Home
ಸುದ್ದಿಜಾಲ

ಮೋದಿಯವರ ನೇತೃತ್ವದಲ್ಲಿ ದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ: ಮುಖೇಶ್ ಅಂಬಾನಿ!

ಭಾರತವು ಅತ್ಯಂತ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶವಾಗಿ ಮಾರ್ಪಾಡಾಗುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. 2020ರ ವೇಳೆಗೆ ಭಾರತವು ಸಂಪೂರ್ಣವಾಗಿ 4ಜಿ ಸೇವೆಯನ್ನು ಹೊಂದಿರುವ ದೇಶವಾಗಿ ಬದಲಾಗಲಿದೆ ಎಂದು ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ದೆಹಲಿಯಲ್ಲಿ ಆರಂಭವಾಗಿರುವ ಇಂಡಿಯನ್ ಮೊಬೈಲ್​ ಕಾಂಗ್ರೆಸ್​ ಎರಡನೇ ಆವೃತ್ತಿಯಲ್ಲಿ ಮಾತನಾಡಿದ ಅಂಬಾನಿ, ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದೆ. ಕೇವಲ 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತ ಅತಿ ಹೆಚ್ಚು ಮೊಬೈಲ್ ಡೇಟಾ ಬಳಸುವ ದೇಶವಾಗಿ ಬದಲಾಗಿದೆ ಎಂದು ಹೇಳಿದರು.

ಮೋದಿಯವರ ನೇತೃತ್ವದಲ್ಲಿ ದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ: ಅಂಬಾನಿ!

ಅಂಬಾನಿ ದೇಶದ ಟೆಲಿಕಾಂ ಪ್ರಪಂಚವನ್ನು ಹಾಡಿ ಹೊಗಳಿದ ನಂತರ ಏರ್‌ಟೆಲ್ ಸಂಸ್ಥಾಪಕ ಸುನಿಲ್​ ಮಿತ್ತಲ್ ಅವರು ಸಹ ಭಾರತದ ಟೆಲಿಕಾಂ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾದರೆ, ಇಂಡಿಯನ್ ಮೊಬೈಲ್​ ಕಾಂಗ್ರೆಸ್​ ಎರಡನೇ ಆವೃತ್ತಿ ಹೇಗಿತ್ತು? ಭಾರತೀಯ ಟೆಲಿಕಾಂ ದಿಗ್ಗಜರು ಏನೇನೆಲ್ಲಾ ಹೇಳಿದರು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಹೇಗಿತ್ತು ಇಂಡಿಯನ್ ಮೊಬೈಲ್​ ಕಾಂಗ್ರೆಸ್?

ಹೇಗಿತ್ತು ಇಂಡಿಯನ್ ಮೊಬೈಲ್​ ಕಾಂಗ್ರೆಸ್?

ಇಂದು ನಡೆದ ಮೊಬೈಲ್​ ಮೇಳದಲ್ಲಿ ರಿಲಾಯನ್ಸ್​ ಇಂಡಸ್ಟ್ರಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ, ಭಾರ್ತಿ ಏರ್​ಟೆಲ್​ನ ಚೇರ್​ಮನ್​ ಸುನಿಲ್​ ಮಿತ್ತಲ್​, ಟೆಲಿಕಾಂ ಕಮಿಷನ್​ನ ಅಧ್ಯಕ್ಷೆ ಹಾಗೂ ಸೆಕ್ರೆಟರಿ ಅರುಣಾ ಸುಂದರ್​ರಾಜನ್​, ಟ್ರಾಯ್​ ಮುಖ್ಯಸ್ಥ​ ಎಸ್​ ಶರ್ಮಾ ಸೇರಿದಂತೆ ಟೆಲಿಕಾಂ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಶ್ವದಲ್ಲೇ ಮೊದಲ 1ನೇ ಸ್ಥಾನ

ವಿಶ್ವದಲ್ಲೇ ಮೊದಲ 1ನೇ ಸ್ಥಾನ

ದೇಶದಲ್ಲಿ ಮೊಬೈಲ್ ಹಾಗೂ ಬ್ರಾಡ್‌ಬ್ಯಾಂಡ್ ಬೆಳವಣಿಗೆ ವೇಗ 155ನೇ ಸ್ಥಾನದಿಂದ ವಿಶ್ವದ 1ನೇ ಸ್ಥಾನಕ್ಕೆ ಜಿಗಿದಿದೆ. 2 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪ್ರಪಂಚದಲ್ಲೇ ಅತಿಹೆಚ್ಚು ಮೊಬೈಲ್ ಡೇಟಾ ಬಳಕೆ ರಾಷ್ಟ್ರವಾಗಿ ಬದಲಾಗಿದೆ. ಈ ವರೆಗಿನ ಎಲ್ಲಾ ಬದಲಾವಣೆ ಕಾಲದಲ್ಲೇ ಇದು ಅತ್ಯಂತ ವೇಗದ ಬದಲಾವಣೆ ಎಂದು ಮುಖೇಶ್ ಅಂಬಾನಿ ಹೇಳಿದರು.

ರೋಮಿಂಗ್​ ನಿಲ್ಲಿಸಿದ ವಿಶ್ವದ ಮೊದಲ ದೇಶ

ರೋಮಿಂಗ್​ ನಿಲ್ಲಿಸಿದ ವಿಶ್ವದ ಮೊದಲ ದೇಶ

ಏರ್​ಟೆಲ್​ ಮುಖ್ಯಸ್ಥ ಸುನಿಲ್​ ಮಿತ್ತಲ್ ಅವರು ಸಹ​ ಮಾತನಾಡಿ, 'ಜಗತ್ತಿನಾದ್ಯಂತ ಭಾರತದಲ್ಲಿ ಮೊಬೈಲ್​ ಬಳಕೆದಾರರ ಸಂಖ್ಯೆ ಅತ್ಯಂತ ಹೆಚ್ಚಿದೆ'. ವಿಶ್ವದಲ್ಲಿ ಅತ್ಯಂತ ಹೆಚ್ಚು ಡೇಟಾ ಪ್ಲಾನಿಂಗ್​ ಬಳಸುವ ದೇಶಗಳಲ್ಲೊಂದಾಗಿ ಭಾರತವಿದೆ. ಇನ್ನು ರೋಮಿಂಗ್​ ಚಾರ್ಜ್​ ನಿಲ್ಲಿಸಿದ ವಿಶ್ವದ ಮೊದಲ ದೇಶ ಕೂಡ ಭಾರತದ ಎಂದು ದೇಶದ ಟೆಲಿಕಾಂ ಅನ್ನು ಹಾಡಿಹೊಗಳಿದರು.

ಡಿಜಿಟಲ್​ ಇಕಾನಮಿಯಾಗಿಯಾಗಿ ಭಾರತ!

ಡಿಜಿಟಲ್​ ಇಕಾನಮಿಯಾಗಿಯಾಗಿ ಭಾರತ!

ಭಾರತವು ವಿಶ್ವದಲ್ಲೇ ಅತಿದೊಡ್ಡ ಸ್ಮಾರ್ಟ್​ಫೋನ್​ ಮಾರುಕಟ್ಟೆಯಾಗಿದೆ. ಡಿಜಿಟಲ್​ ಇಕಾನಮಿಯಾಗಿ ಮುಂದುವರೆಯಲು ಭಾರತಕ್ಕೆ ವಿಭಿನ್ನ ಭಾರತೀಯ ಭಾಷೆಯಲ್ಲಿ ಡಿಜಿಟಲ್​ ಕಂಟೆಂಟ್​ ಅಗತ್ಯವಿದೆ ಎಂದಿದ್ದಾರೆ. ಅಲ್ಲದೇ ಮಾಹಿತಿ ಗೌಪ್ಯತೆ ದೇಶದಲ್ಲಿನ ಮತ್ತೊಂದು ದೊಡ್ಡ ಸವಾಲಾಗಿದೆ ಎಂದು ಟೆಲಿಕಾಂ ಸಚಿವ ರವಿಸಂಕರ್​ ಪ್ರಸಾದ್ ಅವರು ಅಭಿಪ್ರಾಯಪಟ್ಟರು.

ತಂತ್ರಜ್ಞಾನದ ಅಗತ್ಯವಿದೆ

ತಂತ್ರಜ್ಞಾನದ ಅಗತ್ಯವಿದೆ

ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್​ ತಂತ್ರಜ್ಞಾನದ ಇಕೋ- ಸಿಸ್ಟಂಗೆ ಸೂಕ್ತ ನಿರ್ದೇಶನದ ಅಗತ್ಯವಿದೆ ಎಂದು ಮಿತ್ತಲ್ ಅವರು ಅಭಿಪ್ರಾಯಪಟ್ಟರೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಭಾರತಕ್ಕೆ ತಂತ್ರಜ್ಞಾನದ ಅಗತ್ಯವಿದೆ. ಈ ಮೂಲಕ ಭಾರತದ ಜನ ಸಾಮಾನ್ಯರನ್ನು ಜಗತ್ತಿಗೆ ಪರಿಚಯಿಸಲು ಸಹಾಯಕವಾಗುತ್ತದೆ ಎಂದು ರವಿಸಂಕರ್​ ಪ್ರಸಾದ್ ಹೇಳಿದರು.

Best Mobiles in India

English summary
Ambani speaking at the second edition of the India Mobile Congress on Thursday in New Delhi spoke at length on the positive aspects.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+