Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಸಿನಿಮಾ ರಿವ್ಯೂ ಬರೆಯಲು ಹೋಗಿ 1.09 ಕೋಟಿ ಕಳೆದುಕೊಂಡ ಭೂಪ!

ಆನ್‌ಲೈನ್‌ನಲ್ಲಿ ಕಮಿಷನ್‌ ಆಸೆ ಹುಟ್ಟಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಭಾರತದಲ್ಲಿ ಹೊಸದೇನಲ್ಲ. ಆದರೆ ಮುಂಬೈನಲ್ಲಿ ನಡೆದಿರುವ ಈ ಪ್ರಕರಣ ಎಂತಹವರನ್ನು ಕೂಡ ಬೆಚ್ಚಿ ಬೀಳುವಂತೆ ಮಾಡಲಿದೆ. ಯಾಕೆಂದರೆ ಇಲ್ಲಿ ವಂಚಕರಿಂದ ಮೋಸ ಹೋಗಿರುವ ವ್ಯಕ್ತಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ ಅನ್ನೊದು ವಿಪರ್ಯಾಸ.

ಹೌದು, ನೀವು ಆನ್‌ಲೈನ್‌ನಲ್ಲಿ ಸಿನಿಮಾ ಬಗ್ಗೆ ರಿವ್ಯೂ ಬರೆಯಿರಿ, ಅಲ್ಲದೆ ಸಿನಿಮಾಗಳಿಗೆ ರೇಟಿಂಗ್‌ ನೀಡಿದರೆ ಒಳ್ಳೆ ಆದಾಯ ಸಿಗಲಿದೆ. ಅದಕ್ಕೆ ನಾವ್‌ ಗ್ಯಾರಂಟಿ ಹಾಗೇ ಹೀಗೆ ಅಂತಾ ಆನ್‌ಲೈನ್‌ನಲ್ಲಿ ಹೇಳೋರ ಮಾತು ಕೇಳುವ ಮುನ್ನ ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಒಂದು ಕೋಟಿಗೂ ಅಧಿಕ ಹಣ ವಂಚಕರ ಪಾಲಾಗಿದ್ದು ಹೇಗೆ? ಇದಕ್ಕೆ ಕಾರಣ ಏನು? ಇದೆಲ್ಲದರ ಪರಿಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ನಲ್ಲಿ ಸಿನಿಮಾ ರಿವ್ಯೂ ಬರೆಯಲು ಹೋಗಿ 1.09 ಕೋಟಿ ಕಳೆದುಕೊಂಡ ಭೂಪ!

ಮುಂಬೈನ ವಿರಾರ್‌ದ ಗೋಕುಲ್‌ ಟೌನ್‌ಶಿಪ್‌ನಲ್ಲಿ ವಾಸಿಸುವ 43 ವರ್ಷದ ವೈದ್ಯರೊಬ್ಬರು ವಂಚಕರಿಂದ ಮೋಸ ಹೋಗಿದ್ದಾರೆ. ವಂಚಕರು ವೈದ್ಯರಿಗೆ ಟೆಲಿಗ್ರಾಮ್‌ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ. ನೀವು ಸಿನಿಮಾ ರಿವ್ಯೂ ಮಾಡಿ ಉತ್ತಮ ರೇಟಿಂಗ್‌ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ಹೇಳಿದ್ದಾರೆ. ಸುಲಭವಾಗಿ ಹಣಗಳಿಸುವ ಆಸೆಗೆ ಬಿದ್ದ ವೈದ್ಯರು ಕೂಡ ವಂಚಕರ ಆಮಿಷವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಕಮಿಷನ್‌ ಪಡೆಯುವುದಕ್ಕಾಗಿ ಹೊಸ ಬ್ಯಾಂಕ್‌ ಅಕೌಂಟ್‌ ತೆರೆಯಲು ವಂಚಕರಿಗೆ ಬ್ಯಾಂಕ್‌ ವಿವರಗಳನ್ನು ಸಹ ನೀಡಿದ್ದಾರೆ.

ಇದಾದ ನಂತರ ವಂಚಕರ ಸೂಚನೆಯಂತೆ ವೈದ್ಯರು ಆನ್‌ಲೈನ್‌ನಲ್ಲಿ 28 ಚಲನಚಿತ್ರ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಅಲ್ಲದೆ ಸಿನಿಮಾ ಬಗ್ಗೆ ರಿವ್ಯೂ ಅನ್ನು ಕೂಡ ಬರೆದಿದ್ದಾರೆ. ಕೂಡಲೇ ಅವರ ಖಾತೆಗೆ 830ರೂ.ಗಳು ಕಮಿಷನ್ ರೂಪದಲ್ಲಿ ಬಂದಿದೆ. ವಂಚಕರು ವೈದ್ಯರನ್ನು ಸುಲಭವಾಗಿ ತಮ್ಮನ್ನು ನಂಬುವಂತೆ ಮಾಡಲು ಹಂತಹಂತವಾಗಿ ಕಮಿಷನ್‌ ನೀಡುತ್ತಾ ಬಂದಿದ್ದಾರೆ. ನಂತರ ಹೆಚ್ಚಿನ ಕಮಿಷನ್‌ ಪಡೆಯಬೇಕಾದರೆ ನೀವು 9,900ರೂ. ವರ್ಗಾಯಿಸುವಂತೆ ಮಾಡಿದ್ದಾರೆ. ನಂತರ ನಿಮ್ಮ ಖಾತೆಗೆ 31 ಲಕ್ಷ ರೂ.ಕಮಿಷನ್‌ ಬಂದಿದೆ ಎಂದು ವಂಚಕರು ವೈದ್ಯರಿಗೆ ತಿಳಿಸಿದ್ದಾರೆ.

ಆದರೆ, ನೀವು ನಿಮ್ಮ ಕಮಿಷನ್‌ ಹಣ ಹಿಂಪಡೆಯಲು ಮೊದಲ 15 ಲಕ್ಷ ರೂ. ಪಾವತಿಸಬೇಕು ಎಂದಿದ್ದಾರೆ. ಹೀಗೆ ನಾಲ್ಕೈದು ದಿನಗಳ ನಂತರ ನಿಮಗೆ 1.96 ಕೋಟಿ ರೂ.ಗೆ ಕಮಿಷನ್‌ ಬಂದಿದೆ ಎಂದುದ್ದಾರೆ. ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಗಳ ಸೋಗಿನಲ್ಲಿ ಕರೆ ಮಾಡಿ 8 ಲಕ್ಷ ರೂಪಾಯಿಗಳನ್ನು 'ಆದಾಯ ತೆರಿಗೆ' ಪಾವತಿಸುವಂತೆ ಹೇಳಿದ್ದಾರೆ. ಹೀಗೆ ಹಲವು ವಿಧಗಳಲ್ಲಿ ವೈದ್ಯರಿಂದ ಹಣ ವರ್ಗಾಯಿಸಿಕೊಂಡು ಹೆಚ್ಚು ಕಡಿಮೆ 1.09 ಕೋಟಿ ರೂ. ಹಣ ವಂಚಿಸಿದ್ದಾರೆ ಎಂದು ವೈದ್ಯರು ಪೊಲೀಸ್‌ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ವಂಚಕರಿಂದ ಸುರಕ್ಷಿತವಾಗಿರುವುದು ಹೇಗೆ?
* ಅಪರಿಚತರೊಡನೆ ಆನ್‌ಲೈನ್‌ನಲ್ಲಿ ಯಾವುದೇ ವ್ಯವಹಾರ ನಡೆಸಬೇಡಿ.
* ನಿಮ್ಮ ಹಣಕಾಸು ಮಾಹಿತಿ, ಬ್ಯಾಂಕಿಂಗ್‌ ವಿವರಗಳನ್ನು ಆನ್‌ಲೈನ್‌ನಲ್ಲಿ ಶೇರ್‌ ಮಾಡಬಾರದು
* ಪಾರ್ಟ್‌ ಟೈಂ ಕೆಲಸಕ್ಕೆಂದು ಸಿಕ್ಕ ಸಿಕ್ಕ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಬೇಡಿ
* ಅಪರಿಚಿತರು ಹೇಳುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ
* ಬ್ಯಾಂಕ್‌ ಹೆಸರಿನಲ್ಲಿ ಯಾವುದೇ ಸಿಬ್ಬಂದಿ ಕರೆ ಮಾಡುವುದಿಲ್ಲ ಎಂದು ನೆನಪಿರಲಿ
* ಬ್ಯಾಕ್‌ ಸಿಬ್ಬಂದಿ ಎಂದಿಗೂ ಕೂಡ ನಿಮ್ಮ ಬಳಿ ಒಟಿಪಿ ಸಂಖ್ಯೆ ಕೇಳುವುದಿಲ್ಲ ಎಂಬುದು ತಿತಿಳಿದಿರಲಿ
* ಕಮಿಷನ್‌ ಆಸೆಗೆ ಸಿಕ್ಕ ಸಿಕ್ಕ ಕೆಲಸ ಮಾಡಲು ಹೋಗಬೇಡಿ

Best Mobiles in India

English summary
Mumbai man loses Rs 1.09 crore to scammers:Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+