Subscribe to Gizbot

ರಹಸ್ಯ ಬಯಲು!!.ಭೂಮಿಯ ಮೇಲೆ ಜೀವಿಗಳ ಉಗಮ ಹೇಗಾಯಿತು ಗೊತ್ತಾ?!

Written By:

ಮಾನವ ಯಾವಾಗಲೂ ಕುತೋಹಲ ಜೀವಿ. ಹಾಗಾಗಿಯೇ ಯಾವಾಗಲೂ ಬಹುಬೇಗ ಉತ್ತರ ಸಿಗದ ವಿಷಯಗಳತ್ತ ಮಾತ್ರವೇ ಹೆಚ್ಚು ಗಮನಹರಿಸುತ್ತಾನೆ. ಹಾಗಾಗಿಯೇ, ಸಾವಿರಾರು ವರ್ಷಗಳಿಂದಲೂ ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿ ಹೇಗಾಯಿತು ಎಂಬುದನ್ನು ಹುಡುಕುತ್ತಲೇ ಇದ್ದಾನೆ.!!

ಇದಕ್ಕೆ ಈಗಿನ ವಿಜ್ಞಾನಿಗಳು ಸಹ ಹೊರತೇನಲ್ಲ. ಆದರೆ, ಹೊಸ ವಿಷಯ ಏನೆಂದರೆ? ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ(ಎಎನ್‌ಯು)ಯ ಸಂಶೋಧಕರು ನಾವು ಭೂಮಿಯ ಮೇಲೆ ಪ್ರಾಣಿಗಳು ಹೇಗೆ ಹುಟ್ಟಿದವು ಎಂಬುದನ್ನು ಕಂಡುಹಿಡಿದಿದ್ದೇವೆ ಎಂದು ಹೇಳಿದೆ.!!

ಹಾಗಾದರೆ, ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿ ಹೇಗಾಯಿತು? ವಿಜ್ಞಾನಿಗಳು ಅಧ್ಯಯನ ಹೇಗೆ ನಡೆಸಿದ್ದಾರೆ.? ಭೂಮಿಯ ಮೇಲೆ ಮೊದಲು ಕಂಡುಬಂದಿರುವ ಜೀವಸತ್ವ ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
650 ಮಿಲಿಯನ್ ವರ್ಷಗಳ ಹಿಂದೆ.!!

650 ಮಿಲಿಯನ್ ವರ್ಷಗಳ ಹಿಂದೆ.!!

ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ(ಎಎನ್‌ಯು)ಯ ಸಂಶೋಧಕರು ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿಯ ಮೊದಲ ಹಂತ 650 ಮಿಲಿಯನ್ ವರ್ಷಗಳು ಎಂದು ಹೇಳಿದ್ದಾರೆ. 650 ದಶಲಕ್ಷ ವರ್ಷಗಳ ಹಿಂದೆ ಪ್ರಾಣಿಗಳ ವಿಕಸನವು ಪ್ರಾರಂಭವಾಯಿತು ಎಂದು ಕಂಡುಹಿಡಿದಿದ್ದಾಗಿ ತಿಳಿಸಿದ್ದಾರೆ.

ಕಲ್ಲುಗಳನ್ನು ಪುಡಿಮಾಡಿ ಅಧ್ಯಯನ!!

ಕಲ್ಲುಗಳನ್ನು ಪುಡಿಮಾಡಿ ಅಧ್ಯಯನ!!

"ನಾವು ಈ ಕಲ್ಲುಗಳನ್ನು ಪುಡಿಮಾಡಿ ಮತ್ತು ಅವರಿಂದ ಪ್ರಾಚೀನ ಜೀವಿಗಳ ಹೊರತೆಗೆಯಲಾದ ಅಣುಗಳನ್ನು ಹತ್ತಿಕ್ಕಿದ್ದೇವೆ" ಕಲ್ಲುಗಳ ಮೇಲೆ ಬೆಳೆದಿರುವ ಆಲ್ಗೆಗಳಿಂದ ಪಡೆದ ಹೊರತೆಗೆಯಲಾದ ಅಣುಗಳನ್ನು ಪಡೆದು ಅಧ್ಯಯನ ಮಾಡಿದ್ದೇವೆ ಎಂದು ANU ನಲ್ಲಿ ಅಸೋಸಿಯೇಟ್ ಪ್ರಾಧ್ಯಾಪಕ ಜೊಚೆನ್ ಬ್ರೊಕ್ಸ್ ಹೇಳಿದರು.

ಮೊದಲು ಪಾಚಿಗಳ ಬೆಳವಣಿಗೆ

ಮೊದಲು ಪಾಚಿಗಳ ಬೆಳವಣಿಗೆ

ಕಲ್ಲುಗಳಿಂದ ತೆಗೆಯಲಾದ ಅಣುಗಳ ಅಧ್ಯಯನದಿಂದ 650 ಮಿಲಿಯನ್ ವರ್ಷಗಳ ಹಿಂದಿನ ಪರಿಸರ ವ್ಯವಸ್ಥೆಯ ಕ್ರಾಂತಿಯ ಬಗ್ಗೆ ತಿಳಿಯಲು ಸಾಧ್ಯವಾಗಿದ್ದು, 650 ಮಿಲಿಯನ್ ವರ್ಷಗಳ ಹಿಂದೆ ಪಾಚಿಗಳು ಭೂಮಿಯ ಮೇಲೆ ಮೊದಲು ಹುಟ್ಟಿವೆ ಎಂದು ಹೇಳಿದ್ದಾರೆ.

ಸಾಗರಗಳಿಂದ!!

ಸಾಗರಗಳಿಂದ!!

ಕಲ್ಲುಗಳ ಮೇಲೆ ಬೆಳೆದಿ ಕಲ್ಲುಗಳ ಮೇಲೆ ಬೆಳೆದಿದ್ದ ಆಲ್ಗೆಗಳ ಬೆಳವಣಿಗೆಯಿಂದ ಪರಿಸರದಲ್ಲಿ ಬದಲಾವಣೆಗಳಾಗಿದೆ. ಸಾಗರಗಳಿಂದ ಬ್ಯಾಕ್ಟೀರಿಯಾಗಳು ಹೆಚ್ಚು ಸಂಕೀರ್ಣ ಜೀವನದಿಂದ ತುಂಬಿರುವ ಪ್ರಪಂಚಕ್ಕೆ ಪರಿವರ್ತನೆಯಾಗಿವೆ .ಇದು ಸಾಧ್ಯವಾಗದೇ ಇದ್ದಲ್ಲಿ ಪ್ರಾಣಿಗಳು, ಮನುಷ್ಯರು ಜೀವಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಓದಿರಿ:9,999ಕ್ಕೆ ರೆಡ್‌ಮಿಗೂ ಸೆಡ್ಡುಹೊಡೆಯುವ 'ಡ್ಯುಯಲ್ ಕ್ಯಾಮೆರಾ' ಫೋನ್ 'ಇವೊಕ್'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The mystery behind how the first animals appeared on planet Earth has finally been busted.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot