ಸರ್ಕಾರದ ಸಚಿವರು ಇನ್ನು ಮುಂದೆ BHIM ಆಪ್ ಬಳಸಬೇಕು.. ಮೋದಿ ಖಡಕ್ ಸೂಚನೆ

By GizBot Bureau
|

ಮೋದಿ ಹೇಳಿದ ಮೇಲೆ ಮುಗೀತು. ಅವರ ಸಚಿವರು, ಅವರು ಹೇಳಿದ್ದನ್ನು ಕೇಳಲೇಬೇಕು. ಕೇಳುತ್ತಾರೆ ಕೂಡ. ಡಿಜಿಟಲ್ ಇಂಡಿಯಾ ಮಾಡಬೇಕು ಅನ್ನೋ ಮೋದಿಯ ಕನಸಿಗೆ ಸಚಿವರುಗಳೇ ಸರಿಯಾದ ಸಾಥ್ ಕೊಡದೇ ಇದ್ದರೆ ಮೋದಿ ಸುಮ್ಮನೇ ಬಿಡ್ತಾರಾ.. ಮೀಟಿಂಗ್ ಕರೆದು ಎಲ್ಲಾ ಸಚಿವರಿಗೆ ಖಡಕ್ ಸಂದೇಶ ಕೊಟ್ರು ನೋಡಿ.. ಏನದು ಸಂದೇಶ ಅಂತ ಕೇಳ್ತಿದ್ದೀರಾ.. ಮುಂದೆ ಓದಿ..

ಸರ್ಕಾರದ ಸಚಿವರು ಇನ್ನು ಮುಂದೆ BHIM ಆಪ್ ಬಳಸಬೇಕು.. ಮೋದಿ ಖಡಕ್ ಸೂಚನೆ


ಕೇಂದ್ರ ಎಲ್ಲಾ ಸಚಿವರು, ಕೇಂದ್ರ ಮತ್ತು ರಾಜ್ಯದ ಎಲ್ಲಾ ಅಧಿಕಾರಿಗಳು ಮತ್ತು ಪ್ರಾಂತ್ಯಾಡಳಿತ ಅಧಿಕಾರುಗಳು ಡಿಜಿಟನ್ ಟ್ರಾಷ್ಯಾಕ್ಷನ್ ಗಳನ್ನು ಕಡ್ಡಾಯವಾಗಿ ಮಾಡಬೇಕು. ಅದಕ್ಕಾಗಿ BHIM(Bharat Interface for Money) ಆಪ್ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಅಗಸ್ಟ್ 15 ಅಂದರೆ ಸ್ವಾತಂತ್ರ್ಯದಿನದ ಒಳಗೆ ಇದನ್ನು ನೀವೆಲ್ಲರೂ ಸಾಧಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಈ ರೀತಿ, United Payment Interface (UPI ) ಬೇಸ್ಡ್ ಪೇಮೆಂಟ್ ಪ್ಲಾಟ್ ಫಾರ್ಮ್ BHIM ನ್ನು ಹೆಚ್ಚು ಬಳಸುವಂತೆ ಹೇಳಿರಲು ಒಂದು ಪ್ರಮುಖ ಕಾರಣವಿದೆ. 2017-18 ರ ಎಪ್ರಿಲ್ ಸಾಲಿನಲ್ಲಿ 9.5 ಶೇಕಡಾ ದಷ್ಟು ಬಳಕೆಯಾಗುತ್ತಿದ್ದ BHIM ಆಪ್ ನ ಬಳಕೆ ಈಗ ಶೇಕಡಾ 6.3 ಗೆ ಇಳಿಮುಖವಾಗಿದೆ ಎಂದು National Payments Corporation of India (NPCI) ತಿಳಿಸಿದೆ. 2016 ಡಿಸೆಂಬರ್ 30 ರಂದು BHIM ಆಪ್ ನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದಾಗ ಅಂತೀ ಹೆಚ್ಚು ಜನರು ಇನ್ಸ್ಟಾಲ್ ಮಾಡಿ ಬಳಕೆ ಮಾಡಲಾರಂಭಿಸಿದರಾದರೂ ನಂತರ ಬಂದ ಗೂಗಲ್ ತೇಝ್, ಫೋನ್ ಪೇ, ಪೇಟಿಎಮ್ ಗಳು ಹೆಚ್ಚು ಪ್ರಸಿದ್ಧಿ ಗಳಿಸಿ, ಬಳಕೆದಾರ ಸ್ನೇಹಿ ಅನ್ನಿಸಿಕೊಂಡವು.

ಡಿಜಿಟಲ್ ವ್ಯವಹಾರ ಅಧಿಕವಾದರೆ ಅಂದರೆ BHIM ಆಪ್ ನಂತರ ಆಪ್ ಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಿದರು ಅದನ್ನು ಅಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಉದ್ದೇಶ ಹೊಂದಿರಬಹುದು.

ನರೇಂದ್ರ ಮೋದಿ ಕ್ಯಾಬಿನೆಟ್ ಸೆಕ್ರೆಟರಿ ಪಿಕೆ ಸಿಂಹ ಅವರ ಬಳಿ ಹಣಕಾಸು ಸರ್ವೀಸ್ ಮುಖಂಡರ ಮೀಟಿಂಗ್ ನ್ನು ಕರೆಯುವಂತೆಯೂ ಸೂಚಿಸಿದ್ದರು ಮತ್ತು ಆ ಮೂಲಕ BHIM-UPI ನಲ್ಲಿ ಬ್ಯಾಂಕ್ ವಹಿವಾಟಿಗೆ ಬೆಲೆ ಪಾವತಿಸುವುದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದರು ಎನ್ನಲಾಗಿದ್ದು, ಇದು ಮೇ 23 ರಂದು ನಡೆದಿದೆ ಎನ್ನಲಾಗಿದೆ.

ಈ ರೀತಿ ಸಣ್ಣ ವ್ಯವಹಾರಗಳಿಗೂ BHIM ನಲ್ಲಿ ಬೆಲೆ ಕಟ್ಟುವಂತೆ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಮಿನಿಸ್ಟರ್, ಫುಡ್ ಮತ್ತು ಸಾರ್ವಜನಿಕ ಡಿಸ್ಟ್ರಿಬ್ಯೂಟರ್ ಜೊತೆಗೆ ದೊಡ್ಡ ಮಟ್ಟದ ಪಾವತಿದಾರರಿರುವ ಕ್ಷೇತ್ರದವರು ಕಡ್ಡಾಯವಾಗಿ ಅಥವಾ ಅತೀ ಹೆಚ್ಚಿನ ಮಟ್ಟದಲ್ಲಿ BHIM ಆಪ್ ಬಳಸುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಎಪ್ರಿಲ್ ತಿಂಗಳಲ್ಲಿ 12.6 ಮಿಲಿಯನ್ ವ್ಯವಹಾರಗಳು BHIM ನಲ್ಲಿ ನಡೆದಿದ್ದು ಸುಮಾರು 4,973 ಕೋಟಿ ಯಷ್ಟು ಎಂದು ಹೇಳಲಾಗಿದೆ. ಅದೇ ಕಳೆದ ವರ್ಷದ ವಾರ್ಷಿಕ ವರ್ಷದಲ್ಲಿ 87.91 ಮಿಲಿಯನ್ ವ್ಯವಹಾರ ನಡೆದಿದ್ದು ಒಟ್ಟು ಮೊತ್ತ 30,018 ಕೋಟಿ ರೂಪಾಯಿಗಳಾಗಿದೆ. ಎಪ್ರಿಲ್ 14 ರಂದು ಒಂದಷ್ಟು ಕ್ಯಾಷ್ ಬ್ಯಾಕ್ ಆಫರ್ ಗಳೊಂದಿಗೆ ಬಂದ BHIM ಆಪ್ ಬಹಳಷ್ಟು ಬದಲಾವಣೆಯನ್ನು ಕಂಡಿದೆಯೆಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ BHIM ಆಪ್ ಬಳಸಿದವರಿಗೆ 51 ರುಪಾಯಿ ಕ್ಯಾಷ್ ಬ್ಯಾಕ್ ಸೇರಿದಂತೆ 750 ರುಪಾಯಿ ಕ್ಯಾಷ್ ಬ್ಯಾಕ್ ಕೂಡ ಇತ್ತು. ಜೊತೆಗೆ ತಿಂಗಳಿಡೀ BHIM ಆಪ್ ಬಳಸಿಯೇ ವ್ಯವಹಾರ ನಡೆಸಿದವರಿಗೆ 1000 ರೂಪಾಯಿ ಕ್ಯಾಷ್ ಬ್ಯಾಕ್ ಆಫರ್ ನೀಡಲಾಗಿತ್ತು.

<strong>ಭಾರತದಲ್ಲಿ ಬಿಡುಗಡೆಗೊಂಡಿದೆ ಮೋಟೋ ಜಿ6 ಮತ್ತು ಜಿ6 ಪ್ಲೇ ಮೊಬೈಲ್ ಗಳು..</strong>ಭಾರತದಲ್ಲಿ ಬಿಡುಗಡೆಗೊಂಡಿದೆ ಮೋಟೋ ಜಿ6 ಮತ್ತು ಜಿ6 ಪ್ಲೇ ಮೊಬೈಲ್ ಗಳು..

BHIM ಒಂದು ಸರಳವಾದ ಸ್ಮಾರ್ಟ್ ಫೋನ್ ನಲ್ಲಿ ಬಳಸುವ ಪೇಮೆಂಟ್ ಆಪ್ ಆಗಿದ್ದು, UPI ಬಳಸಿ ನಿಮ್ಮ ವ್ಯವಹಾರಗಳನ್ನು ಮಾಡಬಹುದಾಗಿದೆ. ಬಳಕೆದಾರರು ನೇರವಾಗಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯವಹಾರವನ್ನು ಸುಲಭದಲ್ಲಿ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದಾದ ಸುಲಭದ ಪೇಮೆಂಟ್ ಆಪ್ ಇದು. ಪೇಮೆಂಟ್ ಅಡ್ರೆಸ್ ಅಥವಾ ಮೊಬೈಲ್ ನಂಬರ್ ಬಳಸಿಯೇ ಹಣಕಾಸು ವ್ಯವಹಾರವನ್ನು ಇದರಲ್ಲಿ ಮಾಡಬಹುದಾಗಿದೆ.

NPCI ಹೇಳಿಕೆಯಂತೆ, ಹಣವನ್ನು ಕೂಡಲೇ ಕಳಿಸುವ ಮತ್ತು ಪಡೆದುಕೊಳ್ಳುವ ಏಕಮಾತ್ರ ಆಪ್ ಇದಾಗಿದ್ದು, ನಿಜಕ್ಕೂ BHIM ಆಪ್ ನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕಾಗಿದೆ. ಈಗಾಗಲೇ 95 ಬ್ಯಾಂಕ್ ಗಳು BHIM ಆಪ್ ನಲ್ಲಿ ಬರಲಿದ್ದು, ಸುಲಭದ ಹಣಕಾಸು ವ್ಯವಹಾರಕ್ಕೆ ಇದು ನೆರವಾಗಲಿದೆ. ಆದಷ್ಟು ಡಿಜಿಟಲ್ ವ್ಯವಸ್ಥೆಯನ್ನು ಜನರು ಬಳಸಿಕೊಂಡರೆ ಮೋದಿಯ ಡಿಜಿಟಲ್ ಇಂಡಿಯಾ ಕನಸು ನೆರವೇರಿದಂತಾಗುತ್ತೆ. ಅದಕ್ಕೆ ಸಚಿವರು, ಅಧಿಕಾರಿಗಳೇ ಮೊದಲ ಮುನ್ನುಡಿ ಬರೆದರೆ ಹೆಚ್ಚು ಅನುಕೂಲವಾಗುವುದು ಖಚಿತ.

Best Mobiles in India

Read more about:
English summary
Narendra Modi asks all ministries states to boost BHIM app use

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X