Home
ಸುದ್ದಿಜಾಲ

ಮಂಗಳ ಗ್ರಹವೂ ಕೂಡ ಜೀವಿಗಳಿಗೆ ವಾಸಯೋಗ್ಯ: ಸಾಕ್ಷ್ಯ ಲಭ್ಯವೆಂದ ನಾಸಾ!!

ಚಂದ್ರನ ನಂತರ ಮಾನವನ ಕುತೋಹಲಗಳಿಗೆ ತೆರೆದುಕೊಂಡಿರುವ ಮಂಗಳ ಗ್ರಹವೂ ಕೂಡ ಜೀವಿಗಳಿಗೆ ವಾಸಯೋಗ್ಯವಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಂಗಳ ಗ್ರಹದ ಅಧ್ಯಯನಕ್ಕೆ ನಾಸಾ ಉಡಾಯಿಸಿದ್ದ ಮೊದಲ ರೋವರ್ ಮಂಗಳದ ಸಾಗರ ತೀರದ ಚಿತ್ರಗಳನ್ನು ಸೆರೆ ಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಇದು ಅಲ್ಲಿ ಜೀವಿಗಳಿಗೆ ವಾಸಯೋಗ್ಯ ಎಂಬುದನ್ನು ನಿರೂಪಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೌದು, ಮಂಗಳ ಗ್ರಹದ ಅಧ್ಯಯನಕ್ಕೆ ನಾಸಾ ಉಡಾಯಿಸಿದ್ದ ಮೊದಲ ರೋವರ್ ದಶಕಗಳ ಹಿಂದೆಯೇ ಕೆಂಪುಗ್ರಹದಲ್ಲಿನ ಸಾಗರ ತೀರದ ಚಿತ್ರಗಳನ್ನು ಸೆರೆ ಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಮಂಗಳನಲ್ಲಿ ಆದಂತಹ ದೊಡ್ಡ ಪ್ರವಾಹದ ನಂತರ ಈ ಸಾಗರ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.ಸುಮಾರು ಐವತ್ತು ವರ್ಷಗಳ ಹಿಂದೆ ಈ ಸಾಗರ ಹೇಗಿತ್ತು ಎಂಬುದನ್ನು ಈ ಚಿತ್ರಗಳಿಂದ ಅಂದಾಜಿಸಬಹುದಾಗಿದ್ದು, ಇದರಿಂದ ಮಂಗಳ ವಾಸಯೋಗ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳ ಗ್ರಹವೂ ಕೂಡ ಜೀವಿಗಳಿಗೆ ವಾಸಯೋಗ್ಯ: ಸಾಕ್ಷ್ಯ ಲಭ್ಯವೆಂದ ನಾಸಾ!!

1997ರಲ್ಲಿ ನಾಸಾ ಉಡಾಯಿಸಿದ ಮೊದಲ ರೋವರ್ 'ದಿ ಸೋಜರ್ನರ್' ಈ ಚಿತ್ರಗಳನ್ನು ಸೆರೆಹಿಡಿದಿದ್ದು, ಆ ಚಿತ್ರಗಳಲ್ಲಿ ಕಂಡುಬಂದಿರುವ ಮಂಗಳ ಗ್ರಹದ ಈ ಸಾಗರ ಪ್ರಾಚೀನ ಸಮುದ್ರವಾಗಿತ್ತು ಮತ್ತು ಸುಮಾರು ಐವತ್ತು ವರ್ಷಗಳ ಹಿಂದೆ ಈ ಸಾಗರ ಹೇಗಿತ್ತು ಎಂಬುದನ್ನು ಈ ಚಿತ್ರಗಳಿಂದ ಅಂದಾಜಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 300 ವರ್ಷಗಳ ಹಿಂದೆ, ದೊಡ್ಡ ಪ್ರವಾಹದ ನಂತರ ಈ ಸಾಗರ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಮಂಗಳನಲ್ಲಿ ಕಂಡುಬಂದಿರುವ ಸಾಗರಕ್ಕೆ 'ಮಾರ್ಟಿಯನ್' ಎಂದು ಹೆಸರಿಡಲಾಗಿದ್ದು, ಸಾಗರ ತೀರ ಪ್ರದೇಶದಲ್ಲಿ ಕಾಣಿಸಿರುವ ಕೆಸರು ಅಥವಾ ಕಲ್ಲಿನ ತುಣಕುಗಳಿಂದ ಈ ಪ್ರದೇಶ ದೊಡ್ಡ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು, ನಂತರ ಇಲ್ಲಿ ಸಾಗರ ರಚನೆಯಾಗಿದೆ ಎಂಬುದು ತಿಳಿದುಬರುತ್ತದೆ ಎಂದು ವಿಜ್ಞಾನಿ ಅಲೆಕ್ಸಿಸ್‌ ರೋಡ್ರಿಗಸ್ ಹೇಳುತ್ತಾರೆ. ಹಾಗಾಗಿ, ಮಂಗಳ ಗ್ರಹವೂ ಜೀವಿಗಳಿಗೆ ವಾಸಯೋಗ್ಯವಾಗಿದೆ ಎಂಬುದಕ್ಕೆ ಈ ಚಿತ್ರಗಳು ಮತ್ತಷ್ಟು ಪುರಾವೆ ಒದಗಿಸಿವೆ ಎಂದು ಅವರು ಹೇಳಿದ್ದಾರೆ.

ಮಂಗಳ ಗ್ರಹವೂ ಕೂಡ ಜೀವಿಗಳಿಗೆ ವಾಸಯೋಗ್ಯ: ಸಾಕ್ಷ್ಯ ಲಭ್ಯವೆಂದ ನಾಸಾ!!

1997ರಲ್ಲಿ ನಾಸಾ ಉಡಾಯಿಸಿದ ಬಾಹ್ಯಾಕಾಶ ನೌಕೆಯಿಂದ ಸುಮಾರು 250 ಕಿ.ಮೀ. ದೂರದಲ್ಲಿ ಈ ಸಾಗರ ತೀರಪ್ರದೇಶವಿದೆ. ನೌಕೆ ನೆಲೆ ನಿಂತಿರುವ ಭೂಪ್ರದೇಶದವು ಒಳನಾಡು ಸಾಗರ ಮತ್ತು ಉತ್ತರ ಮಹಾಸಾಗರವನ್ನು ಬೇರ್ಪಡಿಸಿದೆ ಎಂದು ರೋಡ್ರಿಗಸ್ ತಿಳಿಸಿದ್ದಾರೆ.ನಾಸಾ ಇಲ್ಲಿಯವರೆಗೂ ಮಂಗಳ ಗ್ರಹದ ಅಧ್ಯಯನಕ್ಕಾಗಿಯೇ ನಾಸಾ ಈವರೆಗೆ 280 ಮಿಲಿಯನ್‌ ಡಾಲರ್‌ಗೂ ವೆಚ್ಚ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.

Best Mobiles in India

English summary
NASA's first rover mission to Mars, the Pathfinder, may have explored the edges of an early Martian sea in 1997, according to scientists who say that images from the probe could yield evidence of habitability on the Red Planet.to know mkore visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+