ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

Written By:

ವಾಟ್ಸಾಪ್‌ನಲ್ಲಿ ಅಕೌಂಟೆನ್ಸಿ ಪೇಪರ್ ಲೀಕ್ ಆಗಿದ್ದು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಎಚ್‌ಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗುತ್ತಿರುವುದು ಸಂದೇಹಕ್ಕೆ ಕಾರಣವುಂಟು ಮಾಡಿದೆ.

ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

ಇನ್ನು ಅಧಿಕೃತ ಪ್ರಕಟಣೆಯಂತೆ ವಿದ್ಯಾರ್ಥಿಗಳು ಗಾಬರಿಗೊಳಬೇಕಾಗಿಲ್ಲ ಅಂತೆಯೇ ಮರುಪರೀಕ್ಷೆ ನಡೆಸುವ ಇರಾದೆಯಿಲ್ಲ ಎಂಬುದನ್ನು ತಿಳಿಸಿದೆ. ಇನ್ನು ವರದಿಗಳ ಪ್ರಕಾರ ಸೋಮವಾರ ಬೆಳಗ್ಗೆ 10:50 ರ ನಂತರ ಸಂದೇಶವು ಹಬ್ಬಿದ್ದು ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿದ್ದರು ಮತ್ತು ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಗಿತ್ತು.

ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

ಆದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಮಂಡಳಿ ತಿಳಿಸಿದೆ. ಇನ್ನು ಒಂದು ಅಂದಾಜಿನ ಪ್ರಕಾರ ಈ ಕೃತ್ಯ ಯಾವುದಾದರೂ ವಿದ್ಯಾರ್ಥಿಯದ್ದೇ ಆಗಿದ್ದು ಪ್ರಶ್ನೆ ಪತ್ರಿಕೆಯ ಚಿತ್ರವನ್ನು ತೆಗೆದು ವಾಟ್ಸಾಪ್‌ಲ್ಲಿ ಹಬ್ಬಿಸಲಾಗಿದೆ ಎಂದು ಮುಂಬೈನ ಡಿವಿಶನಲ್ ಬೋರ್ಡ್ ಸೆಕ್ರೇಟರಿ ಚಂದೇಕರ್ ತಿಳಿಸಿದ್ದಾರೆ.

ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ

ಪ್ರಕರಣವು ಸೋಮವಾರ ಬೆಳಗ್ಗೆ 11.30 ಯ ನಂತರ ಗಮನಕ್ಕೆ ಬಂದಿದ್ದು ಬೋರ್ಡ್‌ನ ಹಿರಿಯ ಸದಸ್ಯರು ಇದೇ ಸಂದೇಶವನ್ನು ಸ್ವೀಕರಿಸಿದ್ದರು. ಕೂಡಲೇ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಯಿತು ಎಂದು ಸದಸ್ಯರು ತಿಳಿಸಿದ್ದಾರೆ.

English summary
This article tells about Mumbai HSC exam paper 'leaked' on Whatsapp.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot