Home
ಸುದ್ದಿಜಾಲ

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಅನಾವರಣ! ಇದರ ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ?

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ (MWC) 2023ರಲ್ಲಿ ಹಲವು ಅಚ್ಚರಿಯ ಡಿವೈಸ್‌ಗಳು ಅನಾವರಣಗೊಂಡಿವೆ. ಅದರಂತೆ ZTE ಕಂಪೆನಿ ಕೂಡ ಅನೇಕ ಡಿವೈಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ZTE ಬೆಂಬಲಿತ ನುಬಿಯಾ ಪ್ಯಾಡ್‌ 3D ಟ್ಯಾಬ್ಲೆಟ್‌ ಸಾಕಷ್ಟು ಸೌಂಡ್‌ ಮಾಡ್ತಿದೆ.

ಹೌದು, ZTE ಕಂಪೆನಿ ಹೊಸ ನುಬಿಯಾ ಪ್ಯಾಡ್‌ 3D ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಿದೆ. ಈ ಡಿವೈಸ್‌ ಗ್ಲಾಸ್‌ ಫ್ರೀ 3D ವಿಶ್ಯುಯಲ್ಸ್‌ ಅನ್ನು ನೀಡುವ ವಿಶ್ವದ ಮೊದಲ ಟ್ಯಾಬ್ಲೆಟ್‌ ಎನಿಸಿಕೊಂಡಿದೆ. ಇದರಲ್ಲಿ ವಿಶೇಷವಾಗಿ 3D ಲೈಟ್‌ಫಿಲ್ಡ್‌ ಟೆಕ್ನಾಲಜಿಯನ್ನು ನೀಡಲು ಗ್ಲಾಸ್‌ ಫ್ರೀ 3D ಡೆವಲಪರ್‌ ಲಿಯಾ ಇಂಕ್‌ ಜೊತೆ ಪಾಲುದಾರಿಕೆ ಹೊಂದಿದೆ. ಹಾಗಾದ್ರೆ ಈ ಹೊಸ 3D ಟ್ಯಾಬ್ಲೆಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಅನಾವರಣ! ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ?

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ವಿಶೇಷತೆ ಏನು?

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ 12.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,560x1,600 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಸ್ಕ್ರೀನ್‌ 120Hz ರಿಫ್ರೆಶ್ ರೇಟ್ ಮತ್ತು 16:10 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್ DLB ಲೇಯರ್ ಮತ್ತು ಲೀಯಾದಿಂದ 3D ಲೈಟ್‌ಫೀಲ್ಡ್ ಮೋಡ್ ಟೆಕ್ನಾಲಜಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

ಇದು ಲೋಕಲ್‌ 3D ಕಂಟೆಂಟ್‌ ಅನ್ನು ಪ್ಲೇ ಮಾಡುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ ರಿಯಲ್‌ ಟೈಂನಲ್ಲಿ 2D ವಿಷಯವನ್ನು 3D ಆಗಿ ಪರಿವರ್ತಿಸಲು ಅವಕಾಶ ನೀಡಲಿದೆ. ಅಲ್ಲದೆ ಹಾರ್ಡ್‌ವೇರ್ ಜೊತೆಗೆ, 3D ಗೇಮ್ಸ್‌ ಮತ್ತು ಲಿಯಾದಿಂದ ಶೈಕ್ಷಣಿಕ ಅಪ್ಲಿಕೇಶನ್‌ಗಳೊಂದಿಗೆ ಆ್ಯಪ್‌ ಸ್ಟೋರ್‌ ಅನ್ನು ಕೂಡ ಹೊಂದಿದೆ.

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಅನಾವರಣ! ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ?

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 256GB ಇಂಟರ್‌ ಸ್ಟೊರೇಜ್‌ ಅನ್ನು ಹೊಂದಿದ್ದು, ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಟ್ಯಾಬ್ಲೆಟ್‌ ಸ್ಪೋರ್ಟ್ಸ್ ಡ್ಯುಯಲ್ 16 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾಗಳನ್ನು ಹೊಂದಿದೆ. ಕ್ಯಾಮೆರಾ ದೊಂದಿಗೆ ಎಲ್ಇಡಿ ಫ್ಲ್ಯಾಷ್ ಕೂಡ ಒಳಗೊಂಡಿದೆ. ಇದರೊಂದಿಗೆ ಡ್ಯುಯಲ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ 9,070mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಜೊತೆಗೆ 3D ಗೇಮ್ಸ್‌ ಮತ್ತು ಲಿಯಾದಿಂದ ಎಜುಕೇಶನ್‌ ಆ್ಯಪ್‌ಗಳೊಂದಿಗೆ ಆ್ಯಪ್‌ ಸ್ಟೋರ್‌ ಅನ್ನು ಕೂಡ ಹೊಂದಿದೆ. ಅಲ್ಲದೆ ಈ ಡಿವೈಸ್‌ AI ಫೇಸ್ ಟ್ರ್ಯಾಕಿಂಗ್ ಅನ್ನು ಬೆಂಬಲಿಸಲಿದ್ದು, ಡಾಲ್ಬಿ ಸರೌಂಡ್ ಸೌಂಡ್ ಎಫೆಕ್ಟ್‌ನೊಂದಿಗೆ ನಾಲ್ಕು ಸಮ್ಮಿತೀಯ ಸ್ಪೀಕರ್‌ಗಳನ್ನು ಒಳಗೊಂಡಿದೆ.

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಅನಾವರಣ! ಫೀಚರ್ಸ್‌ ಕೇಳಿದ್ರೆ ಅಚ್ಚರಿ ಪಡ್ತೀರಾ?

ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್‌ ಬೆಲೆ ಮತ್ತು ಲಭ್ಯತೆ

ನುಬಿಯಾ ಪ್ಯಾಡ್ 3D ಬೆಲೆ ಇನ್ನೂ ಕೂಡ ಬಹಿರಂಗವಾಗಿಲ್ಲ. ಸದ್ಯ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಈ ಡಿವೈಸ್‌ ಅನ್ನು ಅನಾವರಣಗೊಳಿಸಲಾಗಿದೆ ಅಷ್ಟೆ. ಇದರ ಬೆಲೆ ಹಾಗೂ ಲಬ್ಯತೆಯ ವಿವರ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯಿದೆ. ಆದರೆ ಈ ಟ್ಯಾಬ್ಲೆಟ್ ಇದೇ ಮಾರ್ಚ್ 23 ರಿಂದ ಪ್ರೀ ಬುಕಿಂಗ್‌ಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಅಲ್ಲದೆ ಆಯ್ದ ಮಾರುಕಟ್ಟೆಗಳಲ್ಲಿ ಏಪ್ರಿಲ್ 11 ರಿಂದ ಮಾರಾಟ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

Best Mobiles in India

English summary
Nubia Pad 3D runs the latest Android 13 and sports a 12.4-inch screen with a 2,560x1,600 pixel resolution
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+