ಅಮೇಜಾನ್ ಪ್ರೈಮ್‌ನಲ್ಲಿವೆ ಭಾರತ ಕೇಂದ್ರಿತ ಬೆಸ್ಟ್‌ ವಿಡಿಯೋ ಸರಣಿಗಳು..!

  By GizBot Bureau
  |

  ಅಮೇಜಾನ್ ಪ್ರೈಮ್ ಇನ್ವೆನ್ಸ್ ಮೆಂಟ್ ಭಾರತದಲ್ಲಿ ಮಾಡಬಹುದಾದ ಬೆಸ್ಟ್ ಇನ್ವೆಸ್ಟ್ ಮೆಂಟ್ ಗಳಲ್ಲಿ ಒಂದಾಗಿದೆ. ಇದರಲ್ಲಿ ನಿಮಗೆ ದೊಡ್ಡ ಮಟ್ಟದ ಡೀಲ್ ಗಳು ಲಭ್ಯವಾಗುತ್ತದೆ. ಒಂದೇ ದಿನದಲ್ಲಿ ಡೆಲಿವರಿ, ಅಮೇಜಾನ್ ಪ್ರೈಮ್ ಡೇ ಡೀಲ್ ಮತ್ತು ಪ್ರೈಮ್ ಚಂದಾದಾರರಿಗೆ ಬೇಗನೆ ಡೆಲಿವರಿ ಅವಕಾಶ ಹೀಗೆ ಹತ್ತು ಹಲವು ಅವಕಾಶಗಳು ಸಿಗುತ್ತದೆ. ಅಮೇಜಾನ್ ನ ಪ್ರೈಮ್ ಚಂದಾದಾರಿಕೆಯು ತಿಂಗಳಿಗೆ 129 ರುಪಾಯಿ ಅಥವಾ 12 ತಿಂಗಳಿಗೆ 999 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ . ಖಂಡಿತವಾಗಲೂ ಇದು ಹಣಕ್ಕೆ ತಕ್ಕ ಲಾಭವನ್ನು ಒದಗಿಸುತ್ತದೆ.

  ಅಮೇಜಾನ್ ಪ್ರೈಮ್‌ನಲ್ಲಿವೆ ಭಾರತ ಕೇಂದ್ರಿತ ಬೆಸ್ಟ್‌ ವಿಡಿಯೋ ಸರಣಿಗಳು..!

  ಹಾಗಂತ ಪ್ರೈಮ್ ಚಂದಾದಾರಿಕೆಯ ಕೇವಲ ಆನ್ ಲೈನ್ ಶಾಪಿಂಗ್ ಗಾಗಿ ಮಾತ್ರವಲ್ಲ. ಕಂಪೆನಿಯು ನಿಮಗೆ ಫ್ರೀ ವೀಡಿಯೋ ಮತ್ತು ಪ್ರೀಮಿಯಂ ಮ್ಯೂಸಿಕ್ ಸೇವೆಯನ್ನು ಇದು ನೀಡುತ್ತದೆ. ಅಮೇಜಾನ್ ಪ್ರೈಮ್ ವೀಡಿಯೋ ಮತ್ತು ಅಮೇಜಾನ್ ಪ್ರೈಮ್ ಮ್ಯೂಸಿಕ್ ನ ಅಡಿಯಲ್ಲಿ ನೀವು ಈ ಸೇವೆಯನ್ನು ಪಡೆಯಬಹುದು. ಹಾಗಾದ್ರೆ ಭಾರತೀಯ ಗ್ರಾಹಕರು ನೋಡಲೇ ಬೇಕಾದ ಭಾರತೀಯ ಮೂಲದ ಟಾಪ್ 10 ಪ್ರೈಮ್ ವೀಡಿಯೋಗಳ ಪಟ್ಟಿ ಇಲ್ಲಿದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮಾಲ್ಗುಡಿ ಡೇಸ್

  ಹಿಂದಿಯಲ್ಲಿ ಇರುವ ಕ್ಲಾಸಿಕ್ ವೆಬ್ ಸಿರೀಸ್ ಆಗಿರುವ ಆರ್ ಕೆ ನಾರಾಯಣನ್ ಅವರ ಮಾಲ್ಗುಡಿ ಡೇಸ್ ಲಭ್ಯವಿದೆ. ಈ ಸಿರೀಸ್ ನಲ್ಲಿ ಒಟ್ಟು 3 ಸೀಸನ್ ಗಳಿದ್ದು 54 ಎಪಿಸೋಡ್ ಗಳಿವೆ. ಇದರ ನಿರ್ದೇಶಕರೂ ನಟರೂ ಆಗಿರುವ ಶಂಕರ್ ನಾಗ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಇದರಲ್ಲಿ ಇದ್ದಾರೆ. 90 ರ ದಶಕರದ ಇದನ್ನು ಖಂಡಿತ ಈಗ ನೀವು ಪುನಃ ವೀಕ್ಷಿಸಲೇ ಬೇಕು.

  ಬ್ರೀತ್ (Breathe)

  ಇದು ಸಾಮಾನ್ಯ ಭಾರತೀಯನ ಕಾಲ್ಪನಿಕ ಕಥೆಯಾಗಿದೆ. ಇದರ ಪ್ರಮುಖ ಪಾತ್ರದಲ್ಲಿ ಆರ್ ಮಾಧವನ್ ನಟಿಸಿದ್ದಾರೆ. ಅನಾರೋಗ್ಯದಿಂದ ಬಳಲುವ ತನ್ನ ಮಗುವನ್ನು ಕಾಪಾಡುವ ವ್ಯಕ್ತಿಯ ಸುತ್ತ ಕಥೆಯು ಹೆಣೆಯಲ್ಪಟ್ಟಿದೆ. ನಿರೂಪಣೆ ಮತ್ತು ಚಿತ್ರಕಥೆ ಇದರ ಪ್ರಮುಖ ಅಂಶವಾಗಿದೆ.

  ಇನ್ ಸೈಡ್ ಎಡ್ಜ್ 

  ಈ ಹೆಸರನ್ನು ಖಂಡಿತ ಭಾರತೀಯ ಕ್ರಿಕೆಟ್ ಪ್ರೇಮಿಗಳು ತಿಳಿದೇ ಇರುತ್ತಾರೆ.ಇದು ಟಿ ಟ್ವೆಂಟಿ ಕಥೆಯನ್ನು ಆಧರಿಸಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಪ್ರಮುಖ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಟೀ ಸೆಲೆಕ್ಷನ್ ನ ಹಿಂದೆ ನಡೆಯುವ ರಾಜಕೀಯ ಬಗ್ಗೆ ವಿವರಣೆ, ಮ್ಯಾಚ್ ಫಿಕ್ಸಿಂಗ್ ಮತ್ತು ಕಾನೂನು ಬಾಹಿರವಾಗಿ ನಡೆಯುವ ಕೆಲವು ಕ್ರಿಕೆಟ್ ಸಂಬಂಧಿತ ವಿಚಾರಗಳ ವಿವರಣೆಯನ್ನು ಇದರಲ್ಲಿ ಮನರಂಜನಾತ್ಮಕವಾಗಿ ವಿವರಿಸಲಾಗಿದೆ.

  ಚಾಚಾ ವಿಧಾಯಕ್ ಹೈ ಹಮಾರೇ 

  ನೀವು ಕಾಮಿಡಿ ಪ್ರಿಯರಾಗಿದ್ದರೆ, ಖಂಡಿತ ಚಾಚಾ ವಿಧಾಯಕ್ ಹೈ ಹಮಾರೇಯನ್ನು ವೀಕ್ಷಿಸಲೇ ಬೇಕು. ಇದು ಅಮೇಜಾನ್ ಎಕ್ಸ್ ಕ್ಲೂಸಿವ್ ನಲ್ಲಿ ಲಭ್ಯವಿದೆ. ರಾನಿ ಭಯ್ಯಾ ಎಂಬ ಪ್ರಮುಖ ಕಾಮಿಡಿ ಪಾತ್ರವನ್ನು ಜಾಕಿರ್ ಖಾನ್ ನಿರ್ವಹಿಸಿದ್ದಾರೆ. ನಕ್ಕು ನಲಿಸುವ ಮನರಂಜನೆ ನಿಮಗೆ ಬೇಕಾಗಿದ್ದಲ್ಲಿ ಖಂಡಿತ ಇದನ್ನು ವೀಕ್ಷಿಸಬಹುದು.

  ಹಾರ್ಮೊನಿ 

  ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತ ಪ್ರಿಯರಿಗೆ ಇದು ಖಂಡಿತ ಇಷ್ಟವಾಗುತ್ತದೆ. ಎಆರ್ ರೆಹಮಾನ್ ರ ಸಹಯೋಗದೊಂದಿಗೆ ದೇಶದ ವಿವಿಧ ಸಂಗೀತಗಾರರನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ. ಸಂತೋಷ ನೀಡುವ ಮ್ಯೂಸಿಕ್ ನಿಂದ ನಿಮ್ಮನ್ನ ಉಲ್ಲಾಸಿತರನ್ನಾಗಿಸಲು ಇದು ಖಂಡಿತ ಸಹಕಾರಿ. ಬೇರೆಬೇರೆ ಸಂಗೀತ ಸಾಧನಗಳನ್ನು ಇಲ್ಲಿ ಬಳಸಲಾಗಿದೆ.

  ಕಾಮಿಕ್ಸಾನ್ (Comicstaan)

  ಇದು ದೇಶದ ಮುಂದಿನ ದೊಡ್ಡ ಹಾಸ್ಯಗಾರರನ್ನು ಕಂಡುಹಿಡಿಯುವ ಕೆಲಸ. ಇಲ್ಲಿ 7 ಮಂದಿ ನ್ಯಾಯಾಧೀಶರಿದ್ದಾರೆ ಮತ್ತು 10 ಮಂದಿ ಹಾಸ್ಯಗಾರರ ಪಾತ್ರ ನಿರ್ವಹಿಸುವವರಿದ್ದಾರೆ. ಒಂದು ರೀತಿಯಲ್ಲಿ ರಿಯಾಲಿಟಿ ಶೋ. ಪ್ರತಿ ಕಾಮಿಡಿಯನ್ ಗಳು ಪಾತ್ರ ನಿರ್ವಹಿಸುತ್ತಾರೆ ಮತ್ತು ಜಡ್ಜಸ್ ಮತ್ತು ಪ್ರೇಕ್ಷಕರೂ ಕೂಡ ಮತದಾನದ ಮೂಲಕ ಯಾರು ಬೆಸ್ಟ್ ಕಾಮಿಡಿಯನ್ ಎಂದು ಆರಿಸಬೇಕು.

  ಗ್ಯಾಂಗ್ ಸ್ಟರ್ 

  ಇದು ತೆಲುಗು ಸೀರಿಸ್ ಆಗಿದೆ. ಮೂವಿ ನಟರು ಮತ್ತು ಮಾಜಿ ಪ್ರೇಮಿಯ ಸುತ್ತ ಹೆಣೆದಿರುವ ಕಥೆ.ಹೆಸರಿನ ಮೂಲಕ ನೀವಿದನ್ನು ಅಳೆಯಬೇಡಿ. ಇದರಲ್ಲಿ ಹಾಸ್ಯವೂ ಇದೆ ಜೊತೆಗೆ ರೊಮ್ಯಾನ್ಸ್ ಕೂಡ ಇದೆ. ಪ್ರಮುಖ ಪಾತ್ರದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

  ಅಮೇರಿಕಾ ಪ್ಲೇ ಬಾಯ್ 

  ಕೊನೆಯಲ್ಲಿ ನಾವು ಬರೆಯುವ 3 ಭಾರತೀಯ ಮೂಲದ್ದು ಅಲ್ಲ.ಆದರೆ ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದಾದ ಬೆಸ್ಟ್ ವೀಡಿಯೋಗಳಲ್ಲಿ ಇದೂ ಕೂಡ ಸೇರುತ್ತದೆ. ಅಮೇರಿಕನ್ ಪ್ಲೇಬಾಯ್ ಎಂಬುದು ಕುಖ್ಯಾತ ಮ್ಯಾಗಜೀನ್ ಪ್ಲೇಬಾಯ್ ಸ್ಥಾಪಕ ಹಗ್ ಹೆಫ್ನರ್ರವರ ಆಧರಿಸಿ ಒಂದು ಸಾಕ್ಷ್ಯಚಿತ್ರವಾಗಿದೆ. ಒಂದು ಸಾಮ್ರಾಜ್ಯವನ್ನು ನಿರ್ಮಿಸುವ ಒಬ್ಬ ವ್ಯಕ್ತಿಯ ಕಥೆಯಾಗಿದೆ.

  ದಿ ಗ್ರ್ಯಾಂಡ್ ಟೂರ್ 

  ನೀವು ಆಟೋಮೊಬೈಲ್ ಉತ್ಸಾಹಿಯಾಗಿದ್ದಲ್ಲಿ, ಖಂಡಿತ ಗ್ರ್ಯಾಂಡ್ ಟೂರ್ ನ್ನು ವೀಕ್ಷಿಸಲೇ ಬೇಕು. ಇದು ಜೆರೆಮಿ ಕ್ಲಾರ್ಕ್ಸನ್, ರಿಚರ್ಡ್ ಹ್ಯಾಮಂಡ್, ಮತ್ತು ಜೇಮ್ಸ್ ಮೇ ಸ್ಕ್ರಿಪ್ಟ್ ರಹಿತ ಶೋ ಆಗಿದ್ದು ಈಗಾಗಲೇ ಎರಡು ಸೀಸನ್ ಪೂರೈಸಿದೆ. ಆಟೋಮೊಬೈಲ್ ಗಳ ಬಗ್ಗೆ ಹಾಸ್ಯಾತ್ಮಕವಾಗಿ ಹೇಳುವ ಮತ್ತು ಉಸಿರು ಬಿಗಿಹಿಡಿಯುವಂತೆ ಮಾಡುವ ಕೆಲವು ರಿಯಲ್ ಟೆಸ್ಟ್ ಗಳನ್ನು ಇದು ಒಳಗೊಂಡಿರುತ್ತದೆ.

  ಜ್ಯಾಕ್ ರಿಯಾನ್ (Jack Ryan)

  ಇದು ಸೈನ್ಯ ಮತ್ತು ಯುದ್ಧಕ್ಕೆ ಸಂಬಂಧಿಸಿದ ವೆಬ್ ಸಿರೀಸ್ ಆಗಿದ್ದು ಟಾಪ್ ಕ್ಯಾನ್ಸಿಯವರ ಕಾದಂಬರಿ ಆಧರಿಸಿದೆ. 30 ಅಗಸ್ಟ್ ನಿಂದ ಈ ಸರಣಿ ಆರಂಭವಾಗುತ್ತದೆ ಮತ್ತು ಜಾನ್ ಕ್ರಾಸಿನ್ಸ್ಕಿ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಅಮೇಜಾನ್ ನಲ್ಲಿ ವಿಶ್ವಾದ್ಯಂತ ಬಹು ನಿರೀಕ್ಷೆ ಇಟ್ಟುಕೊಂಡಿರುವ ಸರಣಿ ಇದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Must watch "India-centric" shows on Amazon Prime videos. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more