ಸಮೋಸಾ ಆರ್ಡರ್ ಮಾಡಿದ ವ್ಯಕ್ತಿಗೆ ಆಗಿದ್ದೇನು? ನೀವು ಕೂಡ ಈ ಸುದ್ದಿ ಓದಲೇಬೇಕು!
ಪ್ರತಿನಿತ್ಯವೂ ಭಾರತದಲ್ಲಿ ಒಂದಲ್ಲ ಒಂದು ಪ್ರದೇಶದಲ್ಲಿ ಆನ್‌ಲೈನ್ ವಂಚನೆಗಳು ವರದಿಯಾಗುತ್ತಲೇ ಇವೆ. ಇದೀಗ ವರದಿಯಾಗಿರುವ ಪ್ರಕರಣ ಮಾತ್ರ ಎಂತಹವರನ್ನು ಬೆಚ್ಚಿಬೀಳಿಸಲಿದೆ. ಯಾಕೆಂದರೆ ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಸಮೋಸಾ ಆರ್ಡರ್ ಮಾಡಲು ಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ.
ಹೌದು, ಭಾರತದಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣ ವರದಿಯಾಗಿವೆ. ಮುಂಬೈನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ವಂಚಕರು ವೃತ್ತಿಯಲ್ಲಿ ವೈದ್ಯರಾಗಿರುವ ವ್ಯಕ್ತಿ ಸಮೋಸ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. 25 ಪ್ಲೇಟ್ ಸಮೋಸಾ ಆರ್ಡರ್ ಮಾಡಿದ ವ್ಯಕ್ತಿ ಇದೀಗ 1.40 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಸಮೋಸ ಆರ್ಡರ್ ಮಾಡಿದವರಿಗೆ 1.40 ಲಕ್ಷ ರೂ ಪಂಗನಾಮ ಹಾಕಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿರುವ ಪ್ರಕರಣಗಳಲ್ಲಿ ವಂಚಕರ ಸ್ಮಾರ್ಟ್‌ನೆಸ್ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಒಂದು ರೀತಿಯಲ್ಲಿ ವಂಚಕರನ್ನು ಆವೈಡ್ ಮಾಡಲು ಹೋದರೆ ಮತ್ತೊಂದು ಮಾರ್ಗದಲ್ಲಿ ವಂಚನೆ ಮಾಡುವ ಪ್ರವೃತ್ತಿಯನ್ನು ವಂಚಕರು ಮುಂದುವರೆಸುತ್ತಲೇ ಇದ್ದಾರೆ. ಇದಕ್ಕೆ ಇಂಬುಕೊಡುವಂತೆ ಮುಂಬೈನಲ್ಲಿ ವೈದ್ಯರೊಬ್ಬರಿಗೆ ಸಮೋಸ ಹೆಸರಿನಲ್ಲಿ ಮೋಸ ಮಾಡಲಾಗಿದೆ. ಸಿಯಾನ್‌ನ ಜನಪ್ರಿಯ ಉಪಾಹಾರ ಗೃಹದಿಂದ 25 ಪ್ಲೇಟ್ ಸಮೋಸಾ ಆರ್ಡರ್ ಮಾಡಿದ ವ್ಯಕ್ತಿಗೆ 1.40 ಲಕ್ಷ ರೂ. ವಂಚಿಸಲಾಗಿದೆ.
ಇನ್ನು ಈ ಪ್ರಕರಣದಲ್ಲಿ ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಕರ್ಜತ್‌ನಲ್ಲಿ ಪಿಕ್ನಿಕ್ ಆಯೋಜಿಸಿದ್ದರು. ಈ ಸಮಯದಲ್ಲಿ ಸಹದ್ಯೋಗಿಗಳಿಗಾಗಿ ಸಮೋಸಾಗಳನ್ನು ಆರ್ಡರ್ ಮಾಡಲು ಪ್ಲಾನ್ ಮಾಡಿದ್ದಾರೆ. ಅದರತೆ ಆನ್‌ಲೈನ್‌ನಲ್ಲಿ ಸಮೋಸಾ ಆರ್ಡರ್ ಮಾಡಲು ಫೋನ್ ನಂಬರ್ ಸರ್ಚ್ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ದೊರಕಿದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸಮೋಸಾಗಳನ್ನು ಆರ್ಡರ್ ಮಾಡಿದ್ದಾರೆ. ಈ ಸಮಯದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ 25 ಸಮೋಸಾಗಳಿಗೆ 1,500 ರೂಪಾಯಿಗಳನ್ನು ಅಡ್ವಾನ್ಸ್ ಪಾವತಿ ಮಾಡಲು ಹೇಳಿದ್ದಾನೆ.

ಇದಲ್ಲದೆ ಅಡ್ವಾನ್ಸ್ ಅನ್ನು ಆನ್‌ಲೈನ್ ಮೂಲಕ ಪಾವತಿ ಮಾಡುವುದಕ್ಕಾಗಿ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ವಾಟ್ಸಾಪ್ ಸಂದೇಶವನ್ನು ವೈದ್ಯರಿಗೆ ವಂಚಕ ಕಳುಹಿಸಿದ್ದಾನೆ. ಇದನ್ನು ನಂಬಿದ ವೈದ್ಯರು ವಂಚಕ ನೀಡಿದ ಖಾತೆಗೆ 1,500 ರೂ. ಪಾವತಿಸಲು ಮುಂದಾಗಿದ್ದಾರೆ. ಆಗ ವಂಚಕ ನೀವು ಹಣ ಪಾವತಿಸುವುದಕ್ಕೆ ಐಡಿ ಕ್ರಿಯೆಟ್ ಮಾಡಬೇಕಿದೆ ಎಂದು ಹೇಳಿದ್ದಾನೆ. ಆತ ಹೇಳಿದಂತೆ ವೈದ್ಯರು ವಹಿವಾಟು ಐಡಿಯನ್ನು ಕ್ರಿಯೆಟ್ ಮಾಡಿದ್ದಾರೆ. ವಂಚಕರ ಸೂಚನೆಗಳನ್ನು ಸಂತ್ರಸ್ಥ ಅನುಸರಿಸುತ್ತಿದ್ದ ಹಾಗೇ ಅವರ ಅಕೌಂಟ್‌ನಿಂದ 1.40 ಲಕ್ಷ ರೂ ಮೊತ್ತ ವರ್ಗಾವಣೆಯಾಗಿದೆ. ಕೂಡಲೇ ಎಚ್ಚೆತ್ತ ವೈದ್ಯರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಆನ್‌ಲೈನ್ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?
* ಆನ್‌ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸಿ
* ಇಮೇಲ್ ಕಳುಹಿಸುವವರ ವಿಳಾಸಗಳನ್ನು ಪರಿಶೀಲಿಸಿ
* ಆನ್‌ಲೈನ್ ವೇದಿಕೆಗಳಲ್ಲಿ ಲಾಗಿನ್ ಮಾಡುವಾಗ ಎಚ್ಚರವಿರಲಿ
* ಸಿಕ್ಕಸಿಕ್ಕ ಸೈಟ್‌ಗಳಲ್ಲಿ ಲಾಗಿನ್ ಮಾಡಲು ಹೋಗಬೇಡಿ
* ಆನ್‌ಲೈನ್‌ನಲ್ಲಿ ನೀಡುವ ಆಮಿಷಗಳಿಗೆ ಬಲಿಯಾಗಬೇಡಿ
* ಸೊಶೀಯಲ್ ಮೀಡಿಯಾ ಮೂಲಕ ಹೇಳುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಯೋಚಿಸಿ
* ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಶೇರ್ ಮಾಡಬೇಡಿ
* ಆನ್‌ಲೈನ್‌ನಲ್ಲಿ ನಿಮ್ಮ ಎಟಿಎಂ ಪಿನ್ ಅನ್ನು ಶೇರ್ ಮಾಡಬೇಡಿ
* ಅಪರಿಚಿತ ಕರೆಗಳು ಬಂದಾಗ ಅವುಗಳನ್ನು ನಿರ್ಲ್ಯಕ್ಷಿಸಿ
* ವೆಬ್‌ಸೈಟ್‌ಗಳಿಗೆ ಬೇಟಿ ನೀಡುವ ಮುನ್ನ ಅವುಗಳ ವಿಶ್ವಾಸಾರ್ಹತೆ ಪರಿಶೀಲಿಸಿ


Click it and Unblock the Notifications