಚ ಹೊಸ ತಂತ್ರಜ್ಞಾನವೇನು ಅಲ್ಲ ಈಗಾಗಲೇ ಕೆಲವು ಟಿವಿ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನ ಅಳವಡಿಸಲಾಗಿದೆ. ಆದರೆ ಲ್ಯಾಪ್‌ಟಾಪ್‌ಗಳಲ್ಲಿ ಇದೇ ಮೊದಲು ಎನ್ನಬಹುದಾಗಿದ್ದು, ಹೆಸರೇ ಸುಚಿಸುವಂತೆ ಈ ಲ್ಯಾಪ್‌ಟಾಪ್ "17" ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿದೆ.

ಅಲ್ಲದೆ ಸೂಕ್ಷ್ಮವಾಗಿ ಗಮನಿಸಿದರೆ, ಎಂಎಸ್‌ಐ ಕ್ರಿಯೇಟರ್ 17 ನಲ್ಲಿನ 17 ಇಂಚಿನ ಡಿಸ್‌ಪ್ಲೇ 1,000 ನಿಟ್‌ಗಳಷ್ಟು ಗರಿಷ್ಠ ಬ್ರೈಟ್‌ನೆಸ್ ಅನ್ನ ಒಳಗೊಂಡಿದೆ. ಅಲ್ಲದೆ ಇದು ಮಿನಿ ಎಲ್ಇಡಿ ಬ್ಯಾಕ್ಲೈಟಿಂಗ್, 240 ಜೋನ್‌ನಷ್ಟು ಲೋಕಲ್ ಡಿಮ್ಮಿಂಗ್, ಬರ್ನ್-ಇನ್ ಅವಕಾಶ, ಮತ್ತು ಡಿಸ್ಪ್ಲೇ ಎಚ್‌ಡಿಆರ್ 1000 ಗೆ ಬೆಂಬಲವನ್ನು ಸಹ ನೀಡಲಿದೆ. ಇದರ ಹೊರತಾಗಿ, ಎಂಎಸ್ಐ ಪ್ರತಿಶತ ಡಿಸಿಐ-ಪಿ 3ಬಣ್ಣಗಳಿಗೆ ಅವಕಾಶವನ್ನ ನೀಡುತ್ತದೆ.

ಇನ್ನು ಈ ಲ್ಯಾಪ್‌ಟಾಪ್‌ನ ಗರಿಷ್ಠ ಹೊಳಪು ಎಚ್‌ಡಿಆರ್ ಬೆಂಬಲವನ್ನ ಹೊಂದಿರುವುದರಿಂದ ಇತರ ಡಿಸ್‌ಪ್ಲೇ ಗಿಂತ ಇದರ ಬ್ರೈಟ್‌ನೆಸ್ ಎರಡು ಪಟ್ಟು ಹೆಚ್ಚಾಗಿದೆ. ಈ ಎಲ್ಲಾ ವಿಶೇಷತೆಗಳಿಂದ ಸಾಮಾನ್ಯ ಎಲ್ಇಡಿ ಅಥವಾ ಒಎಲ್ಇಡಿ ಡಿಸ್‌ಪ್ಲೇಗಳಿಗಿಂತ ಎಂಎಸ್‌ಐ ಲ್ಯಾಪ್‌ಟಾಪ್‌ನ ಮಿನಿ ಎಲ್ಇಡಿ ಡಿಸ್‌ಪ್ಲೇ ಉತ್ತಮವಾಗಿದೆ ಎಂದು ಎಂಎಸ್ಐ ಹೇಳಿಕೊಂಡಿದೆ. ಜೊತೆಗೆ ಈ ಎಂಎಸ್‌ಐ ಕ್ರಿಯೇಟರ್ 17 4K ರೆಸಲ್ಯೂಶನ್ ಹೊಂದಿದ್ದು ಹೊಸ ತಂತ್ರಜ್ಞಾನದ ಸಹಾಯದಿಂದ ಬಹಳ ತೆಳ್ಳಗೆ, ಮತ್ತು ಹೆಚ್ಚು ಶಕ್ತಿಯನ್ನ ಈ ಲ್ಯಾಪ್‌ಟಾಪ್ ಒಳಗೊಂಡಿದೆ.

ಈ ಲ್ಯಾಪ್‌ಟಾಪ್ ಇತ್ತೀಚಿನ ಸಿಪಿಯು ಮತ್ತು ಜಿಪಿಯು ಔಟ್‌ಪುಟ್ ಅನ್ನು ಸಹ ಬೆಂಬಲಿಸಲಿದ್ದು. ಥಂಡರ್ಬೋಲ್ಟ್ ಪೋರ್ಟ್ ಜೊತೆಗೆ ಯುಹೆಚ್ಎಸ್ -3 ಎಸ್ಡಿ ಕಾರ್ಡ್ ರೀಡರ್ ಅನ್ನು ಸಹ ಒಳಗೊಂಡಿದೆ. ಹೀಗೆ ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿರುವ ಈ ಲ್ಯಾಪ್‌ಟಾಪ್ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು 2020ಕ್ಕೆ ಬಿಡುಗಡೆಯಾಗಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190