ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಆಫರ್ ಪ್ರಕಟಣೆ: ಅಂಬಾನಿ ಹೇಳಿದ್ದೇನು?

Written By:

  ರಿಲಾಯನ್ಸ್ ಜಿಯೋ ಮಾಲಿಕರಾದ ಮುಕೇಶ್ ಅಂಬಾನಿ'ರವರು ಗುರುವಾರ ಜಿಯೋ ಗ್ರಾಹಕರಿಗೆ 'ಹ್ಯಾಪಿ ನ್ಯೂ ಇಯರ್ (Happy New Year)' ಆಫರ್ ಅನ್ನು ಪ್ರಕಟಗೊಳಿಸಿದ್ದಾರೆ. ಈ ಹ್ಯಾಪಿ ನ್ಯೂ ಇಯರ್ ಆಫರ್‌ನಲ್ಲಿ ವಾಸ್ತವವಾಗಿ ವೆಲ್ಕಮ್‌ ಆಫರ್‌ನ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆ, ಉಚಿತ ಡೇಟಾ ಮತ್ತು ಉಚಿತ ಟೆಕ್ಸ್ಟ್‌ ಮೆಸೇಜ್‌ ಸೇವೆಯನ್ನು ಜಿಯೋ ಗ್ರಾಹಕರಿಗೆ ವಿಸ್ತರಣೆ ಮಾಡಲಾಗಿದೆ.

  ಅಂದಹಾಗೆ ರಿಲಾಯನ್ಸ್ ಜಿಯೋನ(Jio) ಹ್ಯಾಪಿ ನ್ಯೂ ಇಯರ್ ಪ್ಲಾನ್ ಫೇರ್ ಯೂಸೇಜ್ ಪಾಲಿಸಿ(FUP)ಯೊಂದಿಗೆ ಬಂದಿದ್ದು, ರಿಲಾಯನ್ಸ್ ಜಿಯೋ ಗ್ರಾಹಕರು ದಿನಕ್ಕೆ ಕೇವಲ 1GB ಡೇಟಾ ಬಳಕೆ ಮಾಡಬಹುದು. ವಿಶೇಷ ಅಂದ್ರೆ ರಿಲಾಯನ್ಸ್ ಜಿಯೋದ 'ಹ್ಯಾಪಿ ನ್ಯೂ ಇಯರ್' ಆಫರ್ ಎಲ್ಲಾ ಗ್ರಾಹಕರಿಗೆ ಮಾರ್ಚ್‌ 31 2017 ರವರೆಗೆ ಉಚಿತ.

  ಮುಕೇಶ್ ಅಂಬಾನಿ'ರವರ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಣೆ ಮತ್ತು ಅವರು ಹೇಳಿದ ಇತರೆ ಮಾಹಿತಿಗಳ ಲೈವ್ ಅಪ್‌ಡೇಟ್‌ ಈ ಕೆಳಗಿನಂತಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಫೇಸ್‌ಬುಕ್‌, ವಾಟ್ಸಾಪ್‌ಗಿಂತ ಹೆಚ್ಚು ಬೆಳವಣಿಗೆ

  * ಈ ಮೊದಲ ಮೂರು ತಿಂಗಳಲ್ಲಿ, ಜಿಯೋ ಫೇಸ್‌ಬುಕ್‌, ವಾಟ್ಸಾಪ್‌ ಮತ್ತು ಸ್ಕೈಪಿಯಂತೆ ಬೆಳವಣಿಗೆ ಆಗಿದೆ.
  * 50 ದಶಲಕ್ಷಕ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ.
  * ಜಿಯೋ ಪ್ರಸ್ತುತದಲ್ಲಿ ಅತಿ ವೇಗದಲ್ಲಿ ಅಭಿವೃದ್ದಿ ಹೊಂದುತ್ತಿರುವ ಟೆಕ್‌ ಸಂಸ್ಥೆ ಆಗಿದೆ.

  ಬ್ರಾಡ್‌ಬ್ಯಾಂಡ್ ಗ್ರಾಹಕರಿಗಿಂತ ಸರಾಸರಿ 25 ಪಟ್ಟು ಹೆಚ್ಚಿನ ಡೇಟಾ

  * ಜಿಯೋ ಡೇಟಾ ಸ್ಟ್ರಾಂಗ್ ನೆಟ್‌ವರ್ಕ್‌ ಆಗಿದ್ದು, ಇಂಟರ್ನೆಟ್ ಬಳಕೆಗಾಗಿಯೇ ಅಭಿವೃದ್ದಿಪಡಿಸಲಾಗಿದೆ.
  * ಬ್ರಾಡ್‌ಬ್ಯಾಂಡ್ ಗ್ರಾಹಕರಿಗಿಂತ ಸರಾಸರಿ 25 ಪಟ್ಟು ಹೆಚ್ಚಿನ ಡೇಟಾವನ್ನು ಜಿಯೋ ಗ್ರಾಹಕರು ಬಳಸುತ್ತಿದ್ದಾರೆ.
  * ಜಿಯೋ ನೆಟ್‌ವರ್ಕ್‌ ಸರಿಯಾಗಿದೆ ಎಂದು ಅತ್ಯಾಧುನಿಕ ಟೆಕ್‌ ಬಳಕೆದಾರರು ಜಿಯೋ ಸೇವೆ ಪಡೆಯುತ್ತಿದ್ದಾರೆ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಜಿಯೋ ವೆಲ್ಕಮ್‌ ಆಫರ್‌

  * ಜಿಯೋ ವೆಲ್ಕಮ್‌ ಆಫರ್‌ ಅನ್ನು ಕಬ್ಬಿಣದಷ್ಟು ಕಠಿಣತೆಯಿಂದ ಲಾಂಚ್‌ ಮಾಡಿದೆವು. ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆವು, ಕೇಳಿದೆವು, ಹಾಗೆ ಈ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯನಿರ್ವಹಿಸಿದೆವು.
  * ಜಿಯೋ ಆರಂಭ ದಿನಕ್ಕಿಂತಲೂ ಈಗ ಉತ್ತಮವಾಗಿದೆ.
  * ಭಾರತ ಸರ್ಕಾರಕ್ಕೆ ಧನ್ಯವಾದಗಳು, ಈಗ ನಾವು ಅತೀವೇಗದ ಟ್ರ್ಯಾಕ್‌ ಲಾಂಚ್‌ ಮಾಡಲು ಸಬಲರಾಗಿದ್ದೇವೆ.

  2 ಲಕ್ಷ ಕೇಂದ್ರಗಳಲ್ಲಿ eKYC

  * ಜಿಯೋ ಈಗ ಯಶಸ್ವಿಯಾಗಿ eKYC(Know your customer) ವ್ಯವಸ್ಥೆಯನ್ನು 2 ಲಕ್ಷ ಕೇಂದ್ರಗಳಲ್ಲಿ ಜಾರಿಗೊಳಿಸಿದೆ.
  * ಇದು ಭಾರತದಲ್ಲಿರುವ ಎಟಿಎಂಗಳ ಸಂಖ್ಯೆಗೆ ಸಮನಾಗಿದೆ. eKYC ವೆರಿಫಿಕೇಶನ್‌ ಕೇಂದ್ರಗಳನ್ನು ಮಾರ್ಚ್‌ 2017 ರ ಒಳಗಾಗಿ ಎರಡು ಪಟ್ಟು ಹೆಚ್ಚಿಸುತ್ತೇವೆ.
  * ಗ್ರಾಹಕರು ಜಿಯೋಗೆ ಅಭೂತಪೂರ್ವವಾದ ಪ್ರೀತಿ ತೋರಿಸಿದ್ದಾರೆ, ಆದರೆ ನಮಗೆ ಬೇಕಾದ ಅಗತ್ಯ ಸಹಾಯವನ್ನು ಯಾವುದೇ ಆಪರೇಟರ್‌ಗಳಿಂದ ಸ್ವೀಕರಿಸಿಲ್ಲ.

  900 ಕೋಟಿ ವಾಯ್ಸ್ ಕರೆ ಬ್ಲಾಕ್‌ ಮಾಡಿದವು ಇತರೆ ಟೆಲಿಕಾಂಗಳು

  * ಕಳೆದ 3 ತಿಂಗಳಲ್ಲಿ ಜಿಯೋದಿಂದ ಇತರೆ 3 ದೊಡ್ಡ ನೆಟ್‌ವರ್ಕ್‌ಗಳಿಗೆ ಮಾಡಲಾದ 900 ಕೋಟಿ ವಾಯ್ಸ್ ಕರೆಗಳನ್ನು ಪ್ರತಿಸ್ಪರ್ಧಿಗಳು ಬ್ಲಾಕ್‌ ಮಾಡಿದ್ದಾರೆ.
  * ಜಿಯೋದ ಸುಪೇರಿಯರ್ ಟೆಕ್ನಾಲಜಿ ಸೇವೆಯು ಗ್ರಾಹಕರಿಗೆ, ಇತರೆ ಸ್ಥಾನಿಕ ಟೆಲಿಕಾಂ ಆಪರೇಟರ್‌ಗಳಿಂದ ನಿರಾಕರಣೆಗೊಂಡಿದೆ. ಜಿಯೋ ಗ್ರಾಹಕರಿಗೆ ತಲುಪುವ ಉತ್ತಮ ಸೇವೆಯನ್ನು ಇತರೆ ಟೆಲಿಕಾಂಗಳು ಅಡ್ಡಿಪಡಿಸಿ ಸಮಸ್ಯೆ ಉಂಟುಮಾಡಿವೆ.
  * ಜಿಯೋ ಭಾರತೀಯ ಗ್ರಾಹಕರಿಗೆ ದಣಿವರಿಯದಂತೆ ಉಚಿತ ವಾಯ್ಸ್ ಕರೆ ಸೇವೆಯನ್ನು ನೀಡುವ ಚಾಂಪಿಯನ್‌ ಆಗಿದೆ.

  ಇತರೆ ಟೆಲಿಕಾಂಗಳಿಂದ ಕರೆ ಬ್ಲಾಕ್‌

  * ಕಳೆದ ತಿಂಗಳಲ್ಲಿ ಇದ್ದ ಕರೆ ಬ್ಲಾಕ್‌ ದರ ಶೇ.90 ಇದ್ದದ್ದು, ನೆನ್ನೆಯ(ಬುಧವಾರ) ಒಳಗೆ ಶೇ.20 ಕ್ಕೆ ಇಳಿದಿದೆ.
  * ನಾನು ಖಚಿತವಾಗಿ ಹೇಳಲು ಬಯಸುವ ವಿಶೇಷ ಮಾಹಿತಿ ಎಂದರೆ, 'ಜಿಯೋದ ಎಲ್ಲಾ ಗ್ರಾಹಕರಿಗೂ ದೇಶಿಯ ಕರೆಗಳು ಸದಾಕಾಲ ಉಚಿತ'.
  * ಜಿಯೋ ಈಗ ಮೊಬೈಲ್‌ ನಂಬರ್ ಪೋರ್ಟ್‌ ಮಾಡಲು ಸಂಪೂರ್ಣವಾಗಿ ಬೆಂಬಲ ನೀಡುತ್ತದೆ. ಇತರೆ ಟೆಲಿಕಾಂ ಬಳಕೆದಾರರು ಜಿಯೋ ಬಂದರು ಹಳೆಯ ನಂಬರ್‌ ಅನ್ನೇ ಬಳಸಬಹುದು.

  ಸಿಮ್ ಮನೆಗೆ ಡೆಲಿವರಿ

  * ಇತ್ತೀಚೆಗೆ ಜಿಯೋ ಸಿಮ್‌ ಅನ್ನು ಮನೆಗೆ ಡೆಲಿವರಿ ಮಾಡುವ ಸೇವೆ ಆರಂಭಿಸಿದ್ದು, ಜಿಯೋ ಸಿಮ್‌ ಡೆಲಿವರಿ ಪಡೆದು ಕೇವಲ 5 ನಿಮಿಷದಲ್ಲಿ eKYC ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದು.
  * ಹೋಮ್ ಡೆಲಿವರಿ ಸೇವೆಯನ್ನು ಮೈಜಿಯೋ ಮೂಲಕ ಡಿಸೆಂಬರ್ 31 2016 ರ ಒಳಗೆ ಭಾರತದ 100 ಸಿಟಿಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.
  * ಜಿಯೋ ಇತರೆ ಟೆಲಿಕಾಂಗಳಿಗಿಂತ 4 ಪಟ್ಟು ಹೆಚ್ಚು ಡೇಟಾ ನೀಡುವುದಲ್ಲದೇ, ಅತಿವೇಗದ ಮೊಬೈಲ್‌ ನೆಟ್‌ವರ್ಕ್‌ ಅನ್ನು ನೀಡುತ್ತದೆ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಯಾವುದೇ ಹಣ ಪಾವತಿಸಬೇಕಿಲ್ಲ

  * ಡಿಸೆಂಬರ್ 4 2016 ರಿಂದ ಜಿಯೋದ ಹೊಸ ಗ್ರಾಹಕರು ಡೇಟಾ, ವಾಯ್ಸ್, ವೀಡಿಯೊ ಮತ್ತು ಇತರೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳನ್ನು ಸಂಪೂರ್ಣ ಉಚಿತವಾಗಿ ಮಾರ್ಚ್‌ 31 2017 ರವರೆಗೆ ಪಡೆಯಲಿದ್ದಾರೆ.
  * ಇದನ್ನೇ ನಾವು 'ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್' ಎಂದು ಕರೆದಿದ್ದೇವೆ.
  * ಈಗಾಗಲೇ ಇರುವ ಜಿಯೋ ಗ್ರಾಹಕರು ಸಹ 'ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಮಾರ್ಚ್‌ 31 2017 ರವರೆಗೆ ಪಡೆಯುತ್ತಾರೆ.

  ಇತರೆ ನೆಟ್‌ವರ್ಕ್‌ಗಳಿಗಿಂತ 30 ಪಟ್ಟು ಸರಾಸರಿ ಬಳಕೆ

  * ಶೇ.80 ರಷ್ಟು ಜಿಯೋ ಗ್ರಾಹಕರು 1GB ಗಿಂತ ಕಡಿಮೆ ಡೇಟಾ ಬಳಸುತ್ತಾರೆ. ದಿನಕ್ಕೆ 1GB ಎಂದರೆ ಇತರೆ ನೆಟ್‌ವರ್ಕ್‌ಗಳಿಗಿಂತ 30 ಪಟ್ಟು ಸರಾಸರಿ ಬಳಕೆ.
  * ಉತ್ತಮವಾಗಿ ಯಾವುದೇ ಸಮಸ್ಯೆ ಇಲ್ಲದೇ ನೆಟ್‌ವರ್ಕ್‌ ಶೇರ್ ಮಾಡಬಹುದು.
  * ಈ ಅವಧಿಯಲ್ಲಿ ಜಿಯೋ ಗ್ರಾಹಕರು ಡಿಜಿಟಲ್ ರೀಚಾರ್ಜ್‌, ಬಿಲ್ ಪಾವತಿಸುವಿಕೆ, ಜಿಯೋಮನಿ ವ್ಯಾಲೆಟ್ ಪರೀಕ್ಷೆ ನಡೆಸಬಹುದು.

  ಮೋದಿಗೆ ಅಭಿನಂದನೆಗಳು

  * 500, 1000 ರೂ ನೋಟುಗಳ ಚಲಾವಣೆ ರದ್ದು ಮಾಡಿದ ಐತಿಹಾಸಿಕ ತೀರ್ಮಾನಕ್ಕೆ, ಮೋದಿರವರಿಗೆ ಅಭಿನಂದನೆಗಳು ಹೇಳಲು ಬಯಸುತ್ತೇನೆ ಎಂದರು ಮುಕೇಶ್ ಅಂಬಾನಿ.
  * ಪ್ರಧಾನಿ ಮೋದಿ'ರವರ ಈ ತೀರ್ಮಾನದಿಂದ ಡಿಜಿಟಲ್ ಶಕ್ತಿ ಬೆಳವಣಿಗೆ ಮತ್ತು ಡಿಜಿಟಲ್‌ ನಗದು ಆರ್ಥಿಕ ಬೆಳವಣಿಗೆಗೆ ಉತ್ತಮ ಬೆಂಬಲ ಸಿಗಲಿದೆ.
  * ಡಿಜಿಟಲ್ ಹಣದ ವ್ಯವಹಾರದಿಂದ ಆರ್ಥಿಕ ಬೆಳವಣಿಗೆ ಹೆಚ್ಚಾಗಲಿದೆ. ಇದರಿಂದ ಅಭೂತಪೂರ್ವ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಸಾಧ್ಯ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

  Read more about:
  English summary
  Mukesh Ambani Announces Reliance Jio Happy New Year Offer. TO know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more