ಡಬ್ಬಿಂಗ್ ಆಪ್ ಮ್ಯೂಸಿಕಲ್‌ ಲಿ ಆಯ್ತು ಟಿಕ್‌ ಟಾಕ್‌..!

By GizBot Bureau
|

ಎಲ್ಲರಿಗೂ ತಿಳಿದಿರುವ ಅಪ್ಲಿಕೇಷನ್ ಗಳಲ್ಲಿ ಒಂದಾಗಿರುವ ಕ್ಯಾರಿಯೋಕೆ, ಎಸ್ ನಾವು ಮಾತನಾಡುತ್ತಿರುವುದು ಅದೇ ಅಪ್ಲಿಕೇಷನ್ Musical.ly ಇನ್ನು ಮುಂದೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತಿದ್ದು ನೀವು ಟಿಕ್-ಟಾಕ್ ಎಂದು ಕರೆಯಬೇಕಾಗುತ್ತದೆ. ಅದರ ಅರ್ಥ Musical.ly ಯ ಹೆಸರು ಇನ್ನು ಮುಂದೆ ಇತಿಹಾಸದ ಪುಟ ಸೇರುತ್ತಿದೆ ಎಂಬ ವಿಚಾರ ಅಧಿಕೃತವಾಗಿದೆ.

ಡಬ್ಬಿಂಗ್ ಆಪ್ ಮ್ಯೂಸಿಕಲ್‌ ಲಿ ಆಯ್ತು ಟಿಕ್‌ ಟಾಕ್‌..!

ಚೀನಾದ ಮತ್ತೊಂದು ನೆಟ್ ವರ್ಕ್ ಬೈಟ್ ಡ್ಯಾನ್ಸ್ ಗೆ ಕಂಪೆನಿಯ ಜಬಾವ್ದಾರಿಯುತ ಮಾರಾಟದ ಹಿನ್ನೆಲೆಯಲ್ಲಿ ಈ ಹೆಸರು ಬದಲಾವಣೆಯ ಪ್ರಕ್ರಿಯೆ ಜರುಗಿತು. 2014 ರಲ್ಲಿ ಚೀನಾದಲ್ಲಿ ಈ ಸಾಮಾಜಿಕ ನೆಟ್ ವರ್ಕ್ Musical.ly ಪ್ರಾರಂಭವಾಯಿತು. ಸಣ್ಣ 15 ಸೆಕೆಂಡುಗಳ ವೀಡಿಯೋ ಕೇಂದ್ರಿಕರಿಸುವ ಮೂಲಕ ಪ್ರಾರಂಭಿಸಲಾಯಿತು. ಅಲ್ಲಿ ಬಳಕೆದಾರರು ಒಂದು ಹಾಡಿಗೆ ಡಬ್ ಮಾಡುತ್ತಾರೆ ಮತ್ತು ಅದರ ಫಲಿತಾಂಶವನ್ನು ಇತರರೊಡನೆ ಹಂಚಿಕೊಳ್ಳಲು ಅವಕಾಶವಿರುತ್ತದೆ.

ಭಾರತದಲ್ಲಿ ಕಡಿಮೆ ಮಂದಿಗೆ ಇದರ ಪರಿಚಯವಿದ್ದರೂ ಕೂಡ ಈ ನೆಟ್ ವರ್ಕ್ ಸುಮಾರು 100 ಮಿಲಿಯನ್ ಸಕ್ರಿಯ ಬಳಕೆದಾರರ ಬಳಗವನ್ನು ಪ್ರತಿ ತಿಂಗಳು ಹೊಂದಿದೆ ಮತ್ತು 2017 ರಲ್ಲಿ ಚೀನಾದ ಮತ್ತೊಂದು ಬ್ರ್ಯಾಂಡ್ ಗೆ ಮಾರಾಟವಾಯಿತು.ಅದುವೇ ಬೈಟ್ ಡ್ಯಾನ್ಸ್ ಮತ್ತು ಅದರಲ್ಲಿ ಟಿಕ್ ಟಾಕ್ ಎಂದು ಕರೆಯುವ ಆಪ್ ಕೂಡ ಇದೆ.

ಈಗ ಇದೆರಡೂ ಅಪ್ಲಿಕೇಷನ್ ಗಳನ್ನು ವಿಲೀನಗೊಳಿಸಲಾಯಿತು.ಆದರೆ ಆ 15 ನಿಮಿಷಗಳ ವೀಡಿಯೋ ಹಾಗೆಯೇ ಇರುತ್ತದೆ. ಆದರೆ ಅದರ ಪ್ರಮುಖ ವೈಶಿಷ್ಟ್ಯತೆಯೊಂದು ಇನ್ನು ಮುಂದೆ ಇರುವುದಿಲ್ಲ ಅದುವೇ ಬಹಳ ಪ್ರಸಿದ್ಧವಾಗಿರುವ Musical.ly ಅಂದರೆ ಮ್ಯೂಸಿಕ್ ಜೊತೆ ಲಿಪ್ ಸಿಂಕ್ ಮಾಡುವ ಅವಕಾಶ ಲಭ್ಯವಿರುವುದಿಲ್ಲ.

ಬಳಕೆದಾರರಿಗೆ ಮತ್ತೊಂದು ಅಪ್ಲಿಕೇಷನ್ ಹುಡುಕಾಟಕ್ಕೆ ಇದು ನಾಂದಿ ಹಾಡಲಿದೆ ಎಂದು ಹೇಳುವುದು ಬಹಳ ಕಷ್ಟ. ಅಥವಾ ಕೇಶಾ ಸಾಂಗ್ ಇನ್ನಷ್ಟು ಜನರನ್ನು ಆಕರ್ಷಿಸಲಿದೆ ಎಂದು ಹೇಳುವುದು ಕೂಡ ಕಷ್ಟ. ಆದರೆ ಸದ್ಯ ಪ್ಲೇ ಸ್ಟೋರ್ ನಲ್ಲಿ ಈ ನಿಟ್ಟಿನಲ್ಲಿ ಹಲವು ಕಮೆಂಟ್ ಗಳನ್ನು ಗಮನಿಸಬಹುದಾಗಿದೆ.

Best Mobiles in India

English summary
OMG! Musical.ly Is Officially Dead. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X