‘ಪಬ್​ಜಿ‘ ಚಟಕ್ಕೆ ಮತ್ತೊಂದು ಬಲಿ!..ಈ ಕಾರಣಕ್ಕೆ ಎಂದರೆ ನೀವು ನಂಬುವುದಿಲ್ಲ!!

|

ಜನಪ್ರಿಯ ಆನ್‌ಲೈನ್ ಗೇಮ್ 'ಪಬ್​ಜಿ' ಆಟವಾಡಲು ಹೊಸ ಮೊಬೈಲ್​ ಕೊಡಿಸದ್ದಕ್ಕೆ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಆತಂಕಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. 'ಪಬ್​ಜಿ' ಚಟಕ್ಕೆ ಬಿದ್ದಿದ್ದ ಬಾಲಕನಿಗೆ ಆತನ ಪೋಷಕರು ಹೆಚ್ಚು ಬೆಲೆಯ ಸ್ಮಾರ್ಟ್‌ಪೋನ್ ಕೊಡಿಸದೇ ಇರುವ ಕಾರಣ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಇದೇ ಕಾರಣಕ್ಕೆ ಮನನೊಂದ ಬಾಲನು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಲ್ಲಿನ ಪೋಲಿಸರು ಕೂಡ ತಿಳಿಸಿದ್ದಾರೆ.

ಮುಂಬೈನ ನೆಹರು ನಗರದಲ್ಲಿ ನೆಲೆಸಿರುವ ಕುಟುಂಬವೊಂದರಲ್ಲಿ ಇಂತಹ ಘಟನೆ ನಡೆದಿದ್ದು, ಬಾಲಕ ತನ್ನ ಪೋಷಕರ ಬಳಿ ಪಬ್‌ಜಿ ಗೇಮ್ ಅನ್ನು ಅತ್ಯುತ್ತಮವಾಗಿ ಸಪೋರ್ಟ್ ಮಾಡುವ 37,000 ಮೊಬೈಲ್​ ತೆಗೆದು ಕೊಡುವಂತೆ ಒತ್ತಾಯಿಸಿದ್ದಾನೆ. ಆದರೆ, ಪೋಷಕರು 20,000 ರೂ.ಗಿಂತ ಅಧಿಕ ಬೆಲೆಯ ಮೊಬೈಲ್​ ತೆಗೆದುಕೊಡುವುದಿಲ್ಲವೆಂದು ಪೋಷಕರು ಹೇಳಿದ್ದಾರೆ. ತಾನು ಹೇಳಿದ ಮೊಬೈಲ್​ ತೆಗೆದುಕೊಡಲು ನಿರಾಕರಿಸಿದ ಕಾರಣ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

‘ಪಬ್​ಜಿ‘ ಚಟಕ್ಕೆ ಮತ್ತೊಂದು ಬಲಿ!..ಈ ಕಾರಣಕ್ಕೆ ಎಂದರೆ ನೀವು ನಂಬುವುದಿಲ್ಲ!!

ಮಕ್ಕಳ ಮೇಲಿನ ನಿರ್ಲಕ್ಷ್ಯದಿಂದ ಅಥವಾ ಅರ್ಥ ಮಾಡಿಕೊಳ್ಳುವುದರಲ್ಲಿ ಪಾಲಕರು ವಿಫಲವಾಗುತ್ತಿರುವುದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಹಾಗಾಗಿ, ಸಾಧ್ಯವಾದಷ್ಟು ಈ ಗೇಮ್​ನಿಂದ ದೂರ ಉಳಿದರೆ ಒಳಿತು. ಅದರಲ್ಲೂ ಮಕ್ಕಳು ಇದರಿಂದ ದೂರ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಗೇಮಿಂಗ್ ವ್ಯಸನ ಎಂಬ ಕರಾಳ ಲೋಕ ಮತ್ತು ಜನಪ್ರಿಯ ಗೇಮ್ ಪಬ್‌ಜಿ ಬಗೆಗೆ ನಿಮ್ಮನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಬೇಕೇಬೇಕು ಗೇಮ್

ಬೇಕೇಬೇಕು ಗೇಮ್

ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!

ಕೋಟ್ಯಾಂತರ ಮಾರುಕಟ್ಟೆ!

1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!

ಗೇಮಿಂಗ್ ಎಂಬ ಕರಾಳ ಲೋಕ!

ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.

ಸಮಸ್ಯೆ ಬಹಳಷ್ಟಿದೆ.

ಕೋಟ್ಯಾಂತರ ಜನ ನಿರರ್ಥಕವಾಗಿ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ಸಾಧ್ಯವೇ.?

Best Mobiles in India

English summary
The teenager demanded a high-end smartphone which was priced around Rs 37,000 to play PUBG Mobile. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X