ಶಿಯೋಮಿ ಎಂಐ ಬ್ಯಾಂಡ್‌ಗೆ ಎದುರು ಫಿಟ್ನೆಸ್ ಟ್ರಾಕರ್ ಲಾಂಚ್ ಮಾಡಿದ ಮಿಂತ್ರಾ!!

By GizBot Bureau
|

ಫಿಟ್ನೆಸ್ ಟ್ರಾಕರ್ ಗಳು ಮಾರ್ಕೆಟ್ ನಲ್ಲಿ ತಮ್ಮದೇ ಆದ ಹವಾ ಸೃಷ್ಟಿ ಮಾಡಿಬಿಟ್ಟಿವೆ, ಅಷ್ಟೇ ಅಲ್ಲ, ಇ-ಕಾಮರ್ಸ್ ಪೋರ್ಟಲ್ ಗಳಲ್ಲಿ ಅಂದರೆ ಮಿಂತ್ರಾದಲ್ಲೂ ಕೂಡ ಇದರ ಸೇರ್ಪಡೆಯಾಗಿದ್ದು, ಭರ್ಜರಿ ಆಫರ್ ಇದೆ. ಫ್ಲಿಪ್ ಕಾರ್ಟ್ ನಲ್ಲಿ ಇತ್ತೀಚೆಗೆ ಬ್ಲಿಂಕ್ ಗೋ ಫಿಟ್ನೆಸ್ ಟ್ರ್ಯಾಕರ್ ಬಿಡುಗಡೆಗೊಂಡಿತ್ತು ಮತ್ತು ಅದರ ಬೆಲೆ 4,199 ರುಪಾಯಿ ಆಗಿತ್ತು.

ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಗ್ಯಾಜೆಟ್..! ಬೆಲೆ ಕಡಿಮೆ, ಉಪಯೋಗ ಜಾಸ್ತಿ..!ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಗ್ಯಾಜೆಟ್..! ಬೆಲೆ ಕಡಿಮೆ, ಉಪಯೋಗ ಜಾಸ್ತಿ..!

ಆದರೆ ಈಗ ಮಿಂತ್ರಾ ವೆಬ್ ಸೈಟ್ ನಲ್ಲಿ ಮಿಂತ್ರಾ ಬ್ಲಿಂಕ್ ಗೋ ಫಿಟ್ನೆಸ್ ಟ್ರ್ಯಾಕರ್ ಬಿಡುಗಡೆಗೊಂಡಿದ್ದು 60 ಶೇಕಡಾ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದ್ದು ಕೇವಲ ಬಂಪರ್ ಪ್ರೈಸ್ 1,679 ರುಪಾಯಿಗೆ ಮಾರಾಟಕ್ಕಿದೆ. ವಿಟ್ ವರ್ಕ್ಸ್ ಎನ್ನುವ ಬಿಡಿಭಾಗಗಳ ಬ್ರ್ಯಾಂಡ್ ನ್ನು ಕೂಡ ಮಿಂತ್ರಾದಲ್ಲಿ ಇನ್ನು ಮುಂದೆ ಖರೀದಿಸಬಹುದಾಗಿದೆ. ಮಿಂತ್ರಾ ಬ್ಲಿಂಕ್ ಗೋ ಫಿಟ್ನೆಸ್ ಟ್ರ್ಯಾಕರ್ ಜೂನ್ 22 ರಿಂದ ಅಂದರೆ ಇಂದಿನಿಂದ ಮಿಂತ್ರಾ ಸೇಲ್ ನಲ್ಲಿ ಲಭ್ಯವಿರಲಿದೆ.

ಶಿಯೋಮಿ ಎಂಐ ಬ್ಯಾಂಡ್‌ಗೆ ಎದುರು ಫಿಟ್ನೆಸ್ ಟ್ರಾಕರ್ ಲಾಂಚ್ ಮಾಡಿದ ಮಿಂತ್ರಾ!!

ಫ್ಲಿಪ್ ಕಾರ್ಟ್ ಮಾಲೀಕತ್ವದ ವೆಬ್ ಸೈಟ್ ಎಸ್ ಬಿ ಐ ಕಾರ್ಡ್ ಇರುವುವವರಿಗೆ ಹೆಚ್ಚಿನ 10 ಶೇಕಡಾ ರಿಯಾಯಿತಿಯನ್ನು ನೀಡಲಿದ್ದು, ಫೋನ್ ಪೇ ನಲ್ಲಿ ಪಾವತಿ ಮಾಡಿದರೆ 10 ಶೇಕಡಾ ಹೆಚ್ಚಿನ ರಿಯಾಯಿತಿ ಲಭ್ಯವಿದೆ.ಆಶ್ಚರ್ಯವೆಂದರೆ ಕಂಪೆನಿಯು EMI ಸೌಲಭ್ಯವನ್ನೂ ನೀಡುತ್ತಿದ್ದು,ಪ್ರತಿ ತಿಂಗಳಿಗೆ 79 ರುಪಾಯಿಯಂತೆ ಪಾವತಿಸಿಯೂ ಖರೀದಿಸಬಹುದು.

ಮಿಂತ್ರಾ ಬ್ಲಿಂಕ್ ಗೋ ಫಿಟ್ನೆಸ್ ಟ್ರ್ಯಾಕರ್ ವಿವಿಧ ಕಲರ್ ಗಳ ಅವಕಾಶವನ್ನೂ ನೀಡಿದ್ದು, TFT ಡಿಸ್ಪ್ಲೇ ಮತ್ತು ಡಿಸೈನರ್ ಸ್ಟ್ರಾಪ್ಸ್ ಕೂಡ ಲಭ್ಯವಿದೆ.. ಬಾಕ್ಸ್ ನಲ್ಲಿ ಇನ್ನೊಂದು ಕಪ್ಪು ಬಣ್ಣದ ಸ್ಟ್ರಾಪ್ ಕೂಡ ಇರಲಿದೆ..ಅದರಲ್ಲಿ ಇನ್ನೂ ಹಲವಾರು ಸ್ಟ್ರಾಪ್ ಕಲರ್ ಗಳಿದ್ದು, ಖರೀದಿದಾರರು ತಮಗಿಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕ್ಯಾಲೋರಿ ಕೌಂಟ್, ಹೆಜ್ಜೆಗಳು, ದೂರ ಮತ್ತು ನಿದ್ದೆಯ ಪ್ರಮಾಣವನ್ನು ಅಳೆಯಲು ಈ ಫಿಟ್ನೆಸ್ ಟ್ರ್ಯಾಕರ್ ನ್ನು ಬಳಕೆ ಮಾಡಬಹುದು. ಹಾರ್ಟ್ ರೇಟ್ ಅನ್ನುವು ಇನ್ನೊಂದು ಸೆನ್ಸಾರ್ ಇದ್ದು, ಅದು ಬಳಕೆದಾರರ ಆಕ್ಟೀವ್ ಹಾರ್ಟ್ ರೇಟ್ ನ್ನು ಯಾವುದೇ ಸಂದರ್ಬದಲ್ಲಿ ಬೇಕಾದರೂ ಅಳೆಯಲು ಅನುವು ಮಾಡಿಕೊಡುತ್ತದೆ.

ಶಿಯೋಮಿ ಎಂಐ ಬ್ಯಾಂಡ್‌ಗೆ ಎದುರು ಫಿಟ್ನೆಸ್ ಟ್ರಾಕರ್ ಲಾಂಚ್ ಮಾಡಿದ ಮಿಂತ್ರಾ!!

ಮಿಂತ್ರಾ ಬ್ಲಿಂಕ್ ಗೋ ನ ವೈಶಿಷ್ಟ್ಯತೆಗಳು :

ಮಿಂತ್ರಾ ಗೋ ಬ್ಲಿಂಕ್ 100mAh ಬ್ಯಾಟರಿಯನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 5.1 ಆಪರೇಟಿಂಗ್ ಸಿಸ್ಟಮ್ ಅಥವಾ iOS 10 ಮತ್ತು ಮೇಲಿನ ಸ್ಮಾರ್ಟ್ ಫೋನ್ ಗಳಲ್ಲಿ ಕಂಪ್ಯಾಟಿಬಲ್ ಮಾಡಿ ರನ್ ಮಾಡಲು ಅನುಕೂಲಕರವಾಗಿದೆ. ಬ್ಲೂ ಟೂತ್ ಮುಖಾಂತರ ಫಿಟ್ನೆಸ್ ಟ್ರ್ಯಾಕರ್ ನ್ನು ಫೋನಿಗೆ ಕನೆಕ್ಟ್ ಮಾಡಿಕೊಳ್ಳಬಹುದು. ಮೆಸೆಜ್ ಗಳ ಮೂಲಕ, ಈ-ಮೇಲ್, ಮತ್ತು ವಾಟ್ಸ್ ಆಪ್, ಫೋನಿನಲ್ಲಿ ರಿಸೀವ್ ಮಾಡುವ ಕಾಲ್ಸ್ ಗಳ ಮುಖಾಂತರ ಫಿಟ್ನೆಸ್ ಟ್ರ್ಯಾಕರ್ ನಿಮಗೆ ನೋಟಿಫಿಕೇಷನ್ ನೀಡುತ್ತದೆ.ಇದು ವಾಟರ್ ರೆಸಿಸ್ಟೆನ್ಸ್ ಕೂಡ ಆಗಿದೆ..

1,679 ರುಪಾಯಿಗೆ ಶಿಯೋಮಿ ಬ್ಯಾಂಡ್ HRX ಮತ್ತು ಎಂಐ ಬ್ಯಾಂಡ್ 2 ಜೊತೆ ಇದು ಸ್ಪರ್ಧೆಗೆ ಇಳಿಯಲಿದೆ. ಶಿಯೋಮಿ ಬ್ಯಾಂಡ್ HRX ಎಡಿಷನ್ನಿನ ಫಿಟ್ನೆಸ್ ಟ್ರ್ಯಾಕರ್ ನ್ನು 1,799 ರುಪಾಯಿಗೆ ಬಿಡುಗಡೆಗೊಳಿಸಲಾಯಿತು. ಸದ್ಯ ಅದು ರಿಯಾಯಿತಿ ಬೆಲೆಯಲ್ಲಿ 1,299 ರುಪಾಯಿಯೂ ಲಭ್ಯವಿದೆ. ಆದರೆ Mi ಬ್ಯಾಂಡ್ ಮತ್ತು HRX ಎಡಿಷನ್ ಗಳು ಹಾರ್ಟ್ ರೇಟ್ ಸೆನ್ಸಾರ್ ನ್ನು ಹೊಂದಿಲ್ಲ.ಆದರೆ ಎಂಐ ಬ್ಯಾಂಡ್ 2 ನಲ್ಲಿ ಈ ವೈಶಿಷ್ಟ್ಯತೆ ಇದೆ. ಇನ್ನು ಇದು IP67-splash ರೆಸಿಸ್ಟೆಂಟ್ ಡಿವೈಸ್ ಆಗಿದ್ದು ಸ್ಕ್ರ್ಯಾಚ್ ರೆಸಿಸ್ಟೆಂಟ್ ಟಚ್ ಸ್ಕ್ರೀನ್ ಇದರಲ್ಲಿದೆ ಜೊತೆಗೆ 0.42-ಇಂಚಿನ OLED ಡಿಸ್ಪ್ಲೇ ಮತ್ತು ಬ್ಲೂಟೂತ್ v4.0 ಗೆ ಸಹಕರಿಸಲಿದೆ..

Best Mobiles in India

English summary
Myntra launches fitness tracker to take on Xiaomi Mi Band 2, available at Rs 1,679. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X