ಮಂಗಳ ಗ್ರಹಕ್ಕಾಗಿ ರೋಬೋಟ್ ಪರೀಕ್ಷಿಸಿದ ನಾಸಾ

Posted By: Staff
ಮಂಗಳ ಗ್ರಹಕ್ಕಾಗಿ ರೋಬೋಟ್ ಪರೀಕ್ಷಿಸಿದ ನಾಸಾ
ನಮ್ಮ ಸೌರ ಮಂಡಲದಲ್ಲಿ ಭೂಮಿ ಬಿಟ್ಟರೆ ಅಪ್ಪಿ ತಪ್ಪಿ ಜೀವಿಗಳು ಇರಬಹುದು ಅಂತ ಮಾನವನಿಗೆ ಡೌಟ್ ಇರೋದು ಮಂಗಳ ಗ್ರಹದ ಮೇಲೆ ಮಾತ್ರ. ಸರಿಸುಮಾರು ನಮ್ಮ ಭೂಮಿಯಷ್ಟೇ ಗಾತ್ರ ಇರುವ ಈ ಗ್ರಹವನ್ನು ಅನ್ವೇಷಣೆ ಮಾಡಲು ಮಾನವ ಹರಸಾಹಸ ಮಾಡುತ್ತಿದ್ದಾನೆ.

ಮುಂದೊಂದು ದಿನ ಮಾನವಸಹಿತ ನೌಕೆ ಕಳಿಸಲು ಬಹಳ ವರ್ಷದಿಂದ ಪ್ರಯತ್ನಿಸುತ್ತಿರುವ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ "ನಾಸಾ" ಅದಕ್ಕೂ ಮುನ್ನ ಅಲ್ಲಿನ ವಾತಾವರಣ ಬಗ್ಗೆ ಅಭ್ಯಸಿಸಲು ವೈಕಿಂಗ್ ಎಂಬ ನೌಕೆಯನ್ನು ಕಳುಹಿಸಿತ್ತು. ಅದೇ ರೀತಿಯಲ್ಲಿ ಮಾರ್ಸ್ ಅಬ್ಸರ್ವರ್ ಹಾಗು ಮಾರ್ಸ್ ಎಕ್ಸಪ್ಲೋರೇಶನ್ ರೋವರ್ ಎಂಬ ರೋಬೋಟ್ ಗಳನ್ನು ಕಳುಹಿಸಿ ಮಂಗಳ ಗ್ರಹದ ಮೇಲ್ಮೈ ಅನ್ನು ಪರೀಕ್ಷಿಸಿ ನೀರು ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡಲೂ ಸಹ ಉಪಯೋಗಿಸಲಾಗಿತ್ತು.

ಈಗ ಇನ್ನೂ ಹೆಚ್ಚಿನ ಅಧ್ಯಯನಕ್ಕಾಗಿ 'ಕ್ಯೂರಿಯಾಸಿಟಿ' ಎಂಬ ಹೆಸರಿನ ಶಕ್ತಿಶಾಲಿ ರೋಬೋಟ್ ಅನ್ನು ನಾಸಾ ಆಗಸ್ಟ್ ತಿಂಗಳಲ್ಲಿ ಮಂಗಳ ಗ್ರಹಕ್ಕೆ ಕಳುಹಿಸಲಿದ್ದು  ಪರೀಕ್ಷಾರ್ಥವಾಗಿ ಆ ರೊಬೋಟ್ ಅನ್ನು  ಕ್ಯಾಲಿಫೋರ್ನಿಯಾದ ಮರಭೂಮಿಯಲ್ಲಿ ಪ್ರಯೋಗ ನಡೆಸಿತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot