ಮಂಗಳನ ಮೇಲೆ ಮಾನವನ ಕಣ್ಣಾಗಿದ್ದ 'ರೋವರ್' ಕಥೆ ಮುಗಿಯಿತು!

|

ಮಂಗಳನ ಮೇಲೆ ಮಾನವನ ಕಣ್ಣಾಗಿದ್ದ ನಾಸಾದ ಮಹತ್ವಾಕಾಂಕ್ಷಿ ಆಪರ್ಚುನಿಟಿ ರೋವರ್ 15 ವರ್ಷಗಳ ಕಾಲದ ನಂತರ ತನ್ನ ಪಯಣವನ್ನು ಮುಗಿಸುತ್ತಿದೆ. ಮಾನವನ ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಅತ್ಯಂತ ಸಫಲ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದ ಆಪರ್ಚುನಿಟಿ ರೋವರ್‌ನ 15 ವರ್ಷಗಳ ಪಯಣಕ್ಕೆ ಚಂಡಮಾರುತ ತಡೆಯೊಡ್ಡಿದ್ದು, ಇದೇ ಬುಧವಾರ (ಫೆಬ್ರವರಿ 13,2019)ರಂದು ರೋವರ್‌ಗೆ ನಾಸಾ ಅಧಿಕೃತವಾಗಿ ಗುಡ್‌ ಬೈ ಹೇಳಿದೆ.

ಹೌದು, ಅಮೆರಿಕದ ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಸಾದ ವಿಜ್ಞಾನ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಝುರ್‌ಬುಚೆನ್ ಈ ಕುರಿತು ಮಾಹಿತಿ ನೀಡಿದ್ದು, ಕಳೆದ ವರ್ಷ ಜೂನ್‌ ತಿಂಗಳಿನಿಂದ ಸಂಪರ್ಕ ಕಳೆದುಕೊಂಡಿದ್ದ 'ಆಪರ್ಚುನಿಟಿ ಮಿಷನ್ ಪೂರ್ಣಗೊಂಡಿದೆ ಎಂದು ಘೋಷಿಸುತ್ತೇನೆ' ಎಂದು ಹೇಳಿದ್ದಾರೆ. ಈ ಮೂಲಕ ಮಾನವನ ಯಶಸ್ವಿ ಬಾಹ್ಯಾಕಾಶ ಪಯಣ ಒಂದಕ್ಕೆ ಬ್ರೇಕ್ ಬಿದ್ದಿದೆ.

ಮಂಗಳನ ಮೇಲೆ ಮಾನವನ ಕಣ್ಣಾಗಿದ್ದ 'ರೋವರ್' ಕಥೆ ಮುಗಿಯಿತು!

2004 ಜನವರಿ 25 ರಂದು ಮಂಗಳನ ಅಂಗಳಕ್ಕೆ ಇಳಿದಿದ್ದ ನಾಸಾದ ಆಪರ್ಚುನಿಟಿ ರೋವರ್ ಅಲ್ಲಿನ ಭಾರೀ ಚಂಡಮಾರುತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿತ್ತು. 2018ನೇ ವರ್ಷದ ಜೂ.10ರ ಅನಂತರ ಆಪರ್ಚುನಿಟಿ ರೋವರ್ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ ಎಂದು ಹೇಳಲಾಗಿದ್ದು, ಧೂಳಿನ ಚಂಡಮಾರುತದಿಂದಾಗಿ ಹಾಳಾಗಿದೆ ಎಂದು ತಿಳಿದುಬಂದಿತ್ತು. ಇದಾದ ನಂತರವೂ ಭೂಮಿಯಿಂದ ನೂರಾರು ಸಂದೇಶಗಳನ್ನು ಕಳುಹಿಸಿ ಸಂಪರ್ಕ ಹೊಂದಲು ಪ್ರಯತ್ನಿಸಲಾಗಿತ್ತು.

ಮಂಗಳನ ಮೇಲೆ ಮಾನವನ ಕಣ್ಣಾಗಿದ್ದ 'ರೋವರ್' ಕಥೆ ಮುಗಿಯಿತು!

ಆದರೆ, ಬ್ಯಾಟರಿಗಳನ್ನು ರೀಚಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗದೆ ಆಪರ್ಚುನಿಟಿ ಭೂಮಿಯಿಂದ ಹೋಗಿರುವ ನೂರಾರು ಸಂದೇಶಗಳಿಗೆ ಉತ್ತರ ನೀಡಿರಲಿಲ್ಲ. ಮತ್ತೆ ಕಡೆಯ ಬಾರಿಗೆ ಮಂಗಳವಾರ ಸಂಜೆ ಮತ್ತೆ ಸಂಪರ್ಕ ಸಾಧಿಸಲು ಕೊನೆಯ ಬಾರಿಗೆ ಪ್ರಯತ್ನಿಸಲಾಯಿತು ಎಂದು ನಾಸಾ ಮಾಹಿತಿ ನೀಡಿದೆ. ಧೂಳಿನ ಚಂಡಮಾರುತದಿಂದಾಗಿ ರೋವರ್ ಹಾಳಾಗಿದ್ದು, ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿಸುತ್ತಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಒಟ್ಟಿನಲ್ಲಿ 14 ವರ್ಷಗಳಿಂದ ಮಂಗಳದ ನೆಲದಲ್ಲಿ ಓಡಾಡುತ್ತಾ ಗ್ರಹದ ಸಂಶೋಧನೆ ನಡೆಸಿ ನಾಸಾಕ್ಕೆ ಮಾಹಿತಿ ರವಾನಿಸುತ್ತಿದ್ದ ರೋವರ್ ನಮ್ಮನ್ನು ಅಗಲಿ ದೂರಾಗಿದೆ. ಮಂಗಳನ ಅಂಗಳನಲ್ಲಿ ಅನ್ವೇಷಣೆ ಮಾಡಿ ಸಾಕಷ್ಟು ಮಾಹಿತಿಗಳನ್ನು ನೀಡಿದ್ದ ರೋವರ್ ಇದುವರೆಗೆ ಮಂಗಳ ಗ್ರಹದಿಂದ ಆಪರ್ಚುನಿಟಿ 2,17,594 ಫೋಟೋಗಳನ್ನು ಕಳುಹಿಸಿದೆ. ಈ ಫೋಟೊಗಳೆಲ್ಲವೂ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿದೆ.

Best Mobiles in India

English summary
Silent since a giant dust storm last summer, the rover was the longest-lasting robot on another planet ever. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X