ದಕ್ಷತೆ ಹೆಚ್ಚಿಸಲು ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ವಿಲೀನ!

|

ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸರಿಯಾದ ಪೈಪೋಟಿ ನೀಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳಾದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕಂಪನಿಗಳನ್ನು ವಿಲೀನಗೊಳಿಸಲಾಗುತ್ತದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಸಾವಿರಾರು ಕೋಟಿಗಳಷ್ಟು ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕಂಪನಿಗಳ ವಿಲೀನಗೊಳಿಸುವ ಪ್ರಸ್ತಾವನೆಯ ಕುರಿತು ದೂರಸಂಪರ್ಕ ಇಲಾಖೆಯು ಕಾರ್ಯಪ್ರವೃತ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

 ದಕ್ಷತೆ ಹೆಚ್ಚಿಸಲು ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ವಿಲೀನ!

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಎರಡೂ ಕಂಪನಿಗಳ ಪುನಶ್ಚೇತನಕ್ಕೆ ಅವುಗಳ ವಿಲೀನಗೊಳಿಸುವುದು ಒಂದು ಆಯ್ಕೆಯಾಗಿದೆ ಎಂದು ದೂರಸಂಪರ್ಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಎರಡೂ ಕಂಪನಿಗಳು ನಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡುವುದಕ್ಕೂ ಪರದಾಡುತ್ತಿವೆ. ಹಾಗಾಗಿ, ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಹೇಳಿರುವುದು ವರದಿಯಾಗಿದೆ.

ಎಂಟಿಎನ್‌ಎಲ್‌ ಸಂಸ್ಥೆ ದೆಹಲಿ ಮತ್ತು ಮುಂಬೈನಲ್ಲಿ ಸೇವೆ ನೀಡುತ್ತಿದ್ದರೆ, ದೇಶದ ಉಳಿದ ವೃತ್ತಗಳಲ್ಲಿ ಬಿಎಸ್‌ಎನ್‌ಎಲ್‌ ಕಾರ್ಯನಿರ್ವಹಿಸುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಎಂಟಿಎನ್‌ಎಲ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಕಷ್ಟ. ಹೀಗಾಗಿ ಅದನ್ನು ಬಿಎಸ್‌ಎನ್‌ಎಲ್‌ ಜತೆಗೆ ವಿಲೀನಗೊಳಿಸುವುದೇ ಸೂಕ್ತ. ಈ ಬಗ್ಗೆ ಉನ್ನತ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ವಿಲೀನವಾದರೆ ದಕ್ಷತೆ ಸ್ವಲ್ಪ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ದಕ್ಷತೆ ಹೆಚ್ಚಿಸಲು ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ವಿಲೀನ!

ಖಾಸಾಗಿ ಟೆಲಿಕಾಂ ಸಂಸ್ಥೆಗಳಂತೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗೂ ದಕ್ಷತೆ ಬೇಕಾಗಿದೆ. ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ತಯಾರಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬಿಎಸ್‌ಎನ್‌ಎಲ್ ಮೇಲಾಧಿಕರಿಗಳು ಪ್ರಯತ್ನಿಸಬೇಕು. ಸರ್ಕಾರಿ ಟೆಲಿಕಾಂ ಸಂಸ್ಥೆಯನ್ನು ಉಳಿಸಿಕೊಳ್ಳುವ ಜವಬ್ದಾರಿ ಸರ್ಕಾರದ ಮೇಲಿರುವುದು ನಿಜ. ಆದರೆ ನಷ್ಟದಲ್ಲೇ ಮುಂದುವರೆದ ಯಾವುದೇ ಸಂಸ್ಥೆಯನ್ನು ಹೆಚ್ಚು ದಿನ ದೂಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೋರ್ವರು ಹೇಳಿರುವುದು ವರದಿಯಾಗಿದೆ.

'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!'ಡಿಜಿ ಲಾಕರ್' ಅನ್ನು ಪರಿಗಣಿಸಿ!..ಸಂಚಾರಿ ಪೊಲೀಸರಿಗೆ ಕಮಿಷನರ್ ನಿರ್ದೇಶನ!

ಇನ್ನು ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಎರಡೂ ಕಂಪನಿಗಳಿಗೆ ಪುನಶ್ಚೇತನ ಕೊಡುಗೆಯನ್ನೂ ಸಹ ಇಲಾಖೆ ಸಿದ್ಧಪಡಿಸುತ್ತಿದೆ. ಸ್ವಯಂ ನಿವೃತ್ತಿ ಯೋಜನೆಗಳು, ಆಸ್ತಿ ನಗದೀಕರಣ ಮತ್ತು 4ಜಿ ತರಂಗಾಂತರ ಹಂಚಿಕೆಯ ಮಾರ್ಗಗಳನ್ನು ಪ್ರಸ್ತಾಪಿಸಿದೆ. ಆದರೆ, ದೇಶದಲ್ಲಿ ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಪೈಪೋಟಿ ನೀಡುವಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳು ಯಶಸ್ವಿಯಾಗುತ್ತದೆಯಾ ಎಂಬುದನ್ನು ಕಾದುನೋಡಬೇಕು.

Best Mobiles in India

English summary
Following the merger, MTNL would be converted into a subsidiary of BSNL. The merger would be carried out after resolving issues such as human resources. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X