ಭಾರತದ ‘ಮಿಷನ್‌ ಶಕ್ತಿ’ ಯೋಜನೆ ಭಯಾನಕ ಎಂದ ನಾಸಾ!..ಕಾರಣಗಳು ಇವಂತೆ!

|

ಅಂತರಿಕ್ಷದಲ್ಲೇ ಉಪಗ್ರಹವನ್ನು ಹೊಡೆದುರುಳಿಸುವ 'ಮಿಷನ್‌ ಶಕ್ತಿ' ಯೋಜನೆಯಲ್ಲಿ ಭಾರತದ ಯಶಸ್ವಿಯಾದ ನಂತರ ನಾಸಾ ಕೆರಳಿದೆ. ಮಿಷನ್‌ ಶಕ್ತಿಯಿಂದ ಭಾರತಕ್ಕೆ ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳು ಉಂಟಾಗಿರುವ ನಡುವೆಯೇ ಭಾರತದ ಈ ಮಹಾತ್ವಾಕಾಂಕ್ಷಿ ಯೋಜನೆಯ ಯಶಸ್ವಿಯನ್ನು ನಾಸಾ ಅಧಿಕಾರಿಗಳು 'ಭಯಾನಕ' ಎಂದು ಕರೆದಿದ್ದಾರೆ. ಭಾರತದ 'ಮಿಷನ್‌ ಶಕ್ತಿ' ಯೋಜನೆಯಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯ ಒದಗಿದೆ ಎಂದು ಹೇಳಿದ್ದಾರೆ.

ಹೌದು, 'ಮಿಷನ್‌ ಶಕ್ತಿ' ಮೂಲಕ ಅಂತರಿಕ್ಷದಲ್ಲಿ ಉಪಗ್ರಹವನ್ನು ಹೊಡೆದುರುಳಿಸಿ ಪ್ರಪಂಚದಲ್ಲಿ ಈ ಸಾಮರ್ಥ್ಯ ಹೊಂದಿರುವ ನಾಲ್ಕನೇ ದೇಶವಾಗಿ ದಾಪುಗಾಲಿಟ್ಟಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಈ ಶ್ರಮಕ್ಕೆ ವಿಶ್ವಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದ್ದರೆ, ಭಾರತದ ಶತ್ರು ರಾಷ್ಟ್ರಗಳು ಈ ಸಾಧನೆಗೆ ಕಂಗಾಲಾಗಿವೆ. ಆದರೆ, ಮಿಷನ್‌ ಶಕ್ತಿ ಯೋಜನೆಯನ್ನು 'ಭಯಾನಕ' ಎಂದು ನಾಸಾ ಅಧಿಕಾರಿಗಳು ಕರೆದಿದ್ದಾರೆ ಮತ್ತು ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಭಾರತದ ‘ಮಿಷನ್‌ ಶಕ್ತಿ’ ಯೋಜನೆ ಭಯಾನಕ ಎಂದ ನಾಸಾ!..ಕಾರಣಗಳು ಇವಂತೆ!

ಇತ್ತೀಚಿನ ದಿನಗಳಲ್ಲಿ ಮನುಕುಲದ ಉದ್ಧಾರಕ್ಕಾಗಿ ಬಾಹ್ಯಾಕಾಶ ಕ್ಷೇತ್ರವನ್ನು ನಾವು ಹೆಚ್ಚೆಚ್ಚು ಬಳಸಿಕೊಳ್ಳುತ್ತಿದ್ದೇವೆ. ವಿಜ್ಞಾನಿಗಳು ತಳ ಭೂ ಕಕ್ಷೆ ಹಾಗೂ ಬಾಹ್ಯಾಕಾಶದಲ್ಲಿ ಹಲವಾರು ಸಂಶೋಧನೆಗಳು ನಡೆಸುತ್ತಿದ್ದಾರೆ. ಇವುಗಳನ್ನೆಲ್ಲಾ ಗುರುತ್ವಾಕರ್ಷಣ ವಲಯದಲ್ಲಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಉಪಗ್ರಹ ತ್ಯಾಜ್ಯ ನಿರ್ಮಾಣವು ಈ ಎಲ್ಲಾ ಪ್ರಕ್ರಿಯೆಗಳಿಗೆ ಅಡ್ಡಿ ಉಂಟುಮಾಡಬಾರದೆನ್ನುವುದು ನಮ್ಮ ಕಾಳಜಿಯಾಗಿದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ.

ಭಾರತದ ‘ಮಿಷನ್‌ ಶಕ್ತಿ’ ಯೋಜನೆ ಭಯಾನಕ ಎಂದ ನಾಸಾ!..ಕಾರಣಗಳು ಇವಂತೆ!

ಮಿಷನ್‌ ಶಕ್ತಿ ಎಂಬ ಹೆಸರಿನ ಯೋಜನೆಯ ಮೂಲಕ ಭೂ ಕಕ್ಷೆಯಲ್ಲಿ ಸುತ್ತುತ್ತಿದ್ದ ಭಾರತದ್ದೇ ಉಪಗ್ರಹವೊಂದನ್ನು ಭಾರತದ ಕ್ಷಿಪಣಿಗಳು ಹೊಡೆದುರುಳಿಸಿರುವುದರಿಂದ ಆ ಉಪಗ್ರಹ ಚೂರಾಗಿ 400 ತುಣುಕುಗಳು ಸೃಷ್ಟಿಯಾಗಿವೆ ಇವುಗಳಲ್ಲಿ 60 ತುಣುಕುಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು 24 ತುಣುಕುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಪರಿಧಿಯ ಮೇಲ್ಭಾಗಕ್ಕೆ ಸಾಗುತ್ತಿವೆ ಎಂದು ನಾಸಾ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ‘ಮಿಷನ್‌ ಶಕ್ತಿ’ ಯೋಜನೆ ಭಯಾನಕ ಎಂದ ನಾಸಾ!..ಕಾರಣಗಳು ಇವಂತೆ!

ಭಾರತ ನಡೆಸಿದ ಈ ಪರೀಕ್ಷೆಯಿಂದ ಉಂಟಾದ ಉಪಗ್ರಹ ತ್ಯಾಜ್ಯದ ಸಣ್ಣ ಕಣಗಳು ಕಳೆದ 10 ದಿನಗಳಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ 44% ಅಪಾಯ ತಂದೊಡ್ಡಿವೆ ಎಂಬ ಭೀತಿಯನ್ನು ಸಹ ಇದೇ ಸಂದರ್ಭದಲ್ಲಿ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಏನೇ ಆದರೂ, ಭಾರತ ಹೆಮ್ಮೆ ಪಡಬೇಕಾದ ಸಮಯ ಇದಾಗಿದೆ.. ಈಗ ನಾವು ನಮ್ಮ ಭೂಮಿ, ಗಾಳಿ ಮತ್ತು ನೀರನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯದ ಜೊತೆಗೆ ಬಾಹ್ಯಾಕಾಶದಲ್ಲೂ ರಕ್ಷಣಾ ಸಾಮರ್ಥ್ಯದಲ್ಲಿ ಸೈ ಎನಿಸಿಕೊಂಡಿದೆ. ಹಾಗಾದರೆ, ಏನಿದು ಮಿಷನ್ ಶಕ್ತಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಭಾರತವೀಗ ವಿಶ್ವದ 'ಸ್ಪೇಸ್ ಸೂಪರ್ ಪವರ್'!..ಕಾರಣವಾದ 'ಮಿಷನ್ ಶಕ್ತಿ' ಏನಿದು?

ಭಾರತವೀಗ ವಿಶ್ವದ 'ಸ್ಪೇಸ್ ಸೂಪರ್ ಪವರ್'!..ಕಾರಣವಾದ 'ಮಿಷನ್ ಶಕ್ತಿ' ಏನಿದು?

ಇದು ದೇಶದ ಅತಿ ದೊಡ್ಡ ಸಂತಸದ ಕ್ಷಣ. ಎಲ್ಲರೂ ಹೆಮ್ಮೆ ಪಡಬೇಕಾದ ಸಮಯ. ಈಗ ನಾವು ನಮ್ಮ ಭೂಮಿ, ಗಾಳಿ ಮತ್ತು ನೀರನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯದ ಜೊತೆಗೆ ಬಾಹ್ಯಾಕಾಶದಲ್ಲೂ ರಕ್ಷಣಾ ಸಾಮರ್ಥ್ಯದಲ್ಲಿ ಸೈ ಎನಿಸಿಕೊಂಡಿದ್ದೆವೆ. ಭಾರತ ಇಂದು 'ಗ್ರೇಟ್ಸ್​ ಆಫ್​ ದಿ ಸ್ಪೇಸ್​ ರೇಸ್'​ನಲ್ಲಿ ತನ್ನ ಹೆಸರನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡಿದೆ. 'ಮಿಷನ್​ ಶಕ್ತಿ' ಯೋಜನೆ ಬೃಹತ್​ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ ನಂತರ ಏನಿದು 'ಮಿಷನ್ ಶಕ್ತಿ' ಎಂಬುದು ವೈರಲ್ ಆಗಿದೆ.

ಹೌದು, ಇಂದು ಮಧ್ಯಾಹ್ನ 12.30 ಮಾತು ಆರಂಭಿಸಿದ ಪ್ರಧಾನಿ ಮೋದಿ, 'ಮಿಷನ್ ಶಕ್ತಿ' ಭಾರತ ಬಾಹ್ಯಾಕಾಶ ಶಕ್ತಿಯನ್ನು ಪ್ರಪಂಚದಲ್ಲೇ ನಾಲ್ಕನೇ ಸ್ಥಾನಕ್ಕೇರಿದ್ದೇವೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಯೋಜನೆಯಲ್ಲಿ ಪಾಲುದಾರರಾದ ಇಸ್ರೋದ ಎಲ್ಲ ವಿಜ್ಞಾನಿಗಳಿಗೂ ನಾನು ಅಭಿನಂದನೆ ಸಲ್ಲಿಸಿ, ಈ ಮೂಲಕ ತಂತ್ರಜ್ಞಾನ ಆವಿಷ್ಕಾರ ಮತ್ತು ಉಪಯೋಗದಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ ಎಂಬುದನ್ನು ತಿಳಿಸಿದರು. ಇದಾದ ನಂತರ ಮಿಷನ್ ಶಕ್ತಿ' ಎಂಬುದು ಏನು ಎಂಬುದು ಆನ್‌ಲೈನಿನಲ್ಲಿ ವೈರಲ್ ಆಯಿತು.

ಈವರೆಗೂ ಅಮೆರಿಕ, ರಷ್ಯಾ ಮತ್ತು ಚೀನಾ ಈ ಸಾಧನೆ ಮಾಡುವ ಮೂಲಕ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ ಎಂಬುದು ತಿಳಿದುಬಂದಾಗ 'ಮಿಷನ್ ಶಕ್ತಿ' ಬಗ್ಗೆ ಆನ್‌ಲೈನಿನಲ್ಲಿ ಮಾಹಿತಿ ದೊರೆತಿದೆ. ಬಾಹ್ಯಾಕಾಶದಲ್ಲಿ ವಿರೋಧಿ ಉಪಗ್ರಹ ಕ್ಷಿಪಣಿಯನ್ನು ಕೆಲವೇ ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ತಂತ್ರಜ್ಞಾನವನ್ನೇ 'ಮಿಷನ್ ಶಕ್ತಿ' ಎಂದು ಕರೆಯಲಾಗಿದೆ. ಹಾಗಾದಗಿ, ಏನಿದು 'ಮಿಷನ್ ಶಕ್ತಿ'?, ಇದರ ಸಾಮರ್ಥ್ಯ ಏನು ಎಂಬ ಪೂರ್ಣ ಮಾಹಿತಿ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಏನಿದು ಮಿಷನ್​ ಶಕ್ತಿ?

ಏನಿದು ಮಿಷನ್​ ಶಕ್ತಿ?

ಭೂಮಿಯಿಂದಲೇ ಲೇಸರ್​ ಕಿರಣಗಳನ್ನು ಬಾಹ್ಯಾಕಾಶಕ್ಕೆ ಬಿಟ್ಟು ಅನುಪಯುಕ್ತ ಉಪಗ್ರಹವನ್ನು ನಾಶ ಮಾಡುವುದನ್ನು ಮಿಷನ್​ ಶಕ್ತಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತಿಚಿಗೆ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿದೆ. ಈ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

3 ನಿಮಿಷದಲ್ಲಿ ಉಪಗ್ರಹ ನಾಶ!

3 ನಿಮಿಷದಲ್ಲಿ ಉಪಗ್ರಹ ನಾಶ!

'ಮಿಷನ್ ಶಕ್ತಿ' ತಂತ್ರಜ್ಞಾನದ ಮೂಲಕ ಬಾಹ್ಯಾಕಾಶದಲ್ಲಿ 300 ಕಿ.ಮೀ. ದೂರದಲ್ಲಿರುವ ಕಡಿಮೆ ಕಕ್ಷೆಯ ಉಪಗ್ರಹದ ಮೂಲಕ ಉಪಗ್ರಹವನ್ನು ಮೂರು ನಿಮಿಷದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಇದೀಗ ಭಾರತಕ್ಕೆ ಇದೆ. ಇದು ಶತ್ರುಗಳದ್ದೇ ಆಗಿರಬಹುದು ಅಥವಾ ನಮ್ಮದೇ ಯಾವುದಾದರೂ ಉಪಗ್ರಹಗಳೇ ಆಗಿರಬಹುದು ಎಂದು ತಜ್ಞ ವಿಜ್ಞಾನಿಗಳು ತಿಳಿಸಿದ್ದಾರೆ.

ಮಿಷನ್​ ಶಕ್ತಿ ಉಪಯೋಗವೇನು?

ಮಿಷನ್​ ಶಕ್ತಿ ಉಪಯೋಗವೇನು?

ಉಡಾವಣೆ ಮಾಡುವ ಉಪಗ್ರಹಗಳು ತನ್ನ ಕೆಲಸ ಮುಗಿಸಿದ ನಂತರ ಅಥವಾ ತಂತ್ರಜ್ಞಾನದ ಸಮಸ್ಯೆಯಿಂದ ಉಪಗ್ರಹ ಅನುಪಯುಕ್ತವಾಗಬಹುದು. ಈ ಸಮಯದಲ್ಲಿ ಭೂಮಿಯಿಂದ ಅದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅದರಿಂದ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದು. ಇದಕ್ಕೆ ಪರಿಹಾರವೇ ಮಿಷನ್​ ಶಕ್ತಿ ತಂತ್ರಜ್ಞಾನ ಎಂದಿದ್ದಾರೆ.

ಮಿಷನ್​ ಶಕ್ತಿ ಸಾಮರ್ಥ್ಯ ಏನು?

ಮಿಷನ್​ ಶಕ್ತಿ ಸಾಮರ್ಥ್ಯ ಏನು?

ಕೆಟ್ಟ ಅಥವಾ ದ್ರೋಹಿಗಳ ಉಪಗ್ರಹವನ್ನು ಯಾವ ಸಮಯದಲ್ಲಿ ಅಂತರಿಕ್ಷದಲ್ಲಿ ಯಾವ ಕಕ್ಷೆಗೆ ಬರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಲೇಸರ್​ ಕಿರಣಗಳನ್ನು ಭೂಮಿಯಿಂದಲೇ ಕಳುಹಿಸಿ ಉಪಗ್ರಹವನ್ನು ಸುಟ್ಟು ಬಿಡಬಹುದು. ನಮ್ಮ ಕೆಟ್ಟ ಉಪಗ್ರಹಗಳಿಂದ ಇತರ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದನ್ನು ಮಿಷನ್​ ಶಕ್ತಿ ಮೂಲಕ ತಡೆಯಬಹುದು.

ಜಾಗತಿಕವಾಗಿ ನಾಲ್ಕನೇ ರಾಷ್ಟ್ರ

ಜಾಗತಿಕವಾಗಿ ನಾಲ್ಕನೇ ರಾಷ್ಟ್ರ

ಬಾಹ್ಯಾಕಾಶದಲ್ಲಿ ವಿರೋಧ ಉಪಗ್ರಹ ಕ್ಷಿಪಣಿಯನ್ನು ನಿಮಿಷದಲ್ಲಿ ಹೊಡೆದುರುಳಿಸುವ ಬಾಹ್ಯಾಕಾಶ ಶಕ್ತಿಶಾಲಿ ರಾಷ್ಟ್ರಗಳ ಸಾಲಿಗೆ ಇಂದು ಭಾರತ ಸೇರಿದೆ. ಜಾಗತಿಕವಾಗಿ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ 1997ರಲ್ಲಿ ಇದೇ ರೀತಿಯ ಪರೀಕ್ಷೆಯನ್ನು ಅಮೆರಿಕ ಮಾಡಿತ್ತು, 2007 ಚೀನಾ ದೇಶ ಮಾಡಿದ್ದರೆ, ಅದಕ್ಕೂ ಮುನ್ನನೇ ರಷ್ಯಾ ಕೂಡ ಮಾಡಿ ಮುಗಿಸಿದೆ.

Best Mobiles in India

English summary
NASA Calls India's Mission Shakti 'Terrible', As It Added 400 Dangerous Pieces To Earth's Orbit. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X