ದುರಂತಗಳನ್ನು ಎದುರಿಸುವ ತಾಕತ್ತಿರುವ ರೊಬೋಟ್

Written By:

ಮಾನವ ಸಂರಕ್ಷಕರಿಗೆ ಅಪಾಯಕಾರಿಯಾಗಿರುವ ಸ್ಥಳಗಳಿಗೆ ಹೋಗಿ ಅವಶೇಷಗಳಡಿಯಿಂದ ಜನರನ್ನು ಕಾಪಾಡುವ ಅತಿ ವಿಶೇಷ ರೊಬೋಟ್ ಅನ್ನು ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಕೈ ಮತ್ತು ಕಾಲುಗಳನ್ನು ಬಳಸಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಭದ್ರತೆಗಾಗಿ ಅತೀ ಅಗತ್ಯ ಈ ಸಲಹೆಗಳು

ಕಡಿದಾದ ಭೂಪ್ರದೇಶ ಮತ್ತು ಅವಶೇಷಗಳಡಿಯಿಂದ ಮಾನವನನ್ನು ಸಂರಕ್ಷಿಸಲು ರೊಬೋಟ್ ಅನ್ನು ಸರಿಸುವುದು ಮೊದಲಾದ ಕೆಲಸಗಳನ್ನು ಮಾಡಲು ಇದನ್ನು ಬಳಸಬಹುದು ಎಂದು ಸಿಎನ್‌ಎನ್ ವರದಿ ಮಾಡಿದೆ.

ದುರಂತಗಳನ್ನು ಎದುರಿಸುವ ತಾಕತ್ತಿರುವ ರೊಬೋಟ್

ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿ ಈ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದು ಇದು ಚಕ್ರಗಳನ್ನು ಹೊಂದಿದ್ದು ಇದರಿಂದ ಅತ್ತಿತ್ತ ಸರಿಯಲು ರೊಬೋಟ್‌ಗೆ ಹೆಚ್ಚು ಸಹಕಾರಿಯಾಗಲಿದೆ.

ಕಾರನ್ನು ಡ್ರೈವ್ ಮಾಡಲು, ರಬಲ್‌ನಾದ್ಯಂತ ಸರಿಯಲು, ಪರಿಕರವನ್ನು ಬಳಸಲು ಮತ್ತು ಮಾನವನ ನಿಯಂತ್ರಣವಿಲ್ಲದೆ ಮೆಟ್ಟಿಲುಗಳನ್ನು ಏರಲು ಪ್ರತಿಯೊಂದನ್ನು ಈ ರೊಬೋಟ್ ಚಕಚಕನೇ ಮಾಡಿ ಮುಗಿಸುತ್ತದೆ.

English summary
NASA scientists have designed an ape-like robot that can go into places dangerous for human rescuers and execute tasks such as lifting debris off survivors.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot