Home
ಸುದ್ದಿಜಾಲ

MWC 2024: ಟೆಕ್ನೋ ಪೊವಾ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ ಅನಾವರಣ: ಫೀಚರ್ಸ್‌ ಹೇಗಿದೆ?

ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ MWC 2024 ಈವೆಂಟ್‌ನಲ್ಲಿ ವಿವಿಧ ಮಾದರಿಯ ಡಿವೈಸ್‌ಗಳು ಅನಾವರಣಗೊಂಡಿವೆ. ಇದರಲ್ಲಿ ಟೆಕ್ನೋ ಕಂಪೆನಿಯು ಕೂಡ ಒಂದಾಗಿದ್ದು, ಟೆಕ್ನೋ ಸಂಸ್ಥೆ ಹೊಸ ಸಾಧನಗಳನ್ನು ಪರಿಚಯಿಸಿದೆ. ಇದರಲ್ಲಿ Tecno POVA 6 Pro ಸ್ಮಾರ್ಟ್‌ಫೋನ್ ಕೂಡ ಒಂದಾಗಿದ್ದು ಟೆಕ್‌ ವಲಯಕ್ಕೆ ಎಂಟ್ರಿ ನೀಡಿದೆ.

ಹೌದು, ಟೆಕ್ನೋ ಪೊವಾ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು ಮಧ್ಯಮ ಶ್ರೇಣಿಯ ಗೇಮಿಂಗ್-ಕೇಂದ್ರಿತ ಸಾಧನವಾಗಿದ್ದು, ಅರೆ-ಪಾರದರ್ಶಕ ವಿನ್ಯಾಸ ಮತ್ತು LED ದೀಪಗಳನ್ನು ಒಳಗೊಂಡಿದೆ. ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6080 ಪ್ರೊಸೆಸರ್ ವೇಗವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

MWC 2024: ಟೆಕ್ನೋ ಪೊವಾ ಪೋವಾ 6 ಪ್ರೊ ಫೋನ್‌ ಅನಾವರಣ: ಫೀಚರ್ಸ್‌ ಹೇಗಿದೆ

ಟೆಕ್ನೋ ಪೋವಾ 6 ಪ್ರೊ ಡಿಸ್‌ಪ್ಲೇ ರಚನೆ
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 1080 x 2436 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇದಲ್ಲದೆ ಡಿಸ್‌ಪ್ಲೇಯು 393 ppi ಸಾಂದ್ರತೆಯನ್ನು ಹೊಂದಿದ್ದು, 87.2% ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿ ಬರಲಿದೆ. ಇದರೊಂದಿಗೆ ಡಿಸ್‌ಪ್ಲೇಯು 1300 ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ.

ಟೆಕ್ನೋ ಪೋವಾ 6 ಪ್ರೊ ಪ್ರೊಸೆಸರ್‌ ಯಾವುದು?
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೆ ವರ್ಟಲ್ RAM ತಂತ್ರಜ್ಞಾನದೊಂದಿಗೆ 8GB ಮತ್ತು 12GB RAM ಆಯ್ಕೆಗಳನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೆ 256GB ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ.

MWC 2024: ಟೆಕ್ನೋ ಪೊವಾ ಪೋವಾ 6 ಪ್ರೊ ಫೋನ್‌ ಅನಾವರಣ: ಫೀಚರ್ಸ್‌ ಹೇಗಿದೆ

ಟೆಕ್ನೋ ಪೋವಾ 6 ಪ್ರೊ ಕ್ಯಾಮೆರಾ ಸೆಟಪ್‌
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಲೆನ್ಸ್ ಮತ್ತು AI ಘಟಕವನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಟೆಕ್ನೋ ಪೋವಾ 6 ಪ್ರೊ ಬ್ಯಾಟರಿ ಮತ್ತು ಇತರೆ
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 70W ವೈರ್ಡ್ ಮತ್ತು 10W ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ. ಇದಲ್ಲದೆ ಅಂಡರ್ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌, ಆಪ್ಟಿಕಲ್, ಅಕ್ಸಿಲೆರೊಮೀಟರ್, ಗೈರೊ, ಪ್ರಾಕ್ಸಿಮಿಟಿ, ಕಂಪಾಸ್ ಅನ್ನು ಹೊಂದಿದೆ.

ಟೆಕ್ನೋ ಪೋವಾ 6 ಪ್ರೊ ಬೆಲೆ ಮತ್ತು ಲಭ್ಯತೆ
ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್‌ಫೋನ್‌ ಮೊದಲು ಫಿಲಿಪೈನ್ಸ್, ಸೌದಿ ಅರೇಬಿಯಾ ಮತ್ತು ಭಾರತದಲ್ಲಿ ಪ್ರಾರಂಭಿಸಲಾಗುವುದು. ಇದು ಉಲ್ಕಾಶಿಲೆ ಬೂದು ಮತ್ತು ಕಾಮೆಟ್ ಗ್ರೀನ್‌ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಮಾರಾಟದ ದಿನಾಂಕ ಹತ್ತಿರ ಬಂದಾಗ ಇದರ ಬೆಲೆಯನ್ನು ಬಹಿರಂಗವಾಗಲಿದೆ.

ಇದಲ್ಲದೆ ಟೆಕ್ನೋ ಕಂಪೆನಿ ಇತ್ತೀಚಿಗೆ ಟೆಕ್ನೋ ಸ್ಪಾರ್ಕ್‌ ಗೋ (2024) ಫೋನ್‌ ಪರಿಚಯಿಸಿದೆ. ಈ ಫೋನ್‌ 6.56 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಇದು 90Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಇದಲ್ಲದೆ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 13 (Go Edition) ಆಧಾರಿತ HiOS 13 ನಲ್ಲಿ ಕೆಲಸ ನಿರ್ವಹಿಸುತ್ತದೆ. 8 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ಹೊಂದಿದೆ.

Best Mobiles in India

English summary
MWC 2024: Tecno POVA 6 Pro Smartphone With 120Hz Display Announced
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+