Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮುವಾಮಾ ಎನಾನ್ಸ್' ಎಂಬ ಈ ಜಪಾನಿ ಡಿವೈಸ್ ಕೆಲಸ ಏನ್ ಗೊತ್ತಾ?
ಇಂಗ್ಲೀಷ್ ಒಂದು ಗೊತ್ತಿದ್ದರೆ ಸಾಕು ಇಡೀ ವಿಶ್ವವನ್ನೇ ಸುತ್ತಬಹುದು ಎಂಬ ಕಲ್ಪನೆ ಭಾರತೀಯರಿಗೆ ಇರಬಹುದು. ಆದರೆ, ಜಪಾನಿಯರು ಮಾತ್ರ ಹಾಗೆ ತಪ್ಪು ತಿಳಿದುಕೊಂಡಿಲ್ಲ. ಏಕೆಂದರೆ, ಜಪಾನಿಯರು 'ಮುವಾಮಾ ಎನಾನ್ಸ್'(muama) ಎಂಬ ಡಿವೈಸ್ ಒಂದನ್ನು ಅವರು ಕಂಡುಹಿಡಿದಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವ ಮತ್ತು ಕೇಳಿಸಿಕೊಳ್ಳುವ ಸಮಯ ಒದಗಿ ಬಂದಾಗ ಸಹಾಯವಾಗಲಿ ಎಂದು ಜಪಾನ್ ಮೂಲದ ಸಂಸ್ಥೆಯೊಂದು ಇಂತಹದೊಂದು ಪರಿಹಾರ ಕಂಡು ಹಿಡಿದಿದೆ.

ಹೌದು, ನೀವು ವಿದೇಶಗಳಿಗೆ ಹೋಗುತ್ತೀರಿ ಎಂದಾಗ ಅವರ ಬಳಿ ಮಾತನಾಡಲು ಅವರ ಭಾಷೆಗ ಕಲಿಯಬೇಕು. ಮಾತನಾಡದಿದ್ದರೆ, ಸಂವಹನದ ಕೊರತೆಯಿಂದಾಗಿ ಎಷ್ಟೋ ವಿಚಾರಗಳು ತಿಳಿಯುವುದಿಲ್ಲ. ಆದರೆ, ಇನ್ಮುಂದೆ ಆ ಸಮಸ್ಯೆಯಿಲ್ಲ. ಏಕೆಂದರೆ, ಭಾಷಾ ಸಮಸ್ಯೆ ಎದುರಿಸುತ್ತಿರುವವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಜಪಾನ್ ಮೂಲದ ಸಂಸ್ಥೆಯೊಂದು 'ಮುವಾಮಾ ಎನಾನ್ಸ್' ಎಂಬ ಡಿವೈಸ್ ಕಂಡು ಹಿಡಿದಿದೆ. ಈ ವಿಶೇಷ ಡಿವೈಸ್ ಸುಮಾರು 40 ಭಾಷೆಗಳನ್ನು ಭಾಷಾಂತರಿಸುತ್ತದೆ.
ಈ ಭಾಷಾಂತರ ಸಾಧನವು ನೋಡಲು ಒಂದು ರೀತಿಯಲ್ಲಿ ಡಾಂಗಲ್ ರೀತಿಯಲ್ಲಿದೆ. ಚಾರ್ಜ್ ಮಾಡಿ ಬಳಸಿಕೊಳ್ಳಬಹುದಾದ ಈ ಡಿವೈಸ್, ನಮ್ಮ ಭಾಷೆ ಗೊತ್ತಿರದ ವ್ಯಕ್ತಿಗಳ ಮುಂದೆ ಈ ಸಾಧನವನ್ನು ಇಟ್ಟು ನಾವು ಹೇಳಬೇಕೆಂದಿರುವ ವಿಷಯವನ್ನು ಈ ಸಾಧನದ ಮುಂದೆ ಹೇಳಿದರೆ ಅದು ಕೂಡಲೇ ಭಾಷಂತರಿಸಿ ಅವರ ಭಾಷೆಯಲ್ಲಿ ಉಚ್ಛರಿಸುತ್ತದೆ. ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೀರ್ಘ ವಾಕ್ಯಗಳನ್ನೂ ಈ ಸಾಧನ ಭಾಷಾಂತರಿಸುತ್ತದೆ.

ವಿಶ್ವದಲ್ಲಿ ಅತಿ ಹೆಚ್ಚು ಜನರು ಮಾತನಾಡುವ 40 ಭಾಷೆಗಳನ್ನು ಈ ಸಾಧನ ಭಾಷಾಂತರಿಸುತ್ತದೆ. ಕೇವಲ 30 ಸೆಕೆಂಡ್‌ಗಳಲ್ಲೇ ಮಾತುಗಳನ್ನು ಗ್ರಹಿಸಿ, ವಾಕ್ಯ ಮಾಡಿ ಭಾಷಾಂತರಿಸುವ ವಿಶೇಷ ಸಾಧನ ಇಆಗಿದ್ದು, ಪ್ರವಾಸಕ್ಕೆ ಹೋದಾಗ, ವ್ಯಾಪಾರ-ವಾಣಿಜ್ಯ ಸಭೆಗಳಲ್ಲಿ ಭಾಗವಹಿಸಿದಾಗ ಭಾಷೆ ಗೊತ್ತಿರದಿದ್ದವರು ಈ ಸಾಧನವನ್ನು ಬಳಸುವುದರಿಂದ ಮುಂದೆ ಎದುರಾಗುವ ಸಂವಹನದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು ಎನ್ನುವುದು ಈ ಸಾಧನ ತಯಾರಿಸಿದ ತಂತ್ರಜ್ಞರ ಅಭಿಪ್ರಾಯ.
ಚೀನಿ, ಫ್ರೆಂಚ್, ಜಪಾನೀಸ್, ಇಂಗ್ಲಿಷ್, ಅರೇಬಿಕ್, ಸ್ಪ್ಯಾನಿಷ್, ಪೋರ್ಚುಗೀಸ್, ಡಚ್, ರಷ್ಯನ್, ಜರ್ಮನ್, ಥಾಯ್, ಸ್ವೀಡಿಶ್, ಇಟಾಲಿಯನ್, ಡ್ಯಾನಿಷ್, ಪೊಲಿಶ್, ಗ್ರೀಕ್, ಜೆಕ್, ಇಂಡೊನೇಷ್ಯನ್, ಬಲ್ಗೇರಿಯನ್, ಮಲೇಷ್ಯನ್, ಹೀಬ್ರೂ, ಕ್ರೊವೇಷ್ಯನ್, ನಾರ್ವೆಯನ್, ರುಮೇನಿಯನ್, ಟರ್ಕಿಶ್ ಮತ್ತು ಹಿಂದಿ ಭಾಷೆ ಸೇರಿದಂತೆ ಇನ್ನೂ ಕೆಲವು ಪ್ರಮುಖ ಭಾಷೆಗಳನ್ನು ಈ ಸಾಧನ ಭಾಷಾಂತರಿಸುತ್ತದೆ. ಆದರೆ, ಈ ಪಟ್ಟಿಯಲ್ಲಿ ನಮ್ಮ ಕನ್ನಡ ಭಾಷೆ ಸೇರಿಲ್ಲ ಎಂಬುದು ಮಾತ್ರ ಬೇಸರದ ವಿಷಯ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470