Subscribe to Gizbot

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ಅಣಬೆ ಬ್ಯಾಟರಿ ಆವಿಷ್ಕಾರ

Written By:

ಪ್ರಪಂಚದಾದ್ಯಂತ ಇಂದು ಇಂಧನ ಕ್ಷೇತ್ರದಲ್ಲಿ, ವಿದ್ಯುತ್‌ ಉತ್ಪಾದನೆ ಸಂಶೋಧನೆ ಕ್ಷೇತ್ರದಲ್ಲಿ ಹಲವು ರೀತಿಯ ಆವಿಷ್ಕಾರಗಳು ಅಭಿವೃದ್ದಿಗೊಳ್ಳುತ್ತಲೆ ಇವೆ. ಅಲ್ಲದೇ ಸ್ಮಾರ್ಟ್‌ ಗ್ಯಾಜೆಟ್‌ಗಳು, ಇಲೆಕ್ಟ್ರಿಸಿಟಿ ಇಲ್ಲದೇ ಬಳಸಲು ಸಾಧ್ಯವಾಗದ ಸಂದರ್ಭ ಎದುರಾಗುವುದನ್ನು ಮನಗಂಡು ಸ್ಮಾರ್ಟ್‌ಗ್ಯಾಜೆಟ್‌ಗಳಿಗೆ ಹಲವು ವಿಧಾನಗಳಿಂದ ಪವರ್‌ ನೀಡುವ ಸಂಶೋಧನೆಗಳು ಹೊಸ ಹೊಸದಾಗಿ ನೆಡೆಯುತ್ತಲೇ ಇವೆ. ಅಂತೆಯೇ ಇಂದಿನ ಲೇಖನದಲ್ಲಿ ಸಂಶೋಧಕರು ಅಗ್ಗದ ಬೆಲೆಯ ಅಣಬೆಗಳಿಂದ ಲಿಥಿಯಂ ಐಯಾನ್ ಬ್ಯಾಟರಿಯೊಂದನ್ನು ಅಭಿವೃದ್ದಿಗೊಳಿಸಿದ್ದಾರೆ.

ಓದಿರಿ :ಮಾಲ್ವಿಯ ಸಾಹಸ: ಮಣ್ಣಿನ ಸ್ಟವ್‌ನಿಂದ ಫೋನ್ ಚಾರ್ಜ್

ಅಣಬೆ ಬ್ಯಾಟರಿಯ ವಿಶೇಷತೆ ಏನಪ್ಪಾ ಅಂದ್ರೆ ಸರಳ ರೀತಿಯಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಇಲೆಕ್ಟ್ರಿಕ್‌ ಗ್ಯಾಜೆಟ್‌ಗಳನ್ನು ವಿದ್ಯುತ್‌ ಸೌಲಭ್ಯ ಇಲ್ಲದಾಗಲು ಸಹ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಈ ಅಣಬೆ ಬ್ಯಾಟರಿಯ ವಿಶೇಷತೆ ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನ್ಯಾನೋ ಕಾರ್ಬನ್‌ ವಿನ್ಯಾಸ

ನ್ಯಾನೋ ಕಾರ್ಬನ್‌ ವಿನ್ಯಾಸ

ನ್ಯಾನೋ ಕಾರ್ಬನ್‌ ವಿನ್ಯಾಸದಲ್ಲಿ ಜೈವಿಕ ವಸ್ತುವಾದ ಅಣಬೆಗಳನ್ನು ಬಳಸಿಕೊಂಡು ಗ್ರಾಫೈಟ್‌ ಆಧಾರಿತ ಆನೋಡ್ಗಳ ಆಧಾರಿತವಾದ ಒಂದು ಸಮರ್ಥನೀಯವಾದ ಬ್ಯಾಟರಿಯನ್ನು ತಯಾರಿಸಬಹುದು ಎಂದು ಅಮೇರಿಕಾದ ಕ್ಯಾಲಿಫೋರ್ನಿಯಾ ರಿವರ್ಸೈಡ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ವಸ್ತುಗಳ ವಿಜ್ಞಾನ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಪ್ರಾಧ್ಯಾಪಕ Cengiz Ozkan ಹೇಳಿದ್ದಾರೆ.

ಸಂಶ್ಲೇಷಿತ ಗ್ರಾಫೈಟ್‌

ಸಂಶ್ಲೇಷಿತ ಗ್ರಾಫೈಟ್‌

ರೀಚಾರ್ಜ್ ಲಿಥಿಯಂ ಐಯಾನ್ ಬ್ಯಾಟರಿ ಆನೋಡ್ಗಳ ಪ್ರಸ್ತುತ ಕೈಗಾರಿಕಾ ಗುಣಮಟ್ಟವಾಗಿದ್ದು, ಇದು ಸಂಶ್ಲೇಷಿತ ಗ್ರಾಫೈಟ್‌ ಆಗಿದೆ.

ಪರಿಸರಕ್ಕೆ ಮಾರಕ

ಪರಿಸರಕ್ಕೆ ಮಾರಕ

ಆದರೆ ಇದನ್ನು ಶುದ್ಧೀಕರಣ ಮಾಡಬೇಕಿರುವುದರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಅಲ್ಲದೇ, ಪರಿಸರಕ್ಕೆ ಮಾರಕ ಪ್ರಕ್ರಿಯೆಗಳಾಗಿವೆ ಎನ್ನಲಾಗಿದೆ.

ಜೈವಿಕ ವಸ್ತುಗಳಲ್ಲಿ ಹೆಚ್ಚು ಕಾರ್ಬನ್‌ ಅಂಶ

ಜೈವಿಕ ವಸ್ತುಗಳಲ್ಲಿ ಹೆಚ್ಚು ಕಾರ್ಬನ್‌ ಅಂಶ

ಸಂಶ್ಲೇಷಿತ ಗ್ರಾಫೈಟ್‌ ಬದಲಾಗಿ, ಜೈವಿಕ ವಸ್ತುಗಳು ಹೆಚ್ಚು ಕಾರ್ಬನ್‌ ಅಂಶವನ್ನು ಹೊಂದಿರುವುದರಿಂದ ಇದನ್ನು ಬಳಸಬಹುದಾಗಿದೆ. ಅಲ್ಲದೇ ಇದು ಪರಿಸರ ಸ್ನೇಹಿಯಾಗಿ ಸಂಶೋಧನಾಕಾರರ ಗಮನ ಸೆಳೆದಿದೆ.

ಅಣಬೆಗಳನ್ನು ಜೀವರಾಶಿಯಾಗಿ ಬಳಸಿಕೊಳ್ಳಲು ಸಿದ್ದತೆ ರೂಪಿಸಿದ್ದಾರೆ

ಅಣಬೆ

ಸಂಶೋಧನಾಕಾರರು ಅಣಬೆಗಳನ್ನು ಜೀವರಾಶಿಯಾಗಿ ಬಳಸಿಕೊಳ್ಳಲು ಸಿದ್ದತೆ ರೂಪಿಸಿದ್ದಾರೆ. ಹಿಂದಿನ ಸಂಶೋಧಕರು ಅದನ್ನು ಹೆಚ್ಚು ರಂಧ್ರಗಳಿರುವ ಹಾಗೆ ಸ್ಥಾಪಿಸಿದ್ದರು. ಅಂದರೆ, ಅವುಗಳು ಲಿಕ್ವಿಡ್‌ಗೆ ಸಣ್ಣ ರಂಧ್ರಗಳಿದ್ದು ಗಾಳಿ ಹೋಗಲು ಅವಕಾಶ ಮಾಡಲಾಗಿತ್ತುಎನ್ನಲಾಗಿದೆ.

ಮೊಬೈಲ್‌ ಫೋನ್‌ಗಳಿಗೂ ಬಳಕೆ

ಮೊಬೈಲ್‌

ಕಾಲಾನಂತರದಲ್ಲಿ ಈ ಬ್ಯಾಟರಿಗಳನ್ನು ಕಾರ್ಬನ್ ವಿನ್ಯಾಸದಲ್ಲಿ ಮೊಬೈಲ್‌ ಫೋನ್‌ಗಳಿಗೂ ಬಳಕೆಯಾಗುವಂತೆ ಸಕ್ರಿಯತೆ ಗೊಳಿಸಲಾಗುವುದು ಎಂದು ರಿವರ್ಸೈಡ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ 'ಬ್ರೆನ್ನನ್ ಕ್ಯಾಂಪ್ಬೆಲ್ ' ವಿವರಿಸಿದ್ದಾರೆ.

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ

ಬ್ಯಾಟರಿಗೆ ರಂಧ್ರಗಳು ಮುಖ್ಯವಾಗಿವೆ. ಏಕೆಂದರೆ, ಇವುಗಳು ಹೆಚ್ಚು ಶಕ್ತಿ ಸಂಗ್ರಹವಾಗಲು ಸಹಾಯಕವಾಗಿವೆ.

ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆ

ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆ

ಅಣಬೆಗಳು ಹೆಚ್ಚು ಪೊಟ್ಯಾಸಿಯಮ್‌ ಉಪ್ಪಿನ ಸಾಂದ್ರತೆಯನ್ನು ಹೊಂದಿರುವುದರಿಂದ ಎಲೆಕ್ಟ್ರೋಲೈಟ್-ಕ್ರಿಯಾಶೀಲ ಘಟಕಗಳಿಗೆ ಹೆಚ್ಚು ಅವಕಾಶನೀಡಿ ಸಾಮರ್ಥ್ಯ ಹೆಚ್ಚಾಗಲು ಕಾರಣವಾಗಿವೆ.

ಇಂಗಾಲದ ಆನೋಡ್ ತಂತ್ರಜ್ಞಾನ

ಇಂಗಾಲದ ಆನೋಡ್ ತಂತ್ರಜ್ಞಾನ

ಅಣಬೆ ಇಂಗಾಲದ ಆನೋಡ್ ತಂತ್ರಜ್ಞಾನವು, ಆಪ್ಟಿಮೈಸೇಶನ್ ಜೊತೆಗೆ ಗ್ರ್ಯಾಫೈಟ್ ಆನೋಡ್ಗಳ ಬದಲಿಸಲಿವೆ ಎಂದು ಸಂಶೋಧಕರು ಹೇಳಿದ್ದಾರೆ.

ರೂಢಿಗತ ಲಿಥಿಯಂ ಅನೋಡ್

ರೂಢಿಗತ ಲಿಥಿಯಂ ಅನೋಡ್

ರೂಢಿಗತ ಲಿಥಿಯಂ ಅನೋಡ್‌ ಎಲೆಕ್ಟ್ರೋಡ್ ಸಾಮರ್ಥ್ಯದಿಂದ ತೊಂದರೆ ಒಡ್ಡುತ್ತದೆ ಎಂದು ಹೇಳಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mushrooms battery Could Help Power Future Smartphones. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot