ಮಂಗಳಗ್ರಹ ಗ್ರಹಕ್ಕೆ ಮೊದಲು ಕಾಲಿಡುವ ಜೀವಿ ಬಗ್ಗೆ ನಾಸಾ ಮಾಹಿತಿ!!

|

ಮಾನವ ಸಹಿತ ಮಂಗಳಗ್ರಹ ಯಾನವನ್ನು ಕೈಗೊಳ್ಳುವ ಮಹತ್ವಕಾಂಕ್ಷಿ ಯೋಜನೆಯನ್ನು ಹೊಂದಿರುವ ಪ್ರಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಕುತೋಹಲಕಾರಿ ಮಾಹಿತಿ ಒಂದನ್ನು ಹೊರಹಾಕಿದೆ. ನಾಸಾದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಮಂಗಳ ಗ್ರಹ ಯಾನದ ಮೂಲಕ ಮಂಗಳ ಗ್ರಹದ ಮೇಲೆ ಮೊದಲು ಇಳಿಯುವ ಜೀವಿಯ ಬಗ್ಗೆ ನಾಸಾ ಮಾಹಿತಿ ನೀಡಿದೆ.

ಹೌದು, ಇತ್ತೀಚಿಗಷ್ಟೇ ಮಂಗಳ ಯಾನ ಕೈಗೊಳ್ಳುವ ಯೋಜನೆ ಬಗ್ಗೆ ಮಾಹಿತಿ ನೀಡಿದ್ದ ನಾಸಾ, ಇದೀಗ ಈ ಮಂಗಳಯಾನದ ಬಗ್ಗೆ ಮತ್ತೊಂದು ಕುತೋಹಲ ಮಾಹಿತಿಯನ್ನು ನೀಡಿದೆ. ನಾಸಾದ ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಅವರು ಮಾನವ ಸಹಿತ ಮಂಗಳಯಾನದ ಬಗ್ಗೆ ಮಾತನಾಡಿ, ಮಂಗಳ ಗ್ರಹದ ಮೇಲೆ ಕಾಲಿರಿಸುವ ಮೊದಲ ಜೀವಿಯ ಬಗ್ಗೆ ತಿಳಿಸಿದ್ದಾರೆ.

ಮಂಗಳಗ್ರಹ ಗ್ರಹಕ್ಕೆ ಮೊದಲು ಕಾಲಿಡುವ ಜೀವಿ ಬಗ್ಗೆ ನಾಸಾ ಮಾಹಿತಿ!!

ಮಂಗಳ ಗ್ರಹಕ್ಕೆ ಯಾನ ಕೈಗೊಳ್ಳುವುದು ನಾಸಾದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಇನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಮುಂದಿನ ಯೋಜನೆಗಳಿಗೆ ಇದಿಗ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಆದ್ದರಿಂದ ನಿಶ್ಚಿತವಾಗಿ ಮಂಗಳ ಗ್ರಹದ ಮೇಲೆ ಮೊದಲು ಕಾಲಿರಿಸುವುದು ಓರ್ವ ಮಹಿಳೆ ಎಂದು ಜಿಮ್ ಬ್ರಿಡೆನ್ಸ್ಟೈನ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದಾದ ನಂತರ, 'ಮಹಿಳೆಯರು ಚಂದ್ರನ ಅಂಗಳಕ್ಕೂ ಹೋಗಲಿದ್ದಾರಾ?' ಎಂದು ಜಿಮ್ ಬ್ರಿಡೆನ್ಸ್ಟೈನ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಬ್ರಿಡೆನ್ಸ್ಟೈನ್, ಮುಂದಿನ ದಿನಗಳಲ್ಲಿ ಮಹಿಳೆಯರು ಚಂದ್ರ ಹಾಗೂ ಮಂಗಳ ಗ್ರಹ ಎರಡರ ಮೇಲೆ ಹೋಗಲಿದ್ದಾರೆ ಕಾದು ನೋಡಿ ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಮಂಗಳಗ್ರಹ ಗ್ರಹಕ್ಕೆ ಮೊದಲು ಕಾಲಿಡುವ ಜೀವಿ ಬಗ್ಗೆ ನಾಸಾ ಮಾಹಿತಿ!!

ನಾಸಾ ಇತ್ತೀಚೆಗಷ್ಟೇ ಸಂಪೂರ್ಣವಾಗಿ ಮಹಿಳಾ ತಂಡದ ಬಾಹ್ಯಾಕಾಶ ಯಾನವನ್ನು ಘೋಷಿಸಿತ್ತು. ಈ ಬೆನ್ನಲ್ಲೇ ಮಂಗಳ ಗ್ರಹಕ್ಕೆ ಮೊದಲು ಮಹಿಳೆಯನ್ನು ಕಳಿಸುವ ಕುರಿತು ಸಹ ಮಾಹಿತಿ ನೀಡಿದೆ. ನಮ್ಮ ಸಾಧಕಿಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರಂತೆ ಬಾಹ್ಯಾಕಾಶದಲ್ಲಿ ಮಹಿಳೆಯರು ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿರುವುದು ಇದರಿಂದ ಕಂಡುಬರುತ್ತಿದೆ.

Best Mobiles in India

English summary
'Men are from Mars, women are from Ve...' Source: Tenor.com. Yeah that's right. Coz the first woman to land on Mars is 'likely to be' a woman.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X