Subscribe to Gizbot

ಜಿಯೋ ದೇವರು ಅಂಬಾನಿ ಈಗ ಏಷ್ಯಾದ ಎರಡನೇ ಶ್ರೀಮಂತ!!..ಒಟ್ಟು ಆಸ್ತಿ ಎಷ್ಟು ಗೊತ್ತಾ?

Written By:

ಜಿಯೋ ಮೂಲಕ ದೇಶದಾಧ್ಯಂತ ಪತ್ರಿಕೆಗಳ ಹೆಡ್‌ಲೈನ್‌ನಲ್ಲಿಯೇ ಇರುತ್ತಿದ್ದ ಅಂಬಾನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.!! ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿ, ಜಿಯೋ ಮೂಲಕ ಭಾರತೀಯ ಟೆಲಿಕಾಂ ನಡುಗಿಸಿದ ಮುಖೇಶ್ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.!

ಬ್ಲೂಮ್ ಬರ್ಗ್ ಪ್ರಕಟಿಸಿದ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಈ ಬಾರಿ 77 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದ್ದು, ಈ ಮೂಲಕ ಮೂಲಕ ಹಾಂಕಾಂಗ್ ಉದ್ಯಮಿ ಲಿ ಕಾಶಿಂಗ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.!! ಇನ್ನು ಮೊದಲ ಸ್ಥಾನವನ್ನು ಚೀನಾದ ಅಲಿಬಾಬಾ ಸಮೂಹದ ಮುಖ್ಯಸ್ಥ ಜಾಕ್ ಮಾ ಪಡೆದಿದ್ದಾರೆ.!!

ಫೋರ್ಬ್ಸ್ ನಿಯತಕಾಲಿಕೆ ಈ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರಿಗೆ 20ನೇ ಸ್ಥಾನ ಸಿಕ್ಕಿತ್ತು. ಇದೀಗ ಮತ್ತೆ ಆಸ್ತಿ ಹೆಚ್ಚಳದಿಂದಾಗಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೇಲಕ್ಕೇರಲು ಸಿದ್ದರಾಗಿದ್ದಾರೆ.! ಹಾಗಾದರೆ, ಆದಾಯ ಹೆಚ್ಚಲು ಜಿಯೋ ಕಾರಣವೇ? ಪ್ರಸ್ತುತ ಅಂಬಾನಿಯ ಒಟ್ಟು ಆಸ್ತಿ ಎಷ್ಟು? ವಾರ್ಷಿಕ ಆದಾಯ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2.2 ಲಕ್ಷಕೋಟಿಗೂ ಹೆಚ್ಚು ಆಸ್ತಿ!!

2.2 ಲಕ್ಷಕೋಟಿಗೂ ಹೆಚ್ಚು ಆಸ್ತಿ!!

ಜಿಯೋ ಮೂಲಕ ಉಚಿತ ಸೇವಯನ್ನು ನೀಡಿದರೂ ಸಹ ಅಂಬಾನಿ ಆದಾಯ ಹೆಚ್ಚಾಗಿದೆ. ಪ್ರಸ್ತುತ ಅಂಬಾನಿ ಒಟ್ಟು 2.2 ಲಕ್ಷಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದು, ಈ ಮೂಲಕ ಭಾರತದ ಮೊದಲ ಮತ್ತು ಏಷ್ಯಾದ ಎರಡನೇ ಹಾಗೂ ಪ್ರಪಂಚದ 14 ರಿಂದ 20 ಶ್ರೀಮಂತರ ಸಾಲಿನಲ್ಲಿ ನಿಲ್ಲುತ್ತಾರೆ.!!

ಅಂಬಾನಿ ಆದಾಯ ಸೇರಿದ್ದು ಎಲ್ಲಿಂದ?

ಅಂಬಾನಿ ಆದಾಯ ಸೇರಿದ್ದು ಎಲ್ಲಿಂದ?

dಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೊದಲ ತ್ರೈಮಾಸಿಕದಲ್ಲಿ ಕಂಪೆನಿ ಲಾಭಗಳಿಕೆ ಶೇ.28 ರಷ್ಟು ಏರಿಕೆಯಾಗಿದೆ.! ರಿಲಯನ್ಸ್ ಕಂಪೆನಿಗೆ ಶೇ90ರಷ್ಟು ಆದಾಯ ಇಂಧನ ಸಂಸ್ಕರಣೆ ಹಾಗೂ ಪೆಟ್ರೊಕೆಮಿಕಲ್ ಘಟಕಗಳಿಂದ ಹರಿದುಬಂದಿದೆ. ಇನ್ನುಳಿದ ಶೇ 10ರಷ್ಟು ಲಾಭ ರೀಟೆಲ್, ಮಾಧ್ಯಮಗಳಿಂದ ಬಂದಿದೆ.!!

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಜಿಯೋವಿನ ಆದಾಯ ಭಾರಿ ಏರಿಕೆ?!

ಜಿಯೋವಿನ ಆದಾಯ ಭಾರಿ ಏರಿಕೆ?!

ಜಿಯೋ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಇರಿಸಿದ್ದರಿಂದ ರಿಲಿಯನ್ಸ್ ಶೇರುಗಳ ಬೆಲೆ ದಾಖಲೆಯ ಮಟ್ಟಕ್ಕೇರಿದೆ. ವರದಿಯ ಪ್ರಕಾರ ಜಿಯೋವಿನ ಆದಾಯ ಭಾರಿ ಏರಿಕೆಯಾಗಿದ್ದು, ಆದಾಯಗಳಿಕೆಯಲ್ಲಿ ಮೂಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.!!

ಜಿಯೋ ನಂಬರ್ ಒನ್ ಕಂಪೆನಿ!!

ಜಿಯೋ ನಂಬರ್ ಒನ್ ಕಂಪೆನಿ!!

ಉಚಿತ ಡೇಟಾ ನೀಡಿ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಭಾರತದಲ್ಲಿಯೇ ನಂಬರ್ ಒನ್ ಕಂಪೆನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಮಹಾಸಭೆಯಲ್ಲಿ ಅಂಬಾನಿ ಹೇಳಿದ್ದಾರೆ. ಭಾರತದಲ್ಲಿಯೇ ಅತಿ ದೊಡ್ಡ ಸೇವಾ ಕಂಪೆನಿ ಮತ್ತು ಡೇಟಾ ಪ್ರೊವೈಡರ್ ಆಗಿ ಜಿಯೋ ಇದೆ ಎಂದು ಹೇಳಿದರು.!!

ಜಿಯೋ ಉಚಿತ ಫೋನ್!!

ಜಿಯೋ ಉಚಿತ ಫೋನ್!!

ಈಗಾಗಲೇ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿರುವ ಜಿಯೋ ಉಚಿತ ಫೋನ್ ಇದೇ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ. ಭಾರೀ ಕುತೂಹಲ ಹುಟ್ಟಿಹಾಕಿರುವ ಜಿಯೋ ಉಚಿತ ಫೋನ್‌ಗೆ 1500 ರೂ. ಬೆಲೆ ವಿಧಿಸಿದ್ದರೂ ಮೂರು ವರ್ಷಗಳ ನಂತರ ಈ ಹಣ ಮರುಪಾವತಿಯಾಗಲಿದೆ.!!

ಓದಿರಿ:ಮೋದಿ, ಟ್ರಂಪ್ ಸೇರಿ ವಿಶ್ವದ ನಾಯಕರು ಬಳಸುವ ಮೊಬೈಲ್ ಯಾವುವು? ಇಲ್ಲಿದೆ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Mukesh Ambani is making headlines once again as he climbed past Hong Kong's business tycoon Li Ka-shing to become Asia’s second richest man.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot