ವಿಡಿಯೊ ಗೇಮ್‌ನಲ್ಲಿ ಗೆಲ್ಲಲು ಬಾಲಕ ಆತ್ಮಹತ್ಯೆ..ಪೋಷಕರೆ ಏನಿದು ಗೊತ್ತಾ?..ಎಚ್ಚರ!!

By Bhaskar N J

  ಆನ್‌ಲೈನ್ ವಿಡಿಯೊ ಗೇಮ್‌ನಲ್ಲಿ ಜಯಗಳಿಸುವ ಉದ್ದೇಶದಿಂದ ಬಾಲಕನೊಬ್ಬ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ್ ಅಂಧೇರಿ ಬಳಿ ನಡೆದಿದೆ. ಹೌದು, ಮನ್‌ಪ್ರೀತ್ ಸಿಂಗ್ (14) ಎಂದು ಗುರುತಿಸಲಾಗಿರುವ ಬಾಲಕ ಆನ್‌ಲೈನ್ ವಿಡಿಯೊ ಗೇಮ್‌ಗೆ ಆಕರ್ಷಿತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.!!

  'ಬ್ಲೂ ವೇಲ್‌' ಎಂಬ ಭಯಾನಕ ಆನ್‌ಲೈನ್‌ ಗೇಮ್‌ನ ಹುಚ್ಚು ಹಿಡಿಸಿಕೊಂಡ ಮನ್‌ಪ್ರೀತ್ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಗೆದ್ದು ಕೊನೆಯ ಹಂತ ತಲುಪಿದ್ದನು. ಆ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ನೀವು ಆಟದಲ್ಲಿ ಗೆದ್ದಂತೆ ಎಂದು ಹೇಳಲಾಗಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಗೇಮ್ ಸೂಚಕರ ಪ್ರಕಾರ ಕೊನೆಯ ಸವಾಲು ಒಪ್ಪಿಕೊಂಡ ಮನ್‌ಪ್ರೀತ್, ಏಳನೇ ಮಹಡಿಯಿಂದ ಜಿಗಿದು ಸಂಜೆ 5ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಮನ್‌ಪ್ರೀತ್ ಮೊಬೈಲ್‌ನಲ್ಲಿ . ಮನ್‌ಪ್ರೀತ್ ಆತ್ಮಹತ್ಯೆ ಮಾಡಿಕೊಂಡಿರುವುದು ಸೆರೆಯಾಗಿದೆ. ಇದನ್ನು ನೋಡಿದ ನೆರೆಹೊರೆಯ ಸಾಕ್ಷಿಗಳಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಭಾರತದಲ್ಲೇ ಇದು ಮೊದಲ ಪ್ರಕರಣವಾಗಿದ್ದು, ಹಾಗಾದರೆ, ಏನಿದು ಸೂಸೈಡ್ 'ಬ್ಲೂ ವೇಲ್‌' ಎಂಬ ಭಯಾನಕ ಆನ್‌ಲೈನ್‌ ಗೇಮ್‌? ಮಕ್ಕಳು ಏಕೆ ಈ ಗೇಮ್‌ಗೆ ಆಕರ್ಷಿತರಾಗುತ್ತಾರೆ.? ಈ ಗೇಮ್ ಎಲ್ಲಿ ನಡೆಯುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪು!!

  ರಷ್ಯಾದಲ್ಲಿ ವಿಕೆ ಹೆಸರಿನ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದ್ದು, ಇದರಲ್ಲಿ ‘ಬ್ಯೂ ವೇಲ್' ಹೆಸರಿನ ನಿಗೂಢ ಗುಂಪೊಂದು ಕಾರ್ಯನಿರ್ವಹಿಸುತ್ತಿದೆ. ತನ್ನನ್ನು ತಾನು ‘ಆನ್‌ಲೈನ್ ಗೇಮ್' ಎಂದು ಕರೆದುಕೊಂಡಿರುವ ‘ಬ್ಲೂ ವೇಲ್'ಗೆ 12 ರಿಂದ 16ರ ನಡುವಿನ ಯುವಕ ಯುವತಿಯರು ಸದಸ್ಯರಾಗುತ್ತಾರೆ. ನಂತರ ಅವರಿಗೆ 50 ದಿನಗಳ ಆಟಕ್ಕೆ ಅಹ್ವಾನ ನೀಡಲಾಗುತ್ತದೆ.!!

  ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ!!

  ಈ ಆಟದ ಪ್ರಕಾರ ಮೇಲ್ವಿಚಾರರಕರು ಭಾಗವಹಿಸುವ ಅಭ್ಯರ್ಥಿಗೆ 50 ದಿನ 50 ಸವಾಲುಗಳನ್ನು ನೀಡುತ್ತಾರೆ. ಅಭ್ಯರ್ಥಿಯು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜಯಗಳಿಸಬೇಕು. ಒಮ್ಮೆ ಆಟಕ್ಕೆ ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗುತ್ತದೆ.

  ಹೇಗಿರುತ್ತದೆ ಟಾಸ್ಕ್‌ಗಳು?

  ಬ್ಲೂವೇಲ್ ಗೇಮ್ ಆಟಗಾರನಿಗೆ ಹಾರರ್ ಸಿನಿಮಾ ನೋಡುವುದು, ರಾತ್ರಿ ವೇಳೆಯಲ್ಲಿ ಎದ್ದು ವಾಕ್ ಮಾಡುವುದು, ಹಾಗೂ ತನಗೆ ತಾನೇ ನೋವುಂಟು ಮಾಡಿಕೊಳ್ಳುವುದು ಸೇರಿ ಹಲವು ವಿಕೃತ ಗೇಮ್‌ಗಳಿರುತ್ತವೆ. ಈ ಗೇಮ್‌ಗೆ ಜಗತ್ತಿನಾದ್ಯಂತ ಹಲವು ವಯಸ್ಕರು ಬಲಿಯಾಗುತ್ತಿದ್ದಾರೆ!! ಈವರೆಗೆ 130 ಯುವಕ ಯುವತಿಯರು ಸಾವನ್ನಪ್ಪಿದ್ದಾರೆ ಎಂಬುದು ಅವರ ಸಾಮಾಜಿಕ ಜಾಲತಾಣದ ಕೊನೆಯ ಸ್ಟೇಟಸ್‌ಗಳು ಹೇಳುತ್ತಿವೆ.!!

  ಮಾನಸಿಕ ಹಿಡಿತ ಸಾಧಿಸುತ್ತಾರೆ.!!

  ಮೊದಲ 49 ದಿನಗಳ ಅಂತರದಲ್ಲಿ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಅಷ್ಟೊತ್ತಿಗಾಗಲೇ ಗುಂಪಿನ ನಿರ್ವಾಹಕರು ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸಿ, 50ನೇ ದಿನ ಸದಸ್ಯರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.!!

  ಇದರಿಂದ ಅವರಿಗೆ ಲಾಭ ಏನು?

  ಅಂತರ್ಜಾಲದಲ್ಲಿ ಜಾರಿಯಲ್ಲಿರುವ ‘ಸೈಕೋ' ಮನಸ್ಥಿತಿಗೆ ಈ ಗೇಮ್ ಅನ್ನು ಹೋಲಿಸಲಾಗಿದೆ. ಚಾಕುವಿನಿಂದ ಚುಚ್ಚಿಕೊಳ್ಳುವುದು, ಚಲಿಸುವ ರೈಲಿನಿಂದ ಹಾರುವುದು, ರಕ್ತನಾಳಗಳನ್ನು ಕೊಯ್ದುಕೊಳ್ಳುವುದು ಹೀಗೆ ಭೀಕರ ಎನ್ನಿಸುವ ದೃಶ್ಯಾವಳಿಗಳಿಂದ ಅಂತರ್ಜಾಲದ ಗುಂಪುಗಳನ್ನು ಹೆಚ್ಚಿಸುವ ತಂತ್ರವೂ ಇದರ ಹಿಂದಿದೆ ಎನ್ನುತ್ತವೆ ಕೆಲವು ವರದಿಗಳು.!!

  ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ!!

  ರಷ್ಯಾದಿಂದ ಆರಂಭಗೊಂಡ ಈ ಆತ್ಯಹತ್ಯೆ ಮಾಡಿಕೊಳ್ಳುವ ಆನ್‌ಲೈನ್ ಆಟ ಯುರೋಪಿನ ಹಲವು ದೇಶಗಳಲ್ಲಿಯೂ ನಿಗೂಢವಾಗಿ ಕಾರ್ಯನಿರ್ವಹಿಸುತ್ತಿದೆ. ಲಂಡನ್‌ ಸೇರಿದಂತೆ ಹಲವು ದೊಡ್ಡ ನಗರಗಳಲ್ಲಿ ಮಕ್ಕಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಭಾರತದಲ್ಲಿ ಇದೇ ಮೊದಲ ಘಟನೆ ನಡೆದಿದ್ದು, ಈ ಬಗ್ಗೆ ಮಕ್ಕಳ ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.!!

  ಓದಿರಿ:ಆಧಾರ್ ಇದ್ದರೆ 5 ನಿಮಿಷದಲ್ಲಿ ATMನಲ್ಲಿಯೇ ಬ್ಯಾಂಕ್ ಅಕೌಂಟ್ ಓಪನ್, ಡೆಬಿಟ್ ಕಾರ್ಡ್ ಲಭ್ಯ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  According to reports, the Blue Whale suicide game is a social media group provoking youngsters to kill themselves.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more