ಎಂಟಿಎಸ್‌

Posted By: Staff
ಎಂಟಿಎಸ್‌
ಕಾರ್ಬನ್‌ ಮೊಬೈಲ್ಸ್‌ ಹಾಗೂ ಎಂಟಿಎಸ್‌ ಇಂಡಿಯಾ ಸಂಸ್ಥೆಗಳು ಕೈಜೋಡಿಸಿ ನೂತನ ಎಂಟಿಎಸ್‌ ಟರ್ಬೋ ಬಿ121, ಎಂಟಿಎಸ್‌ ಬಝ್‌ ಎಕ್ಸ್‌121 ಹಾಗೂ ಎಂಟಿಎಸ್‌ ರಾಕ್ಸ್ಟಾರ್‌ ವಿ121 ಮಾದರಿಯ ಸಿಡಿಎಂಎ ಮೊಬೈಲ್‌ ಫೋನ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದಹಾಗೆ ನೂತನ ಫೀಚರ್‌ ಫೋನ್ಸ್‌ಗಳು ರೂ.1,999 ಹಾಗೂ ರೂ.2,800 ದರದ ಒಳಗೆ ಮಾರುಕಟ್ಟೆಗೆ ಲಭ್ಯವಾಗಲಿದ್ದು ಫೇಸ್‌ಬುಕ್‌, ಎಂಟಿಎಸ್‌ ಮೂವಿ ಪ್ಲಾನೆಟ್‌, ಮೈ ಎಂಟಿಎಸ್‌ ಪ್ಲಾನೆಟ್‌, ಎಫ್‌ಎಂ ರೇಡಿಯೋ, ವ್ಯಾಪ್‌ ಬ್ರೌಸರ್ ಹಾಗೂ ಕರೆ & ಎಸ್‌ಎಂಎಸ್‌ಗಳನ್ನು ಬ್ಲಾಕ್‌ಲಿಸ್ಟ್‌ ಮಾಡಬಹುದಾದ ಆಕರ್ಶಕ ಫೀಚರ್ಸ್‌ಗಳಿಂದ ಕೂಡಿದೆ.

ಇದಲ್ಲದೆ ಮೊಬೈಲ್‌ ಖರೀದಿಯೊಂದಿಗೆ ಒಂದುತಿಂಗಳ ಉಚಿತ ಫೇಸ್‌ಬುಕ್‌, ಎಂಟಿಎಸ್‌ ಮೂವಿ ಪ್ಲಾನೆಟ್‌ ಹಾಗೂ ವಿಡಿಯೋ ಡೌನ್ಲೋಡ್‌ಗಳಿಗಾಗಿ ಒಂದು ತಿಂಗಳ ಉಚಿತ ಸಸ್ಕ್ರೈಬ್‌ ಪಡೆಯಬಹುದಾಗಿದೆ.

ಮೈ ಎಂಟಿಎಸ್‌ನ ಪ್ಲಾನೆಟ್‌ ಅಪ್ಲಿಕೇಷನ್‌ ಮೂಲಕ ವಾಲ್‌ ಪೇಪರ್‌, ರಿಂಗ್‌ಟೋನ್ಸ್‌ ಹಾಗೂ ಗೇಮ್ಸ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ. ಅಂದಹಾಗೆ ಈ ಅಪ್ಲಿಕೇಷನ್‌ ಮೂರೂ ಮೊಬೈಲ್‌ ಫೋನ್‌ಗಳಲ್ಲಿ ಲಭ್ಯವಿದೆ.

ಎಂಟಿಎಸ್‌
ಎಟಿಎಸ್‌ ಟರ್ಬೋ ಬಿ121 ನಲ್ಲಿ 4.5cm (1.7 ಇಂಚಿನ) TFT ಸ್ಕ್ರೀನ್‌, 1800 mAh ಬ್ಯಾಟರಿ, FM ರೇಡಿಯೋ, ಟಾರ್ಚ್‌ಲೈಟ್‌ ಹಾಗೂ ಫೇಸ್‌ಬುಕ್‌ ಸೌಲಭ್ಯವಿದೆ. ಹಾಗೂ ಎಂಟಿಎಸ್‌ ಬಝ್‌ ಎಕ್ಸ್‌121 ನಲ್ಲಿ Qwerty ಕೀಪ್ಯಾಡ್‌, 5.1 cm (2.0 ಇಂಚಿನ) TFT ಸ್ಕ್ರೀನ್‌, 1.3 MP ಕ್ಯಾಮೆರಾ ಹಾಗೂ ವಿಡಿಯೋ ರೆಕಾರ್ಡಿಂಗ್‌, 1500 mAh ಬ್ಯಾಟರಿ, ಬ್ಲೂಟೂತ್‌, 4 GB ವರೆಗಿನ ಮೆಮೊರಿ ವಿಸ್ತರಣೆ ಹಾಗೂ ಫೇಸ್‌ಬುಕ್‌ ನಂತಹ ಫೀಚರ್ಸ್‌ ಹೊಂದಿದೆ.
ಎಂಟಿಎಸ್‌

ಎಂಟಿಎಸ್‌ ರಾಕ್ಸ್ಟಾರ್‌ ವಿ121 ನಲ್ಲಿ ನಲ್ಲಿ 6.1cm (2.4 ಇಂಚಿನ) TFT ಸ್ಕ್ರೀನ್‌, 1.3 MP ಕ್ಯಾಮೆರಾ ಹಾಗೂ ವಿಡಿಯೋ ರೆಕಾರ್ಡಿಂಗ್‌, ಮ್ಯೂಸಿಕ್‌ ಹಾಗೂ ವಿಡಿಯೋ ಪ್ಲೇಯರ್‌, 1800 mAh ಬ್ಯಾಟರಿ, ಬ್ಲೂಟೂತ್‌, 4 GB ವರೆಗಿನ ಮೆಮೊರಿ ವಿಸ್ತರಣೆ ಹಾಗೂ ಎಂಟಿಎಸ್‌ ಮೂವಿ ಪ್ಲಾನೆಟ್‌ ಫೀಚರ್ಸ್‌ಗಳನ್ನು ಹೊಂದಿದೆ.

ಖರೀದಿಸುವುದಾದರೆ ಎಂಟಿಎಸ್‌ ಟರ್ಬೋ ಬಿ121 ರೂ.1,999 ದರದಲ್ಲಿ ಲಭ್ಯವಿದ್ದರೆ, ಎಂಟಿಎಸ್‌ ಬಝ್‌ ಎಕ್ಸ್‌121 ಹಾಗೂ ಎಂಟಿಎಸ್‌ ರಾಕ್ಸ್ಟಾರ್‌ ವಿ121 ರೂ. 2,800 ದರದಲ್ಲಿ ಲಭ್ಯವಿದೆ.

Read In English..

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot