ಬಳಕೆದಾರರಿಗೆ ‘ಎನ್-ಪ್ಲಸ್’ ಸೇವೆ ಪರಿಚಯಿಸಲು ನೆಟ್‌ಫ್ಲಿಕ್ಸ್ ಸಿದ್ಧತೆ!
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ OTT ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಇವುಗಳಲ್ಲಿ ಅಮೆಜಾನ್ ಪ್ರೈಮ್ ಮುಂಚೂಣೀಯಲ್ಲಿದೆ. ಇದಕ್ಕೆ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿರುವ ತಾಣವೆಂದರೆ ಅದು ನೆಟ್‌ಫ್ಲಿಕ್ಸ್. ನೆಟ್‌ಫ್ಲಿಕ್ಸ್ ತಾಣವು ಚಂದಾದಾರರಿಗೆ ವೆಬ್ ಸರಣಿ ಹಾಗೂ ಚಲನಚಿತ್ರಗಳ ಕಂಟೆಂಟ್ ಅನ್ನು ಒದಗಿಸುತ್ತದೆ. ತಿಂಗಳ ಹಾಗೂ ವಾರ್ಷಿಕ ಚಂದಾದಾರಿಕೆ ಯೋಜನೆಗಳ ಆಯ್ಕೆ ಹೊಂದಿದೆ. ಬಳಕೆದಾರರಿಗೆ ಅನುಕೂಲವಾಗುವ ಹಲವು ಫೀಚರ್ಸ್‌ಗಳನ್ನು ಸಹ ಪರಿಚಯಿಸಿದೆ.

ಹೌದು, ನೆಟ್‌ಫ್ಲಿಕ್ಸ್ ಸಾಕಷ್ಟು ಭಿನ್ನ ಕಾರ್ಯಕ್ರಮಗಳ ಮೂಲಕ ಗ್ರಾಹಕರಿಗೆ ಮನರಂಜನೆ ನೀಡುತ್ತಾ ಸಾಗಿದೆ. ನೆಟ್‌ಫ್ಲಿಕ್ಸ್ ಚಂದಾದಾರರ ಸಂಖ್ಯೆಯು ಅಧಿಕವಾಗಿದ್ದು, ಈ ತಾಣವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಇದೀಗ ನೆಟ್ಫ್ಲಿಕ್ಸ್ "ಎನ್-ಪ್ಲಸ್" ಎಂಬ ಹೊಸ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಪ್ರೋಟೋಕಾಲ್‌ನ ವರದಿಯ ಪ್ರಕಾರ, ವಿವಿಧ ರೀತಿಯ ಫೀಚರ್ಸ್‌ಗಳು ಮತ್ತು ವಿಷಯಗಳ ಬಗ್ಗೆ ಜನರನ್ನು ಕೇಳುವ ಸಮೀಕ್ಷೆಯನ್ನು ನಡೆಸಿದೆ. ಹಾಗಾದ್ರೆ ಈ ಹೊಸ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎನ್-ಪ್ಲಸ್ ಜನರು ನೆಟ್‌ಫ್ಲಿಕ್ಸ್ ಪ್ರದರ್ಶನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸೇವೆಯಾಗಿದೆ ಎಂದು ಹೇಳಲಾಗುತ್ತದೆ. ಇದು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್ ಈಗಾಗಲೇ ಮಾಡುವ ಮತ್ತು ನೀಡುವ ಹೆಚ್ಚುವರಿ ವಿಷಯವನ್ನು ಹೊಂದಿರುತ್ತದೆ. "ಎನ್-ಪ್ಲಸ್ ಭವಿಷ್ಯದ ಆನ್‌ಲೈನ್ ಪ್ಲೇಸ್ ಆಗಿದ್ದು, ಅಲ್ಲಿ ನೀವು ಪ್ರೀತಿಸುವ ಮತ್ತು ಅವುಗಳಿಗೆ ಸಂಬಂಧಿಸಿದ ಯಾವುದನ್ನಾದರೂ ನೆಟ್‌ಫ್ಲಿಕ್ಸ್ ತೋರಿಸುತ್ತದೆ" ಎಂದು ನೆಟ್‌ಫ್ಲಿಕ್ಸ್ ಸಮೀಕ್ಷೆ ಹೇಳಿದೆ.

ಇದಲ್ಲದೆ ಹೆಚ್ಚುವರಿ ವಿಷಯದ ಜೊತೆಗೆ, ಕಸ್ಟಮ್ ಪ್ಲೇಪಟ್ಟಿಗಳನ್ನು ನಿರ್ಮಿಸುವ ಮತ್ತು ಹಂಚಿಕೊಳ್ಳುವಂತಹ ಫೀಚರ್ಸ್‌ಗಳನ್ನು ಸಹ ಎನ್-ಪ್ಲಸ್ ನೀಡಬಹುದು. ಟಿವಿ ಕಾರ್ಯಕ್ರಮದ ಎಲ್ಲಾ ಹಾಡುಗಳನ್ನು ಪಟ್ಟಿ ಮಾಡುವ ಮೂಲಕ ಮತ್ತು ಅದರಿಂದ ಪ್ಲೇಲಿಸ್ಟ್‌ಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುವ ಮೂಲಕ ನೆಟ್‌ಫ್ಲಿಕ್ಸ್ ಮ್ಯೂಸಿಕ್‌ಅನ್ನು ಈ ಸೇವೆಗೆ ತರಬಹುದು ಎನ್ನಲಾಗಿದೆ. ಜೊತೆಗೆ ಈ ಹೊಸ ಸೇವೆಯು ಟಿವಿ ಕಾರ್ಯಕ್ರಮಗಳ ಬಗ್ಗೆ ಬಳಕೆದಾರರ ವಿಮರ್ಶೆಗಳನ್ನು ಸೇರಿಸಲು ಸಹ ಇದು ಯೋಜಿಸಿದೆ.

ಎನ್-ಪ್ಲಸ್‌ನ ವಿಷಯವು ಗೂಗಲ್ ಹುಡುಕಾಟ ಫಲಿತಾಂಶಗಳಲ್ಲಿಯೂ ಕಾಣಿಸುತ್ತದೆ ಆದ್ದರಿಂದ ಟಿವಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಬಳಕೆದಾರರು ಅದನ್ನು ಸುಲಭವಾಗಿ ಪ್ರವೇಶಿಸಬಹುದು. ಸದ್ಯಕ್ಕೆ, ಇದು ಬಳಕೆದಾರರ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಸಮೀಕ್ಷೆ ಮಾತ್ರ, ಮತ್ತು ಇದನ್ನು ಮೀರಿ ಹಂಚಿಕೊಳ್ಳಲು ನೆಟ್‌ಫ್ಲಿಕ್ಸ್‌ಗೆ ಬೇರೆ ಏನೂ ಇಲ್ಲ. ಆದರೆ ಈ ರೀತಿಯ ಸೇವೆಯನ್ನು ಪರಿಚಯಿಸುವ ಕಲ್ಪನೆಯು ಸಾಕಷ್ಟು ಆಸಕ್ತಿದಾಯಕವಾಗಿದೆ ಎಂದು ಹೇಳಬಹುದಾಗಿದೆ. ಎನ್-ಪ್ಲಸ್ ಸಾಮಾಜಿಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ನೆಟ್ಫ್ಲಿಕ್ಸ್ ನಿಯಮಿತವಾಗಿ ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತದೆ ಆದ್ದರಿಂದ ನಾವು ಇದನ್ನು ಶೀಘ್ರದಲ್ಲೇ ನೋಡಬಹುದು.


Click it and Unblock the Notifications








