ಮಂಗಳ ಗ್ರಹಕ್ಕೆ ಹೋಗಲು ಬಯಸುವವರಿಗೆ ನಾಸಾ ಕಡೆಯಿಂದ ಅರ್ಜಿ ಆಹ್ವಾನ!

|

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳನ ಅಂಗಳಕ್ಕೆ ಜನರನ್ನು ಕರೆದುಕೊಂಡು ಹೋಗಲು ಪ್ಲ್ಯಾನ್‌ ರೂಪಿಸಿದೆ. ಈಗಾಗಲೇ ಮಂಗಳನ ಅಂಗಳದಲ್ಲಿ ಒಂದು ವರ್ಷ ಕಳೆಯಲು ಬಯಸುವವರು ನೇಮಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ನಾಸಾ ಸಂಸ್ಥೆ "ಮಾರ್ಸ್ ಡ್ಯೂನ್ ಆಲ್ಫಾ" ಎಂದು ಕರೆಯಲ್ಪಡುವ ಒಂದು ವರ್ಷವನ್ನು ಕಳೆಯಲು ಇಚ್ಛಿಸುವ ಜನರಿಗೆ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಅಂತಿಮವಾಗಿ ಆಯ್ಕೆಯಾದವರು ಹೂಸ್ಟನ್‌ನಲ್ಲಿ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ 3D ಮುದ್ರಿತ 1,700 ಚದರ ಅಡಿಯ "ಮಂಗಳದ ಆವಾಸಸ್ಥಾನ" ದಲ್ಲಿ ವಾಸಿಸುತ್ತಾರೆ ಎನ್ನಲಾಗಿದೆ.

ಮಂಗಳ

ಹೌದು, ಮಂಗಳನ ಅಂಗಳದಲ್ಲಿ ಮನುಷ್ಯ ವಾಸ ಮಾಡಬಹುದಾ ಅನ್ನೊದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಅಮೆರಿಕದ ನಾಸಾ ಮತ್ತೊಂದು ದಾಖಲೆ ಬರೆಯಲು ಮುಂದಾಗಿದೆ. ಮಂಗಳನ ಅಂಗಳದ ಮಾದರಿಯ ಆವಾಸಸ್ಥಾನದಲ್ಲಿ ಒಂದು ವರ್ಷಗಳ ಕಾಲ ಕಳೆಯಲು ಬಯಸುವವರನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎನ್ನಲಾಗಿದೆ. ಹಾಗಾದ್ರೆ ನಾಸಾದ ಈ ಯೋಜನೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರ್ಸ್‌

ಮಂಗಳನ ಅಂಗಳ ಮನುಷ್ಯ ವಾಸಿಸಲು ಯೋಗ್ಯವೇ? ಅಲ್ಲಿ ನೀರಿನ ಕುರುಹುಗಳು ಇವೆಯಾ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಇಟ್ಟುಕೊಂಡು ಹಲವು ಅಧ್ಯಯನಗಳು ನಡೆದಿವೆ. ಆದರೆ ನಾಸಾ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟುದ್ದು, ಮಂಗಳನ ಅಂಗಳದಲ್ಲಿ ಮಾರ್ಸ್‌ ಡ್ಯೂನ್‌ ಆಲ್ಫಾ ಪ್ಲ್ಯಾನ್‌ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಮಂಗಳನಂತಹ ವಾತಾವರಣದಲ್ಲಿ ವಾಸಿಸಲು ಒಂದು ವರ್ಷ ಕಳೆಯಲು ಬಯಸುವ ಜನರನ್ನು ನಾಸಾ ನೇಮಿಸಿಕೊಳ್ಳಲು ಮುಂದಾಗಿದೆ.

ಮಾಹಿತಿ

ಲಭ್ಯ ಮಾಹಿತಿ ಪ್ರಕಾರ, "ಮಾನವರು ಅಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಬಯಸುತ್ತೇವೆ" ಎಂದು ಪ್ರಮುಖ ವಿಜ್ಞಾನಿ ಗ್ರೇಸ್ ಡೌಗ್ಲಾಸ್ ಹೇಳಿದರು. ಅದರಲ್ಲೂ "ನಾವು ಮಂಗಳನ ವಾಸ್ತವಿಕ ಸನ್ನಿವೇಶಗಳನ್ನು ನೋಡುತ್ತಿದ್ದೇವೆ." ಈ ಅನುಭವದಲ್ಲಿ ಭಾಗವಹಿಸಲು NASA ನಾಲ್ಕು ಸ್ವಯಂಸೇವಕರನ್ನು ಆಯ್ಕೆ ಮಾಡುತ್ತದೆ. ಇದು ಮಂಗಳನ ಪರಿಶೋಧನಾ ಕಾರ್ಯಾಚರಣೆಗಳು ಮತ್ತು ನಿರ್ಬಂಧಿತ ಆಹಾರ ಮತ್ತು ಸಂಪನ್ಮೂಲಗಳು, ಉಪಕರಣಗಳ ವೈಫಲ್ಯಗಳು ಮತ್ತು ಮನೆಯಲ್ಲಿರುವ ಜನರೊಂದಿಗೆ ಸೀಮಿತ ಸಂವಹನಗಳಂತಹ ವಿನೋದಮಯವಾದ ಗಗನಯಾತ್ರಿ ಚಟುವಟಿಕೆಗಳನ್ನು ಒಳಗೊಂಡಿರುವ ಪಾವತಿಸಿದ ಗಿಗ್ ಆಗಿರಲಿದೆ.

ಮಾರ್ಸ್

ಹಾಗಂತ ಇಂತಹ ಪ್ರಯೋಗಗಳನ್ನು ಮಾಡುವುದು ಇದೇ ಮೊದಲಲ್ಲ. ಮಾರ್ಸ್ 500 ಎಂದು ಕರೆಯಲ್ಪಡುವ ಇದೇ ರೀತಿಯ ಕಾರ್ಯಾಚರಣೆಯನ್ನು ರಷ್ಯಾ ಹಿಂದೆ ಪ್ರಯತ್ನಿಸಿತು. ಆದಾಗ್ಯೂ, ಪ್ರಯೋಗವು ಯಶಸ್ವಿಯಾಗಲಿಲ್ಲ, ಆದ್ದರಿಂದ ನಾಸಾದ ಯೋಜನೆ ಎಷ್ಟು ಆಶಾದಾಯಕವಾಗಿರಲಿದೆ ಅನ್ನೊದನ್ನ ಕದು ನೋಡಬೇಕಿದೆ. ಇದಕ್ಕಾಗಿಯ ನಾಸಾ ಕಡೆಯಿಂದ ಹಲವಾರು ಪ್ರಯೋಗಗಳನ್ನು ಯೋಜಿಸಲಾಗಿದೆ, ಮೊದಲ ಸೆಟ್ 2022 ರಲ್ಲಿ ಆರಂಭವಾಗುತ್ತದೆ.

ಯುಎಸ್

ಇನ್ನು ಈ ಪ್ರಯೋಗವು ಶಾಶ್ವತ ಯುಎಸ್ ನಿವಾಸಿಗಳು ಅಥವಾ ಅಮೇರಿಕನ್ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ ಮತ್ತು ಅರ್ಜಿದಾರರು 30 ರಿಂದ 55 ವರ್ಷ ವಯಸ್ಸಿನವರಾಗಿರಬೇಕು. NASA ಗೆ ಆಯ್ಕೆಯಾದವರು ಉತ್ತಮ ಆರೋಗ್ಯದಲ್ಲಿರಬೇಕು -ಆಹಾರ ನಿರ್ಬಂಧಗಳು ಅಥವಾ ಚಲನೆಯ ಕಾಯಿಲೆ ಇರುವ ಜನರು ಅರ್ಜಿ ಹಾಕುವ ಅಗತ್ಯವಿಲ್ಲ. ಇದರಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವವರಿಗೆ ಹೆಚ್ಚಿನ ಅಧ್ಯತೆ, ಪೈಲಟ್ ಅನುಭವ ಕೂಡ ಸ್ವೀಕಾರಾರ್ಹ ಎನ್ನಲಾಗಿದೆ.

Best Mobiles in India

English summary
NASA is looking to hire people to spend a year living in a Mars-like environment. It's not quite the real deal, but it's close.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X