ಸೂರ್ಯನತ್ತ ಹೊರಟಿದ್ದ ನೌಕೆಯನ್ನು ಕೊನೆಕ್ಷಣದಲ್ಲಿ ತಡೆಯಿತು ನಾಸಾ!!

|

ಜಗತ್ತಿಗೆ ಬೆಳಕಿನ ಮೂಲವಾಗಿರುವ ಸೂರ್ಯನ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲು ಹೊರಟಿದ್ದ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ್ ರೋಬೀ ಉಡಾವಣೆಯನ್ನು ನಾಸಾ ಮುಂದೂಡಿದೆ. ನೌಕೆಯನ್ನು ಹೊತ್ತೊಯ್ಯುವ ಉಡಾವಣಾ ವಾಹಕ ನೆಲದಿಂದ ಚಿಮ್ಮುತ್ತದೆ ಎನ್ನುವ ವೇಳೆಯಲ್ಲಿ ಉಡಾವಣಾ ಸಮಯವನ್ನು ಬದಲಾಯಿಸಿರುವುದಾಗಿ ನಾಸಾ ತಿಳಿಸಿದೆ.

ನಾಸಾ ಈ ಬಗ್ಗೆ ಟ್ವಿಟ್ ಮೂಲಕ ತಿಳಿಸಿದ್ದು, ಇದೇ ಭಾನುವಾರ ಬೆಳಗ್ಗೆ ಉಡಾವಣೆಯನ್ನು ಕೈಗೊಳ್ಳಲಾಗುವುದು. ನಿರ್ಧಿಷ್ಟ ಸಮಯವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಸೂರ್ಯನಿಗೆ ಟಾರ್ಚ್ ಬಿಟ್ಟು ಅಧ್ಯಯನ ನಡೆಸಲು ಹೊರಟಿದ್ದ ಶೋಧ ನೌಕೆಗೆ ಮೊದಲ ವಿಘ್ನ ಎದುರಾದಂತಿದೆ. ಆದರೆ, ಈ ಎಲ್ಲಾ ಅಡೆತಡೆಗಳನ್ನು ಡಾಟುವ ನಿರೀಕ್ಷೆಯಲ್ಲಿ ವಿಜ್ಞಾನಿಗಳಿದ್ದಾರೆ.

ಸೂರ್ಯನತ್ತ ಹೊರಟಿದ್ದ ನೌಕೆಯನ್ನು ಕೊನೆಕ್ಷಣದಲ್ಲಿ ತಡೆಯಿತು ನಾಸಾ!!

ಸೂರ್ಯನ ಕುರಿತು ವಿಜ್ಞಾನಿಗಳಿಗೆ ದೊರಕಿರುವ ಮಾಹಿತಿ ಕಡಿಮೆ ಇದೆದ್ದು, ಅದನ್ನು ಪೂರಸುವ ಸಲುವಾಗಿ ಈಗ 'ಪಾರ್ಕರ್​ ಸೋಲಾರ್​ ಪ್ರೋಬ್' ನೌಕೆ ಸೂರ್ಯನತ್ತ ಚಿಮ್ಮುತ್ತಿದೆ. ಹಾಗಾದರೆ, ಸೂರ್ಯನ ಬಳಿಗೆ ತೆರಳುತ್ತಿರುವ ನೌಕೆ ಸಾಮರ್ಥ್ಯವೇನು? ಸೂರ್ಯನ ಬಳಿ ಈ ನೌಕೆ ಎಷ್ಟು ಹತ್ತಿ ತೆರಳುತ್ತಿದೆ ಎಂಬ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಅತ್ಯಂತ ಹತ್ತಿರಕ್ಕೆ ನೌಕೆ!

ಅತ್ಯಂತ ಹತ್ತಿರಕ್ಕೆ ನೌಕೆ!

ಈ ಹಿಂದೆ ಹಲವು ಬಾರಿ ಸೂರ್ಯನಲ್ಲಿಗೆ ನಾಸಾ ಶೋಧ ನೌಕೆಗಳನ್ನು ಹಾರಿ ಬಿಟ್ಟಿದೆ. ಆದರೆ, ಇದೇ ಮೊದಲ ಬಾರಿಗೆ ಸೂರ್ಯನಿಗೆ ಅತ್ಯಂತ ಹತ್ತಿರಕ್ಕೆ ಹೋಗುತ್ತಿರುವ ನೌಕೆ ಇದಾಗಿದೆ. ಪಾರ್ಕರ್​ ಉಪಗ್ರಹ ಸೂರ್ಯನಿಂದ ಸುಮಾರು 7 ಲಕ್ಷ ಕಿಲೋಮೀಟರ್​ ಹತ್ತಿರದವರೆಗೆ ಹಾರಲಿದೆ ಎಂದು ನಾಸಾ ತಿಳಿಸಿದೆ.

ನೌಕೆಯ ಮುಖ್ಯ ಗುರಿ ಏನು?

ನೌಕೆಯ ಮುಖ್ಯ ಗುರಿ ಏನು?

ಸೂರ್ಯನ ಮೇಲ್ಮೈನಲ್ಲಿ ಇದ್ದಕ್ಕಿದ್ದಂತೆ ಉಷ್ಣಾಂಶದಲ್ಲಿ ಏರಿಳಿತ ಆಗುವುದೇಕೆ ಎಂಬುದನ್ನು ತಿಳಿಯುವ ಮುಖ್ಯ ಗುರಿಯನ್ನು ಈ 'ಪಾರ್ಕರ್​ ಸೋಲಾರ್​ ಪ್ರೋಬ್' ನೌಕೆ ಹೊಂದಿದೆ. ಆಗಾಗ ಬೀಸುವ ಸೌರ ಮಾರುತಗಳ ಕುರಿತು ಸಹ ಅಧ್ಯಯನ ನಡೆಸಲಿದೆ. ಜತೆಗೆ ಶಕ್ತಿಯ ಕಣಗಳು ಚಲಿಸೋಕೆ ಕಾರಣವಾಗುವ ಅಂಶಗಳು ಯಾವುವು ಎಂಬ ಮಾಹಿತಿ ಕಲೆ ಹಾಕಲಿದೆ.

ಹೇಗಿದೆ ನೌಕೆ?

ಹೇಗಿದೆ ನೌಕೆ?

ಫ್ಲೋರಿಡಾದ ಕೇಪ್​ ಕಾರ್ನವೆರಲ್​ನಿಂದ ಡೆಲ್ಟಾ 4 ನೌಕೆಯ ಮೂಲಕ ಹಾರುತ್ತಿರುವ 'ಪಾರ್ಕರ್​ ಸೋಲಾರ್​ ಪ್ರೋಬ್' ಒಂದು ಕಾರಿನ ಗಾತ್ರದ ಶೋಧ ನೌಕೆಯಾಗಿದೆ. ಈ ಉಪಗ್ರಹದಲ್ಲಿ ಫೀಲ್ಡ್ಸ್​, ಈಸೋಸ್​, ವಿಸ್ಪರ್​, ಸ್ವೀಪ್​, ಹೀಲಿಯೋಸ್ಪ್​​ ಎಂಬ ನಾನಾ ಉಪಕರಣಗಳನ್ನು ಅಳವಡಿಸಲಾಗಿದ್ದು, ಅವೆಲ್ಲವನ್ನು ತನ್ನ ಜತೆ ಒಯ್ಯಲಿದೆ.

ಫೀಲ್ಡ್ಸ್ ಮತ್ತು ಈಸೋಸ್​

ಫೀಲ್ಡ್ಸ್ ಮತ್ತು ಈಸೋಸ್​

ನೌಕೆ ಹೊತ್ತಿರುವ ನಾನಾ ಉಪಕರಣಗಳಲ್ಲಿ ಈಸೋಸ್,​ ಶಕ್ತಿಶಾಲಿ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಇತರ ಭಾರದ ಅಯಾನ್​ಗಳ ಕುರಿತು ಅಧ್ಯಯನ ನಡೆಸಲಿದ್ದರೆ, ಫೀಲ್ಡ್ಸ್​​ ಉಪಕರಣ ಸೂರ್ಯನ ವಿದ್ಯುತ್​ ವಲಯ, ಗುರುತ್ವಾಕರ್ಷಣ ಶಕ್ತಿ, ರೇಡಿಯೋ ತರಂಗಗಳ ಕುರಿತು ಸಂಶೋಧನೆ ನಡೆಸಲಿದೆ.

ಕರೋನಾ ಸೆರೆಹಿಡಿಯಲಿದೆ.

ಕರೋನಾ ಸೆರೆಹಿಡಿಯಲಿದೆ.

ಫೀಲ್ಡ್ಸ್ ಮತ್ತು ಈಸೋಸ್​ ಕಾರ್ಯಗಳು ಮೇಲೆ ತಿಳಿಸಿದಂತಿದ್ದರೆ, ಸೂರ್ಯನ ಮೇಲ್ಮೈ ಅಂದರೆ ಕರೋನಾ ಮತ್ತು ಒಳ ವಾತಾವರಣದ ಚಿತ್ರಗಳನ್ನು ಆಪ್ಟಿಕಲ್​ ಇಮೇಜ್​ ಸೆನ್ಸಾರ್​ ಸೆರೆ ಹಿಡಿಯಲಿದೆ.ಸ್ವೀಪ್​ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಹೀಲಿಯಂ ಅಯಾನ್​ಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಅವುಗಳ ಸಾಂದ್ರತೆ ಮತ್ತು ಶಾಖದ ಕುರಿತು ಮಾಹಿತಿ ನೀಡಲಿದೆ.

Best Mobiles in India

English summary
Parker Solar Probe: Nasa cancel launch of spacecraft just moments before lift off. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X