Home
ಸುದ್ದಿಜಾಲ

ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಲು ಹೋಗಿ 4.4 ಲಕ್ಷ ರೂ ಕಳೆದುಕೊಂಡ ಮಹಿಳೆ:.ಆಗಿದ್ದೇನು?

ಹೊಸ ವರ್ಷದ ಗುಂಗಿನಲ್ಲಿರುವವರು ಆನ್‌ಲೈನ್‌ ವಂಚನೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯಿದೆ. ವಂಚಕರು ಯಾವ ಜಾಲದ ಮೂಲಕವಾದರೂ ನಿಮ್ಮನ್ನು ವಂಚಿಸುವ ಸಾಧ್ಯತೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮುಂಬೈನಲ್ಲಿ ಹೊಸದೊಂದು ಆನ್‌ಲೈನ್‌ ವಂಚನೆ ಪ್ರಕರಣ ದಾಖಲಾಗಿದೆ. ವಿಮಾನ ಟಿಕೆಟ್‌ ರಿಸರ್ವ್‌ ಮಾಡುವ ನೆಪದಲ್ಲಿ ವಂಚನೆ ಮಾಡಲಾಗಿದೆ.

ಹೌದು, ದುಬೈಗೆ ವಿಮಾನ ಟಿಕೆಟ್ ಕಾಯ್ದಿರಿಸುವ ನೆಪದಲ್ಲಿ ಹಿರಿಯ ನಾಗರಿಕರೊಬ್ಬರಿಗೆ ವಂಚನೆ(online scam) ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಸ್ಕ್ಯಾಮರ್‌ಗಳು ಕುತಂತ್ರದಿಂದ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಮೊಬೈಲ್‌ ನಂಬರ್ ಸೇರ್ಪಡೆ ಮಾಡಿ ಹಿರಿಯ ನಾಗರಿಕರ ದಾರಿ ತಪ್ಪಿಸಿದ್ದಾರೆ. ಅಲ್ಲದೆ ಟಿಕೆಟ್‌ ರಿಸರ್ವ್‌ ಮಾಡಿಕೊಡುವ ನೆಪದಲ್ಲಿ 4.4 ಲಕ್ಷ ರೂ ಹಣವನ್ನು ಎಗರಿಸಿದ್ದಾರೆ. ಹಾಗಾದ್ರೆ ಈ ವಂಚನೆ ಪ್ರಕರಣ ನಡೆದಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಲು ಹೋಗಿ 4.4 ಲಕ್ಷ ರೂ ಕಳೆದುಕೊಂಡ ಮಹಿಳೆ:ಆಗಿದ್ದೇನು

ಇಲ್ಲಿ ವಂಚಕರು ವಿಮಾನ ಟಿಕೆಟ್‌ ಬುಕಿಂಗ್‌ ಮಾಡುವ ಪ್ಲಾಟ್‌ಫಾರ್ಮ್‌ನಲ್ಲಿ ಕಾನೂನುಬದ್ಧ ಸಂಪರ್ಕ ಸಂಖ್ಯೆಯನ್ನು ತಮ್ಮದೇ ಆದ ಸಂಖ್ಯೆಯೊಂದಿಗೆ ಬದಲಾಯಿಸಿದ್ದಾರೆ. ಇದರ ಪರಿಣಾಮ ವಿಮಾನ ಪ್ರಯಾಣದ ಟಿಕೆಟ್‌ ಕಾಯ್ದಿರಿಸುವಿಕೆಯನ್ನು ಬಯಸುವ ವ್ಯಕ್ತಿಗಳಿಗೆ ತಮ್ಮ ಫೋನ್‌ ನಂಬರ್‌ ಸಿಗುವಂತೆ ಮಾಡಿದ್ದಾರೆ. ಈ ಮೂಲಕ ವಿಮಾನ ಟಿಕೆಟ್‌ ಬುಕ್‌ ಮಾಡಲು ಬಂದವರಿಗೆ ಉಂಡೆನಾಮ ಹಾಕಿದ್ದಾರೆ.

64 ವರ್ಷದ ಜುಹು ನಿವಾಸಿ ಗೀತಾ ಶೆಣೈ ಎಂಬ ಸಂತ್ರಸ್ತೆ ಆನ್‌ಲೈನ್ ಟಿಕೆಟ್ ವಿಚಾರಣೆಗಾಗಿ ಸ್ಕೈಸ್ಕಾನರ್ ವೆಬ್‌ಸೈಟ್‌ಗೆ ನ್ಯಾವಿಗೇಟ್ ಮಾಡಿದಾಗ ಈ ವಂಚನೆಗೆ ಸಿಲುಕಿದ್ದಾರೆ. ಸೈಟ್‌ನಲ್ಲಿ ಒದಗಿಸಲಾದ ಫೋನ್ ಸಂಖ್ಯೆಗೆ ಕರೆ ಮಾಡಿದ ನಂತರ, ಉತ್ತರಿಸಿದ ವ್ಯಕ್ತಿ, ಸ್ಕೈಸ್ಕ್ಯಾನರ್ ಪ್ರತಿನಿಧಿಯಂತೆ ನಟಿಸಿ, ಅವರ ಮೊಬೈಲ್ ಫೋನ್‌ನಲ್ಲಿ ಯಾವುದೇ ಡೆಸ್ಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸೂಚಿಸಿದ್ದಾರೆ. ಅವರು ಹೇಳಿದ್ದನ್ನು ಅನುಸರಿಸಿ ಶೆಣೈ ಅಂತಿಮವಾಗಿ ಹಣ ಕಳೆದುಕೊಂಡಿದ್ದಾರೆ.

ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಲು ಹೋಗಿ 4.4 ಲಕ್ಷ ರೂ ಕಳೆದುಕೊಂಡ ಮಹಿಳೆ:ಆಗಿದ್ದೇನು

ಅಂದರೆ ವಂಚಕನು ಬುಕಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ನೆಪದಲ್ಲಿ, ಅವರ ಫೋನ್‌ಗೆ ಅನಧಿಕೃತ ಪ್ರವೇಶವನ್ನು ಅನ್‌ಲಾಕ್ ಮಾಡುವ ಮೂಲಕ ಸ್ವೀಕರಿಸಿದ ಕೋಡ್ ಅನ್ನು ಹಂಚಿಕೊಳ್ಳುವುದಕ್ಕೆ ಸೂಚಿಸಿದ್ದನೆ. ನಂತರ ಆವರ ಮೊಬೈಲ್‌ ಪ್ರವೇಶವನ್ನು ಪಡೆದುಕೊಂಡ ವಂಚಕ ಆಕೆಯ ಬ್ಯಾಂಕ್ ಖಾತೆಯಿಂದ 4.4 ಲಕ್ಷ ರೂ.ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ತನ್ನ ಬ್ಯಾಂಕ್ ಖಾತೆಯಿಂದ 4.4 ಲಕ್ಷ ರೂಪಾಯಿಗಳ ಅನಧಿಕೃತ ವಹಿವಾಟು ಆಗಿರುವುದನ್ನು ಅರಿತ ಸಂತ್ರಸ್ತೆ ಜುಹು ಪೊಲೀಸರಿಗೆ ಘಟನೆಯನ್ನು ವರದಿ ಮಾಡಿದ್ದು, ಅಧಿಕಾರಿಗಳು ಕೂಡಲೇ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಲು ಹೋಗಿ 4.4 ಲಕ್ಷ ರೂ ಕಳೆದುಕೊಂಡ ಮಹಿಳೆ:ಆಗಿದ್ದೇನು

ಆನ್‌ಲೈನ್‌ ವಂಚನೆಗಳಿಂದ ಪಾರಾಗುವುದು ಹೇಗೆ?
ಸ್ಕ್ಯಾಮರ್‌ಗಳು ಇಮೇಲ್‌ಗಳು, ಫೋನ್ ಕರೆಗಳು ಅಥವಾ ಸಾಮಾಜಿಕ ಮಾಧ್ಯಮ ಸಂದೇಶಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು ಸಾಮಾನ್ಯವಾಗಿ ಪ್ರಯತ್ನಿಸುತ್ತಾರೆ. ನಿಮ್ಮ ನಂಬಿಕೆಯನ್ನು ಪಡೆಯಲು ಅವರು ಕಾನೂನುಬದ್ಧ ಕಂಪನಿಗಳು ಅಥವಾ ವ್ಯಕ್ತಿಗಳ ಸೋಗಿನಲ್ಲಿ ಮಾತನಾಡುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇದಲ್ಲದೆ ಯಾವುದೇ ಆನ್‌ಲೈನ್ ಸಂಪರ್ಕಕ್ಕೆ ಪ್ರತಿಕ್ರಿಯಿಸುವ ಮೊದಲು, ಅವರ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಸಮಯ ತೆಗೆದುಕೊಳ್ಳಿ. ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಸರಿಯಾಗಿದೆ ಎಂದು ನಿಮಗೆ ತಿಳಿದಿರುವ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನೇರವಾಗಿ ಅವರಿಗೆ ಕರೆ ಮಾಡಿ ವಿವರಣೆ ಪಡೆದುಕೊಳ್ಳಿ.

ಅನಧಿಕೃತವಾಗಿ ಬರುವ ಇಮೇಲ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಅಪರಿಚಿತ ಸಂಖ್ಯೆ ಸಂದೇಶಗಳನ್ನು ನಂಬಿ ಮೋಸಹೋಗಬೇಡಿ. ಬ್ಯಾಂಕ್‌ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿ ಕೆವೈಸಿ ವಿವರಗಳನ್ನು ಕೇಳಿದರೆ ನೀಡಬೇಡಿ. ಏಕೆಂದರೆ ಯಾವುದೇ ಬ್ಯಾಂಕ್‌ ಸಿಬ್ಬಂದಿಯೂ ಕೂಡ ಫೋನ್‌ ಮೂಲಕ ನಿಮ್ಮ ಕವೈಸಿ ವಿವರಗಳನ್ನು ಅಪ್ಡೇಟ್‌ ಮಾಡುವುದಕ್ಕೆ ಹೋಗುವುದಿಲ್ಲ.

Best Mobiles in India

English summary
Mumbai-based woman was duped out of Rs 4.4 lakh in an online scam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+