ಭೂಮಿಗೆ ಅಪ್ಪಳಿಸಲಿರುವ ಭಾರೀ ಚಂಡಮಾರುತ

By Shwetha
|

ನಾಸಾದ ಆರ್ಬಿಟಿಂಗ್ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯು ಸೂರ್ಯನ ಹೊರವಲಯ ಮತ್ತು ಅಯಸ್ಕಾಂತೀಯ ಕ್ಷೇತ್ರದಲ್ಲಿ ಅತಿ ದೊಡ್ಡ ಹೋಲ್ ಅನ್ನು ಪತ್ತೆಹಚ್ಚಿದ್ದು ಭೂಮಿಯ 50 ಪಟ್ಟು ಹಿರಿದಾದುದು ಮತ್ತು ಭೂಮಿಯ ದಿಕ್ಕಿಗೆ ಇದು ಹೆಚ್ಚು ವೇಗದ ಸೋಲಾರ್ ಗಾಳಿಯನ್ನು ಬಿಡುಗಡೆ ಮಾಡುತ್ತಿದೆ ಎಂಬುದಾಗಿ ತಿಳಿಸಿದೆ.

ಓದಿರಿ:ಸ್ತಂಭೀಭೂತಗೊಳಿಸುವ ನಾಸಾ ಅಪರೂಪದ ಸೆಲ್ಫಿ

ಈ ಚಿತ್ರವನ್ನು ಅಕ್ಟೋಬರ್ 10 ರಂದು ಅಲ್ಟ್ರಾವೈಲೆಟ್ ವೇವ್‌ಲೆಂತ್‌ನಲ್ಲಿ ತೆಗೆದಿದ್ದು ಇದು ಮಾನವನ ಕಣ್ಣಿಗೆ ಅದೃಶ್ಯವಾಗಿದೆ. ಇನ್ನು ಸೂರ್ಯನ ಕಾಂತೀಯ ಕ್ಷೇತ್ರದ ಅಂತರವು ಸೆಕೆಂಡ್‌ಗೆ 800 ಕಿಲೋಮೀಟರ್‌ಗಳವರೆಗೆ ಕಣಗಳ ಸ್ಟ್ರೀಮ್ ಅನ್ನು ಪ್ರಯಾಣಿಸಲು ಅನುಮತಿಸುತ್ತದೆ ಇದರಿಂದ ಭೂಮಿಯನ್ನು ಅಪ್ಪಳಿಸುವ ಚಂಡಮಾರುತದ ಉರಿ ತೀವ್ರವಾಗಿರುತ್ತದೆ.

ಕರೋನಲ್ ಹೋಲ್ಸ್

ಕರೋನಲ್ ಹೋಲ್ಸ್

ಕರೋನಲ್ ಹೋಲ್ಸ್ ಸೂರ್ಯನ ಧ್ರುವಗಳ ಮತ್ತು ಕೆಳ ಅಕ್ಷಾಂಶದಿಂದ ರೂಪಿಸಲ್ಪಡುತ್ತವೆ. ತನ್ನ 11 ವರ್ಷದ ಚಕ್ರದಲ್ಲಿ ಹೆಚ್ಚಾಗಿ ಸೂರ್ಯನು ತನ್ನ ಕ್ರಿಯಾಶೀಲ ರಹಿತ ಹಂತದಲ್ಲಿದ್ದಾಗ ಇವುಗಳ ರಚನೆ ನಡೆಯುತ್ತದೆ.

ಕಡಿಮೆ ಸಾಂದ್ರತೆ

ಕಡಿಮೆ ಸಾಂದ್ರತೆ

ಸೂರ್ಯನ ಹೆಚ್ಚು ಹೊರಪದರಲ್ಲಿ ಈ ಏರಿಯಾಗಳಿವೆ. ಇದನ್ನು ಕರೋನಾ ಎಂದು ಕರೆಯಲಾಗುತ್ತದೆ. ಇದು ಕಡಿಮೆ ಸಾಂದ್ರತೆಯುಳ್ಳದ್ದು ಮತ್ತು ತಂಪಾಗಿರುತ್ತದೆ.

ದುರ್ಬಲ ಕಾಂತೀಯ ಕ್ಷೇತ್ರ

ದುರ್ಬಲ ಕಾಂತೀಯ ಕ್ಷೇತ್ರ

ಅಂತೆಯೇ ದುರ್ಬಲ ಕಾಂತೀಯ ಕ್ಷೇತ್ರವನ್ನು ಇದು ಹೊಂದಿದೆ.

ಸೋಲಾರ್ ವಿಂಡ್‌

ಸೋಲಾರ್ ವಿಂಡ್‌

ಈ ಸಂದರ್ಭದಲ್ಲಿ ಪ್ಲಾಸ್ಮಾ ಮತ್ತು ಆವೇಶಕ್ಕೊಳಗಾದ ಕಣಗಳು ಸೋಲಾರ್ ವಿಂಡ್‌ನಲ್ಲಿ ಹೆಚ್ಚು ಸುಲಭವಾಗಿ ಕರೋನಾವನ್ನು ಸ್ಟ್ರೀಮ್ ಔಟ್ ಆಗುವಂತೆ ರೂಪಿಸುತ್ತವೆ.

ಲಕ್ಷ್ಯ

ಲಕ್ಷ್ಯ

ಇದು ಭೂಮಿಯನ್ನು ಲಕ್ಷ್ಯವಾಗಿರಿಸಿದೆ.

ವಿದ್ಯುತ್ ಪೂರೈಕೆ

ವಿದ್ಯುತ್ ಪೂರೈಕೆ

ವಿದ್ಯುತ್ ಪೂರೈಕೆ ಮತ್ತು ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳ ಸಂಚರಣೆಗೆ ಅಂತೆಯೇ ರೇಡಿಯೊ ಸಂವಹನಕ್ಕೆ ಭೂಕಾಂತೀಯ ಚಂಡಮಾರುತ ಹಾನಿಯನ್ನುಂಟು ಮಾಡಲಿದೆ.

ಉತ್ತರ ದೀಪಗಳ ವರ್ಧನೆ

ಉತ್ತರ ದೀಪಗಳ ವರ್ಧನೆ

ಅಂತೆಯೇ ಉತ್ತರ ದೀಪಗಳ ವರ್ಧನೆಯನ್ನು ಭೂಕಾಂತೀಯ ಚಂಡಮಾರುತ ಹೆಚ್ಚಿಸಲಿದ್ದು ಇದು ಇನ್ನೊಂದು ಪರಿಣಾಮವಾಗಿದೆ.

ಕರೋನಲ್ ಹೋಲ್ಸ್‌

ಕರೋನಲ್ ಹೋಲ್ಸ್‌

ಕರೋನಲ್ ಹೋಲ್ಸ್‌ಗಳು ಸೂರ್ಯನ ಮೇಲ್ಮೈ ಪಶ್ಚಿಮಾಭಿಮುಖವಾಗಿ ವಿಳಂಬಗತಿಯನ್ನು ಮುಂದುವರಿಸುತ್ತಾ, ಸೋಲಾರ್ ವಿಂಡ್‌ಗಳು ಇನ್ನೂ ಬಲಗೊಳ್ಳುತ್ತವೆ.

ಭೂಮಿಯ 50 ಪಟ್ಟು ಹಿರಿದಾದುದು

ಭೂಮಿಯ 50 ಪಟ್ಟು ಹಿರಿದಾದುದು

ಈ ಹೋಲ್ ಭೂಮಿಯ 50 ಪಟ್ಟು ಹಿರಿದಾದುದು ಮತ್ತು ಭೂಮಿಯ ದಿಕ್ಕಿಗೆ ಇದು ಹೆಚ್ಚು ವೇಗದ ಸೋಲಾರ್ ಗಾಳಿಯನ್ನು ಬಿಡುಗಡೆ ಮಾಡುತ್ತಿದೆ

ಭಾರೀ ಚಂಡಮಾರುತ

ಭಾರೀ ಚಂಡಮಾರುತ

ಭೂಮಿಯ ದಿಕ್ಕಿಗೆ ಭಾರೀ ಚಂಡಮಾರುತವೊಂದು ಆಗಮಿಸುವ ಸಮಯ ಸನ್ನಿಹಿತವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
NASA‘s orbiting Solar Dynamics Observatory has mapped an enormous coronal hole – a gap in the Sun’s outer layer and magnetic field – which is the size of 50 Earths and is releasing an extra-fast solar wind in Earth’s direction.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X