MWC 2024 ಈವೆಂಟ್‌ನಲ್ಲಿ ಬಹಿರಂಗವಾಯ್ತು Infinix GT ಅಲ್ಟ್ರಾ ಫೀಚರ್ಸ್!
ಇನ್ಪಿನಿಕ್ಸ್ ಕಂಪೆನಿಯು ತನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ MWC 2024 ಈವೆಂಟ್‌ನಲ್ಲಿ ತನ್ನ ಹೊಸ ಪ್ರಮುಖ ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಟೀಸ್ ಮಾಡಿದೆ. ಇದನ್ನು Infinix GT ಅಲ್ಟ್ರಾ ಸ್ಮಾರ್ಟ್‌ಫೋನ್ ಎಂದು ಗುರುತಿಸಲಾಗಿದ್ದು, ಸಿಂಥೆಟಿಕ್ ಬೆಂಚ್‌ಮಾರ್ಕ್ ಕಾರ್ಯಕ್ಷಮತೆಯನ್ನು ಈವೆಂಟ್‌ನಲ್ಲಿ ಬಹಿರಂಗಪಡಿಸಲಾಗಿದೆ.
ಹೌದು, Infinix GT ಅಲ್ಟ್ರಾ ಸ್ಮಾರ್ಟ್‌ಫೋನ್ ವಿವರಗಳನ್ನು MWC 2024 ರಲ್ಲಿ ಟೀಸ್ ಮಾಡಲಾಗಿದೆ. ತನ್ನ ಹೊಸ ಗೇಮಿಂಗ್ ತಂತ್ರಜ್ಞಾನಗಳೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ. ಇದು ಪ್ರೊಸೆಸರ್, ಗ್ರಾಫಿಕ್ಸ್, ಕೂಲಿಂಗ್ ಮತ್ತು AI ಆಪ್ಟಿಮೈಸೇಶನ್‌ಗಳನ್ನು ಒಳಗೊಂಡಿದೆ. Infinix GT ಅಲ್ಟ್ರಾ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Infinix GT ಅಲ್ಟ್ರಾ ವಿಶೇಷತೆ ಏನು?
Infinix GT ಅಲ್ಟ್ರಾ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಪ್ರಮುಖ ದರ್ಜೆಯ ಪ್ರೊಸೆಸರ್ ಆಗಿದ್ದು, CoolMax ತಂತ್ರಜ್ಞಾನ ಹೊಂದಿದೆ. ಇದು ಥರ್ಮಲ್ ಥ್ರೊಟ್ಲಿಂಗ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು CoolMax ತಂತ್ರಜ್ಞಾನವು ಪ್ರಭಾವಶಾಲಿ 10 ಡಿಗ್ರಿ ಸೆಲ್ಸಿಯಸ್‌ನ ತಾಪಮಾನ ಕುಸಿತವನ್ನು ನೀಡುತ್ತದೆ ಎಂದು ಹೇಳುತ್ತದೆ.
ಇನ್ನು ಈ ಗೇಮಿಂಗ್ ಫೋನ್ AnTutu ನಲ್ಲಿ 2,215,639 ಅಂಕಗಳೊಂದಿಗೆ ಅತ್ಯಧಿಕ ಸ್ಕೋರ್ ಅನ್ನು ನೋಂದಾಯಿಸಿದೆ. ಸ್ಮಾರ್ಟ್‌ಫೋನ್ FHD+ ಪ್ಯಾನೆಲ್‌ಗಳಲ್ಲಿ 180Hz ಮತ್ತು WQHD+ ಡಿಸ್‌ಪ್ಲೇಗಳಲ್ಲಿ 144Hz ವರೆಗೆ ರಿಫ್ರೆಶ್ ರೇಟ್‌ಗಳನ್ನು ನೀಡಲಿದೆ. ಇದಕ್ಕಾಗಿ Infinix Pixelworks ವಿಷುಯಲ್ ಪ್ರೊಸೆಸರ್‌ಗಳನ್ನು ಸಹ ಬಳಸುತ್ತಿದೆ.

ಇದಲ್ಲದೆ ಇನ್ಫಿನಿಕ್ಸ್ ಕಂಪೆನಿ ಇದೇ ಸಮಯದಲ್ಲಿ ಎರಡು ಹೊಸ ಚಾರ್ಜಿಂಗ್ ಟೆಕ್ನಾಲಜಿಯನ್ನು ಪರಿಚಯಿಸಿದೆ. ಇವುಗಳನ್ನು Infinix AirCharge ಮತ್ತು Infinix ಎಕ್ಸ್ಟ್ರೀಮ್ ಟೆಂಪ್ ಬ್ಯಾಟರಿ ಎಂದು ಹೆಸರಿಸಲಾಗಿದೆ. ಹೆಸರೇ ಸೂಚಿಸುವಂತೆ, Infinix AirCharge ಮ್ಯಾಗ್ನೆಟಿಕ್ ರೆಸೋನೆನ್ಸ್ ಆಧಾರಿತ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವಾಗಿದೆ. ಇನ್ನು Infinix ಎಕ್ಸ್ಟ್ರೀಮ್ ಟೆಂಪ್ ಬ್ಯಾಟರಿಯು 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇರುವ ತೀವ್ರತರವಾದ ತಾಪಮಾನದಲ್ಲಿ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುವ ವಿನ್ಯಾಸವನ್ನು ಹೊಂದಿದೆ.
ಇನ್ನು ಇನ್ಫಿನಿಕ್ಸ್ ಕಂಪೆನಿಯು ಸದ್ಯದಲ್ಲೇ ಇನ್ಫಿನಿಕ್ಸ್ ನೋಟ್ 40 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ತಯಾರಿ ನಡೆಸಿದೆ. ಈ ಫೋನ್‌ಗಳು 8GB RAM ವರೆಗೆ ಇರಲಿದೆ ಎಂದು ಡೇಟಾಬೇಸ್ ಬಹಿರಂಗಪಡಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಇದಲ್ಲದೆ ಆಕ್ಟಾ-ಕೋರ್ ಚಿಪ್‌ಸೆಟ್ 2.2GHz ನಲ್ಲಿ ಎರಡು ಕಾರ್ಟೆಕ್ಸ್ A76 ಕೋರ್‌ಗಳನ್ನು ಮತ್ತು 2.0GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳನ್ನು ಒಳಗೊಂಡಿದೆ. ಚಿಪ್‌ಸೆಟ್ 1.06GHz ನಲ್ಲಿ ARM ಮಾಲಿ G57 GPU ಅನ್ನು ಸಹ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ XOS 14 ನೊಂದಿಗೆ ರನ್ ಆಗುವ ಸಾಧ್ಯತೆಯಿದೆ.
ಇನ್ನು ಈ ಸ್ಮಾರ್ಟ್‌ಫೋನ್‌ಗಳು 1080 x 2436 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಜೊತೆಗೆ 480 PPI ನ ಪಿಕ್ಸೆಲ್ ಸಾಂದ್ರತೆಯೊಂದಿಗೆ ನೋಟ್ 40 ಮತ್ತು ನೋಟ್ 40 Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ ಎಂದು Google Play ಕನ್ಸೋಲ್ ಡೇಟಾಬೇಸ್ ಬಹಿರಂಗಪಡಿಸಿದೆ. ಡೇಟಾಬೇಸ್ ವರದಿಯಂತೆ ಸೆಲ್ಫಿ ಕ್ಯಾಮೆರಾವನ್ನು ಇರಿಸಲು ಇನ್ಫಿನಿಕ್ಸ್ ಕೇಂದ್ರಿತ ಪಂಚ್ ಹೋಲ್ ಕಟೌಟ್‌ನೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ವಿನ್ಯಾಸಗೊಳಿಸಿದೆ ಎನ್ನಲಾಗಿದೆ.


Click it and Unblock the Notifications








