ಕನ್ನಡಿಗರಿಗಾಗಿಯೇ ರೂಪಿತವಾಗಿರುವ ಹೊಸ 'ನಮ್ಮ ಆಪ್' ವೈರಲ್ ಆಗುತ್ತಿದೆ!!..ಏಕೆ ಗೊತ್ತಾ?

|

ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ನಿಜವಾದ ಲಾಭ ಪಡೆದುಕೊಳ್ಳುತ್ತಿರುವವರು ರಾಜಕಾರಣಿಗಳು, ತಾರೆಯರು ಹಾಗೂ ಪತ್ರಕರ್ತರು ಮಾತ್ರ. ಜನಸಾಮಾನ್ಯರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದರೆ ನೋಡಲು ಯಾರೂ ಇರುವುದಿಲ್ಲ. ಫೇಸ್‌ಬುಕ್‌ನಲ್ಲಿ ಕೆಲ ಗೆಳೆಯರು ನಮ್ಮನ್ನು ಗುರುತಿಸಿದರೂ ಸಹ ಇಲ್ಲಿ ತೆರೆದ ಮನಸ್ಸು ಬಿಚ್ಚಿ ಮಾತನಾಡುವಂತಿಲ್ಲ!

ಹಾಗಾಗಿ, ವ್ಯಕ್ತಿಗಿಂತ ವಿಷಯ ಮುಖ್ಯ ಎನಿಸಿದಾಗ ನಿಮ್ಮ ನೆರವಿಗೆ ಬರುವ ಒಂದೇ ಒಂದು ಕನ್ನಡಿಗರು ಕಂಡುಹಿಡಿದಿರುವ 'ನಮ್ಮಆಪ್' (NammApp). ಇದರ ಹೆಸರೇ ಹೇಳುವಂತೆ ಇದು ಒಂದು ಜಾಲತಾಣವಲ್ಲ. ಆದರೆ, ಜನಸಾಮಾನ್ಯ ಬಳಕೆದಾರರು ತಮಗೆ ಅನ್ನಿಸಿದ್ದನ್ನು ಕನ್ನಡದಲ್ಲೇ ಬರೆದು ಪ್ರಕಟಿಸಬಹುದು ಅವಕಾಶ ಕಲ್ಪಿಸಿರುವ ಒಂದು ಪ್ರಕಾಶನ ಆಪ್ ಆಗಿದೆ ಎನ್ನಬಹುದು.

ಕನ್ನಡಿಗರಿಗಾಗಿಯೇ ರೂಪಿತವಾಗಿರುವ ಹೊಸ 'ನಮ್ಮ ಆಪ್' ವೈರಲ್ ಆಗುತ್ತಿದೆ!!

ಈ ಆಪ್‌ನಲ್ಲಿ ವಿಷಯಾಧಾರಿತ ಚರ್ಚೆಗಳು ನಡೆಯುತ್ತವೆ. ಮಾಹಿತಿ ಪೋಸ್ಟ್ ಮಾಡುವವರೇ ಇಲ್ಲಿ ಸಂಪಾದಕರಾಗಿರುತ್ತಾರೆ. ವೋಟ್ ಮಾಡುವ ಮೂಲಕ ಜನರೇ ಪೋಸ್ಟ್ ಗುಣಮಟ್ಟ ಅಳೆಯುತ್ತಾರೆ ಎಂದರೆ ಇದರ ವಿಶೇಷತೆ ನಿಮಗೆ ಇಷ್ಟವಾಗಬಹದು. ಹಾಗಾಗಿ, ಕನ್ನಡಿಗರ ಈ ವಿಶಿಷ್ಟ ಸಾಮಾಜಿಕ ಜಾಲತಾಣಗಳಿಂಗಿಂತ ಭಿನ್ನವಾದ ಆಪ್ ಆಗಿ ಕಾರ್ಯನಿರ್ವಹಿಸುತ್ತದೆ.

ಆಪ್ ಅಭಿವೃದ್ದಿ ಮಾಡಿರುವುದು ಯಾರು?

ಆಪ್ ಅಭಿವೃದ್ದಿ ಮಾಡಿರುವುದು ಯಾರು?

ಫೇಸ್‌ಬುಕ್ ಮತ್ತು ಟ್ವಿಟ್ಟರ್ ಎರಡೂ ಸಾಮಾಜಿಕ ಜಾಲತಾಣಗಳ ಮಿತಿಗಳನ್ನು ಗಮನಿಸಿದ ಮೈಸೂರಿನ ಎಂಜಿನಿಯರ್‌ಗಳು ಈ ‘ನಮ್ಮ ಆಪ್' ಅಭಿವೃದ್ಧಿಪಡಿಸಿ­ದ್ದಾರೆ. ಮೈಸೂರಿನ ಎಂಜಿನಿಯರ್‌ಗಳಾದ ಬಿ.ಆರ್.ಕಿರಣ್‌ ಹಾಗೂ ವೈ.ಎಸ್.ಅಲಕನಂದಾ ಸಿದ್ಧಪಡಿಸಿರುವ ‘ನಮ್ಮ ಆಪ್' ಎಂಬ ಕನ್ನಡದ ಹೊಸ ಮೊಬೈಲ್ ಅಪ್ಲಿಕೇಷನ್ ಆಗಿದೆ.

ಆಪ್ ಒಂದು ವೃತ್ತಪತ್ರಿಕೆಯಿದ್ದಂತೆ!

ಆಪ್ ಒಂದು ವೃತ್ತಪತ್ರಿಕೆಯಿದ್ದಂತೆ!

ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರರಿಗೂ ನ್ಯೂಸ್ ಫೀಡ್ ಅವರವರ ಆಯ್ಕೆಯಾಗಿರುತ್ತದೆ. ಬಳಕೆದಾರರ ಇಷ್ಟಗಳಿಗೆ ತಕ್ಕಂತೆ ಪ್ರತ್ಯೇಕವಾಗಿರುತ್ತದೆ. ಆದರೆ, ಈ ಆಪ್ ಒಂದು ವೃತ್ತಪತ್ರಿಕೆಯಿದ್ದಂತೆ. ಇಲ್ಲಿ ಏನೇ ಬರೆದರೂ ಅದು ಎಲ್ಲರಿಗೂ ಕಾಣಿಸುತ್ತದೆ. ಯಾರೇ ಏನೇ ಪೋಸ್ಟ್‌ ಮಾಡಿದರೂ ಅದು ಆಪ್ ಬಳಸುತ್ತಿರುವ ಪ್ರತಿಯೊಬ್ಬರಿಗೂ ಸಿಗುತ್ತದೆ.

ಸಾಮಾಜಿಕ ಪ್ರಕಾಶನ!!

ಸಾಮಾಜಿಕ ಪ್ರಕಾಶನ!!

ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳ ಮಿತಿಯನ್ನು ಮೀರಿ ಹೊಸ ಸ್ವರೂಪ, ಗುಣಲಕ್ಷಣಗಳನ್ನು ಈ ‘ನಮ್ಮ ಆಪ್' ಹೊಂದಿದೆ. ಇಲ್ಲಿ ಫಾಲೋವರ್ಸ್ ಅಥವಾ ಫ್ರೆಂಡ್ಸ್ ಎನ್ನುವ ಪರಿಕಲ್ಪನೆಯೇ ಇಲ್ಲದಿರುವುದರಿಂದ ಇದನ್ನು ಸಾಮಾಜಿಕ ಜಾಲತಾಣ ಅಲ್ಲ ಎಂದು ಹೇಳಬಹುದಾಗಿದೆ. ಹಾಗಾಗಿ, ಇದನ್ನು ಸಾಮಾಜಿಕ ಪ್ರಕಾಶನ ಎಂದು ಕರೆಯಲಾಗಿದೆ.

'ನಮ್ಮಆಪ್' ಹೊಂದಿರುವ ವಿಶೇಷತೆ ಏನು?

'ನಮ್ಮಆಪ್' ಹೊಂದಿರುವ ವಿಶೇಷತೆ ಏನು?

ವ್ಯಕ್ತಿಗಿಂತ ವಿಷಯ ಮುಖ್ಯ ಎನಿಸಿದ ಯಾರಾದರೂ ಈ ಆಪ್‌ನಲ್ಲಿ ಮನಸ್ಸು ಬಿಚ್ಚಿ ಮಾತನಾಡಬಹುದು. ನಿಮ್ಮ ಮನದಾಳದ ಮಾತನ್ನು ಇತರರೊಂದಿಗೆ ಹೇಳಿಕೊಳ್ಳಬಹುದು. ಬೇರೆಯವರ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳಬಹುದು. ಫೇಸ್‌ಬುಕ್‌ ಅಥವಾ ಟ್ವಿಟರ್‌ನಂತೆ ಇಲ್ಲಿ ನಿಜವಾದ ಹೆಸರುಗಳನ್ನು ಬಳಸಲೇಬೇಕು ಎಂದೇನೂ ಇಲ್ಲ. ಅಡ್ಡ ಹೆಸರಿದ್ದರೆ ಸಾಕು.!

ಸ್ಥಾನಮಾನ ಗಳಿಸಿಕೊಳ್ಳಬಹುದು.!

ಸ್ಥಾನಮಾನ ಗಳಿಸಿಕೊಳ್ಳಬಹುದು.!

ಬಳಕೆದಾರರು ಈ ಆಪ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ನಿಮ್ಮ ಪೋಸ್ಟ್ ಅನ್ನು ಓದಿ ಆಪ್ ಬಳಕೆದಾರರು ಅಪ್ ವೋಟ್ ಮಾಡಿದರೆ ಮೇಲಿನ ಸ್ಥಾನ ಪಡೆದುಕೊಳ್ಳುತ್ತದೆ ಅಥವಾ ಡೌನ್ ವೋಟ್ ಮಾಡಿದರೆ ಕೆಳಗೆ ಹೋಗುತ್ತದೆ. ವೋಟುಗಳ ಆಧಾರದ ಮೇಲೆ ಬಳಕೆದಾರ ಸ್ಥಾನಮಾನ ಹೆಚ್ಚುತ್ತರೆ.

ವಿವಿಧ ವಿಭಾಗಗಳಲ್ಲಿ ಮಾಹಿತಿ

ವಿವಿಧ ವಿಭಾಗಗಳಲ್ಲಿ ಮಾಹಿತಿ

ಆರೋಗ್ಯ, ತಮಾಷೆ, ಪ್ರೀತಿ-ಪ್ರೇಮ, ಅಧ್ಯಾತ್ಮ, ಸಂಬಂಧ, ಊಟ-ತಿಂಡಿ, ಕಷ್ಟ-ಸುಖ, ಸಿನಿಮಾ-ಟಿವಿ-ವಿಡಿಯೊ, ವಿಚಿತ್ರ, ಅಂದ-ಚಂದ, ಪ್ರಕೃತಿ-ಕೃಷಿ, ನಾಡು-ನುಡಿ, ಉಪಯುಕ್ತ ಮಾಹಿತಿ, ಪ್ರಾಣಿ-ಪಕ್ಷಿ, ಸಮಾಜ ಸೇವೆ ಹೀಗೆ ಎಲ್ಲರಿಗೂ ಆಸಕ್ತಿಯಿರುವ ವಿಭಾಗಗಳನ್ನು ನಮ್ಮ ಆಪ್ ಹೊಂದಿದೆ. ಆಸಕ್ತಿಯ ವಿಭಾಗಗಳಲ್ಲಿ ಬಳಕೆದಾರರು ಬರೆದುಕೊಳ್ಳಬಹುದು.

ಡೌನ್‌ಲೋಡ್ ಮಾಡುವುದು ಹೇಗೆ?

ಡೌನ್‌ಲೋಡ್ ಮಾಡುವುದು ಹೇಗೆ?

ಈ ಅಪ್ಲಿಕೇಷನ್ ಅನ್ನು ಆಂಡ್ರಾಯ್ಡ್ ಫೋನ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ಲೇ ಸ್ಟೋರ್‌ಗೆ ಭೇಟಿ namma app.com ಎಂದು ಸರ್ಚ್ ಮಾಡಿದರೆ 'ನಮ್ಮ ಆಪ್' ತೆರೆಯುತ್ತದೆ. ಫೇಸ್‌ಬುಕ್‌ , ಟ್ವಿಟರ್ ಮತ್ತು ಇಂಗ್ಲೀಷ್‌ನ ಕ್ವಾರಾ ಸೈಟ್‌ಗಳನ್ನು ಒಟ್ಟಿಗೆ ಸೇರಿಸಿ ರೂಪಿಸಿದಂತೆ ಇರುವ ಆಪ್ ಈಗಾಗಲೇ 5000ಕ್ಕಿಂತ ಡೌನ್‌ಲೋಡ್ ಕಂಡಿದೆ.

Best Mobiles in India

English summary
The best Kannada content uploaded, voted & discussed freely by Kannadigas.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X