Home
ಸುದ್ದಿಜಾಲ

ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸ ಹೋಗಬೇಕೆ?..ಮೊದಲು ಆಗುವ ವೆಚ್ಚ ಎಷ್ಟು ನೋಡಿ!!

ಬಾಹ್ಯಾಕಾಶದ ಬಗ್ಗೆ ಓದಿ, ಕೇಳಿಯೇ ಕಲ್ಪನೆಯನ್ನು ಕಂಡಿರುವ ಬಾಹ್ಯಾಕಾಶ ಪ್ರಿಯರಿಗೆ ಇದೊಂದು ಭರ್ಜರಿ ಸಿಹಿಸುದ್ದಿ ಎನ್ನಬಹುದು. ಏಕೆಂದರೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇನ್ಮುಂದೆ ಪ್ರವಾಸಿಗರು ಭೇಟಿ ನೀಡಬಹುದು ಎಂದು ನಾಸಾ ತಿಳಿಸಿದೆ. ಇಂತಹ ಅವಕಾಶವನ್ನು ಮುಂದಿನ ವರ್ಷವೇ ನಾಸಾ ಕಲ್ಪಿಸುತ್ತಿದ್ದು, 2020 ರಿಂದ ಈ ಯೋಜನೆ ಆರಂಭವಾಗಲಿದೆ.

ಹೌದು, 'ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ವಾಣಿಜ್ಯ ಚಟುವಟಿಕೆ ಕೈಗೊಳ್ಳಲು ಮುಕ್ತಗೊಳಿಸಲಾಗುವುದು' ಎಂದು ನಾಸಾದ ಮುಖ್ಯ ಹಣಕಾಸು ಅಧಿಕಾರಿ ಜೆಫ್ ಡೆವಿಟ್ ಅವರು ನ್ಯೂಯಾರ್ಕ್‌ನಲ್ಲಿ ಇತ್ತೀಚಿಗೆ ತಿಳಿಸಿದ್ದಾರೆ. ಈ ವಿಶೇಷ ಯೋಜನೆಗಾಗಿ ನಾಸಾ 'ಎಲಾನ್ ಮಸ್ಕ್ಸ್ ಸ್ಪೆಸ್ ಎಕ್ಸ್‌' ಮತ್ತು 'ಬೋಯಿಂಗ್' ಕಂಪನಿಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸ ಹೋಗಬೇಕೆ?..ಮೊದಲು ಆಗುವ ವೆಚ್ಚ ಎಷ್ಟು ನೋಡಿ!!

30 ದಿನಗಳ ಬಾಹ್ಯಾಕಾಶ ಪ್ರವಾಸ ಇದಾಗಿದ್ದು, ಪ್ರತಿ ವರ್ಷ 12 ಗಗನ ಯಾತ್ರಿಗಳು ಭೇಟಿ ನೀಡಬಹುದಾಗಿದೆ. ಆದರೆ, ಈ ಪ್ರವಾಸಕ್ಕೆ ತಗುಗುವ ವೆಚ್ಚ ಮಾತ್ರ ಗಗನ ಕುಸುಮವಾಗಿದ್ದು, ಈ ಸಂಪೂರ್ಣ ಪ್ರವಾಸಕ್ಕೆ ಸುಮಾರು 58 ಮಿಲಿಯನ್‌ ಡಾಲರ್‌ (402.462 ಕೋಟಿ) ವೆಚ್ಚವಾಗಬಹುದು. ಅಂದರೆ, ಪ್ರತಿರಾತ್ರಿಗೆ 35 ಸಾವಿರ ಡಾಲರ್‌ (24.28 ಲಕ್ಷ) ಶುಲ್ಕ ನಿಗದಿಪಡಿಸಲಾಗಿದೆ.

ಈ ಹಣವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲು ಮತ್ತು ಆಹಾರ ಹಾಗೂ ಜೀವ ರಕ್ಷಕ ವ್ಯವಸ್ಥೆಗಾಗಿ ವೆಚ್ಚ ಮಾಡಲಾಗುವುದು. ಇನ್ನು 'ಎಲಾನ್ ಮಸ್ಕ್ಸ್ ಸ್ಪೆಸ್ ಎಕ್ಸ್‌' ಮತ್ತು 'ಬೋಯಿಂಗ್' ಕಂಪನಿಗಳು, ಅಲ್ಲಿಗೆ ತೆರಳುವ ಗಗನಯಾತ್ರಿಗಳ ವೈದ್ಯಕೀಯ ಪರೀಕ್ಷೆ ಕೈಗೊಳ್ಳುವುದು ಮತ್ತು ತರಬೇತಿ ನೀಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿವೆ ಎಂದು ನಾಸಾ ಮಾಹಿತಿ ನೀಡಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸ ಹೋಗಬೇಕೆ?..ಮೊದಲು ಆಗುವ ವೆಚ್ಚ ಎಷ್ಟು ನೋಡಿ!!

ಈ ಮೊದಲು ಬಾಹ್ಯಾಕಾಶ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ನಾಸಾ ನಿಷೇಧಿಸಿತ್ತು. ಗಗನಯಾತ್ರಿಗಳು ಲಾಭಕ್ಕಾಗಿ ಸಂಶೋಧನೆ ಕೈಗೊಳ್ಳುವುದನ್ನು ಸಹ ನಿರ್ಬಂಧಿಸಿತ್ತು. ಆದರೆ, 2001ರಲ್ಲಿ ಮಾತ್ರ ಅಮೆರಿಕದ ಉದ್ಯಮಿ ಡೆನ್ನಿಸ್ ಟಿಟೊ ಮೊದಲ ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವಾಸಿಗನಾಗಿ ಭೇಟಿ ನೀಡಿದ್ದರು. ಇದಕ್ಕೆ ಅವರು ರಷ್ಯಾಗೆ 20 ಮಿಲಿಯನ್‌ ಡಾಲರ್‌ ಪಾವತಿಸಿದ್ದರು.

ಓದಿರಿ: 'ಡಿಎಲ್' ಮಾಡಿಸಲು ಇನ್ಮುಂದೆ ಅಲೆದಾಡಬೇಕಿಲ್ಲ!..ಆನ್‌ಲೈನಿನಲ್ಲೇ ಹೀಗೆ ಪಡೆಯಿರಿ!

Best Mobiles in India

English summary
Nasa to open International Space Station to tourists. Nasa is to allow tourists to visit the International Space Station from 2020, priced at $35,000 (£27,500) per night. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+