ವಾಟ್ಸಾಪ್‌ನಲ್ಲಿ ಮೆನ್ಶನ್‌ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡುವುದು ಹೇಗೆ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವೈಯಕ್ತಿಕ ಚಾಟ್‌ಗಳು ಮತ್ತು ಗ್ರೂಪ್‌ ಚಾಟ್‌ ನೊಟೀಫಿಕೇಶನ್‌ ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಲು ಈಗಾಗಲೇ ಒಂದು ಆಯ್ಕೆಯನ್ನು ಒದಗಿಸಿದೆ. ಇದೀಗ ಅದೇ ಮಾದರಿಯಲ್ಲಿ ಹೊಸದೊಂದು ಆಯ್ಕೆಯನ್ನು ನೀಡಿದೆ.

ವಾಟ್ಸಾಪ್‌

ಹೌದು ವಾಟ್ಸಾಪ್‌ ಬಳಕೆದಾರರಿಗೆ ಮ್ಯೂಟ್‌ ಮೆನ್ಶನ್‌ ನೋಟಿಫಿಕೇಷನ್‌ ಫೀಚರ್ಸ್‌ ಪರಿಚಯಿಸಿದೆ. ನೀವು ಈಗಾಗಲೇ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಿದ್ದು, ಗ್ರೂಪ್‌ಚಾಟ್‌ನಲ್ಲಿ ಇದನ್ನು ಯಾರಾದರೂ ಪ್ರಸ್ತಾಪಿಸಿದರೆ ಆ ಆಯ್ಕೆಯು ಉಪಯುಕ್ತವಲ್ಲ. ಗ್ರೂಪಿನಲ್ಲಿರುವ ಬಳಕೆದಾರರು ನಿಮ್ಮ ಹಿಂದೆ ಕಳುಹಿಸಿದ ಸಂದೇಶಗಳಲ್ಲಿ ಒಂದಕ್ಕೆ ಪ್ರತ್ಯುತ್ತರಿಸಿದರೆ ಅಥವಾ ಥ್ರೆಡ್‌ನಲ್ಲಿ ನಿಮ್ಮನ್ನು ಉಲ್ಲೇಖಿಸಿದರೆ ನೀವು ನೋಟಿಫಿಕೇಷನ್‌ಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೀರಿ. ಆದರೆ ಈ ಹೊಸ ಫೀಚರ್ಸ್‌ ಇದೆಲ್ಲವನ್ನು ತಡೆಯಲಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ

ನೀವು ವಾಟ್ಸಾಪ್‌ನಲ್ಲಿ ಗ್ರೂಪ್‌ ಚಾಟ್‌ಗಳನ್ನು ಮ್ಯೂಟ್‌ ಮಾಡಿದ್ದರೂ ನಿಮ್ಮ ಹಳೆಯ ಸಂದೇಶವನ್ನು ಮೆನ್ಶನ್‌ ಮಾಡಿ ಚಾಟ್‌ ಮಾಡಿದರೆ ನಿಮಗೆ ಗ್ರೂಪ್‌ ಚಾಟ್‌ ನೋಟಿಫಿಕೇಷನ್‌ ಬರಲಿದೆ. ಅಲ್ಲದೆ ಮ್ಯೂಟ್ ಮಾಡಲಾದ ಗ್ರೂಪ್‌ನಲ್ಲಿರುವ ಅನೇಕ ಸದಸ್ಯರು ನಿಮ್ಮ ಹೆಸರನ್ನು ಪ್ರಸ್ತಾಪಿಸಿ ಚಾಟ್‌ ಮಾಡಿದರೆ ನಿರಂತರವಾಗಿ ನೋಟಿಫಿಕೇಷನ್‌ ಬರುತ್ತಲೇ ಇರಲಿದೆ. ಇದು ನಿಮಗೆ ಕಿರಿಕಿರಿ ಉಂಟುಮಾಡಬಹುದು. ಇದೇ ಕಾರಣಕ್ಕೆ WABetaInfo ವರದಿ ಮಾಡಿದಂತೆ, ಮ್ಯೂಟ್‌ ಮೆನ್ಶನ್‌ ನೋಟಿಫಿಕೇಷನ್‌ ನಿಮಗೆ ಪುಯುಕ್ತವಾಗಲಿದೆ. ವಾಟ್ಸಾಪ್‌ನಲ್ಲಿ ಮ್ಯೂಟ್‌ ಮೆನ್ಶನ್‌ ನೋಟಿಫಿಕೇಷನ್‌ ಬಳಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಮೆನ್ಶನ್‌ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಮೆನ್ಶನ್‌ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡುವುದು ಹೇಗೆ?

ಆಂಡ್ರಾಯ್ಡ್‌ ಮತ್ತು ಐಒಎಸ್ ಎರಡರಲ್ಲೂ ನೀವು ಈಗಾಗಲೇ ಮ್ಯೂಟ್ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಿರುವ ಗುಂಪಿನಲ್ಲಿ ನಿಮ್ಮನ್ನು ಉಲ್ಲೇಖಿಸಿರುವ ಸಂದೇಶಗಳ ನೋಟಿಫಿಕೇಷನ್‌ಗಳನ್ನು ನೀವು ಮ್ಯೂಟ್ ಮಾಡಬಹುದು. ಇದು ವಾಟ್ಸಾಪ್ ವೆಬ್ ಅಥವಾ ಅದರ ಡೆಸ್ಕ್‌ಟಾಪ್ ಕ್ಲೈಂಟ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ನಿಮ್ಮನ್ನು ಉಲ್ಲೇಖಿಸುವ ಅಥವಾ ಮ್ಯೂಟ್ ಮಾಡಿದ ಗುಂಪಿನಲ್ಲಿ ನಿಮ್ಮ ಹಿಂದಿನ ಸಂದೇಶಕ್ಕೆ ಪ್ರತ್ಯುತ್ತರವನ್ನು ಕಳುಹಿಸುವ ವೈಯಕ್ತಿಕ ಬಳಕೆದಾರರಿಂದ ಅಧಿಸೂಚನೆಗಳನ್ನು ಮ್ಯೂಟ್ ಮಾಡಬೇಕಿದೆ.

ವಾಟ್ಸಾಪ್‌ನಲ್ಲಿ

ವೈಯಕ್ತಿಕ ಬಳಕೆದಾರರಿಂದ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಲು, ನೀವು ವಾಟ್ಸಾಪ್‌ನಲ್ಲಿ ಅವರ ಪ್ರೊಫೈಲ್‌ಗೆ ಹೋಗಿ ನಂತರ ಬಳಕೆದಾರರ ಹೆಸರನ್ನು ಟ್ಯಾಪ್ ಮಾಡಬೇಕಾಗುತ್ತದೆ. ನಂತರ, ಆಂಡ್ರಾಯ್ಡ್‌ನಲ್ಲಿ ಮ್ಯೂಟ್ ಅಧಿಸೂಚನೆಗಳ ಆಯ್ಕೆಯನ್ನು ನೋಡಿ ಅಥವಾ ಐಒಎಸ್‌ನಲ್ಲಿ ಮ್ಯೂಟ್ ಮಾಡಿ. ನೀವು ಮೂರು ಆಯ್ಕೆಗಳಿಂದ ಆಯ್ಕೆ ಮಾಡಬಹುದು - 8 ಗಂಟೆಗಳು, ವಾರ, ಅಥವಾ ಅಧಿಸೂಚನೆಗಳನ್ನು ಮ್ಯೂಟ್ ಮಾಡಲು ಆಲ್‌ವೇಸ್‌ ಆಯ್ಕೆಗಳನ್ನು ಕಾಣಬಹುದು. ನೀವು ವಾಟ್ಸಾಪ್ ಗುಂಪನ್ನು ಬಿಡಲು ಸಾಧ್ಯವಾಗದಿದ್ದಾಗ ಇದು ಸೂಕ್ತವಾಗಿ ಬರುತ್ತದೆ.

Best Mobiles in India

English summary
Mute Mention Notification On WhatsApp Using This Trick.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X