Subscribe to Gizbot

ಆಳಾಂತರಿಕ್ಷದ ಅದ್ಭುತ ಚಿತ್ರ ತೆಗೆದ ಹಬಲ್‌ ಟೆಲಿಸ್ಕೋಪ್‌

Posted By: Super
ಆಳಾಂತರಿಕ್ಷದ ಅದ್ಭುತ ಚಿತ್ರ ತೆಗೆದ ಹಬಲ್‌ ಟೆಲಿಸ್ಕೋಪ್‌

ಅಮೇರಿಕಾದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸದಲ್ಲಿನ "ಹಬಲ್‌" ಟೆಲಿಸ್ಕೋಪ್‌ ಅಂತರಿಕ್ಷದ ಹಿಂದೆಂದೂ ತೆಗೆದಿರದಂತಹ ಅತಿ ಆಳದ ಅದ್ಭುತ ಚಿತ್ರಣಗಳನ್ನು ತೆಗೆದಿದೆ. ಆಗಸ ದಲ್ಲಿನ ಒಂದು ನಿರ್ದಿಷ್ಟ ಭಾಗದ ಅತೀ ಆಳದ ಚಿತ್ರವನ್ನು ತೆಗೆಯಲು ನಾಸಾದ ವಿಜ್ಞಾನಿಗಳು ಸತತ ಹತ್ತು ವರ್ಷಗಳಕಾಲ ಶ್ರಮವಹಿಸಿದ್ದಾರೆ.

ನಾಸಾದ ವರದಿಗಳ ಪ್ರಕಾರ ಚಿತ್ರವನ್ನು ಪೂರ್ಣ ಚಂದಿರನ ಕೋನಿಯ ವ್ಯಾಸದ ಸಣ್ಣ ಭಾಗದ ಕಡೆಗೆ ಹಬಲ್‌ ದೂರದರ್ಶಕ ನೆರವಿನಿಂದ ಅದ್ಭುತವೆನಿಸುವ ಚಿತ್ರಗಳನ್ನು ತೆಗೆಯಲಾಗಿದೆ ಎಂದು ತಿಳಿಸಿದೆ. ಫಾರ್ನಾಕ್ಸ್‌ ನಕ್ಷತ್ರ ಪುಂಜಗಳ ಚಿತ್ರಣಗಳನ್ನು ಸೆರೆಹಿಡಿಯಲಾಗಿದ್ದು ಸುಮಾರು 5,500 ಗ್ಯಾಲಾಕ್ಸಿಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಈ ಚಿತ್ರಣವನ್ನು ನಿರ್ಮಿಸಲು 2003 ಹಾಗೂ 2004 ಸಂಗ್ರಹಿಸಲಾಗಿದ್ದ ಡೇಟಾಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ನೀವ ಕಾಣುತ್ತಿರುವಂತಹ ಗ್ಯಾಲಾಕ್ಸಿಗಳನ್ನು ಸೆರೆಹಿಡಿಯುವ ಸಲುವಾಗಿ ದೂರದರ್ಶಕವು ಹಲವು ಗಂಟೆಗಳ ಕಾಲ ಅವಲೋಕಿಸಿ ದೊರೆತಂತಹ ಅಲ್ಪ ಪ್ರಮಾಣದ ಬೆಳಕನ್ನು ಸೆರೆಹಿಡಿದು ಚಿತ್ರ ನಿರ್ಮಿಸಿದೆ. ಅಂದಹಾಗೆ ಈ ಗ್ಯಾಲಾಕ್ಸಿಗಳು ನಾವು ಬರಿಗಣ್ಣಿನಲ್ಲಿ ನೋಡುವುದ ಕ್ಕ್ಕಿಂತಲೂ ಹತ್ತು ದಶಲಕ್ಷ ಪಟ್ಟು ಹೆಚ್ಚು ಪ್ರಕಾಶಮಾನವಾಗಿವೆ.

ಈ ಚಿತ್ರಣಗಳನ್ನು ನಿರ್ಮಿಸಲು ಸಲುವಾಗಿ ಬಳಸಲಾಗಿರುವ ಮಾಹಿತಿಯನ್ನು 50 ದಿನಗಳ ಅವಧಿಯಲ್ಲಿ ಸುಮಾರು 2,000,000 ಸೆಕೆಂಡುಗಳ ಕಾಲ ತೊಡಗಿಸಿಕೊಂಡು ಸಂಗ್ರಹಿಸಲಾಗಿದೆ. ಅಲ್ಲದೆ ಹಬಲ್‌ ಮೂಲಕ ಒಂದೇ ಜಾಗದಲ್ಲಿ 2000 ಕ್ಕೂ ಹೆಚ್ಚಿನ ಚಿತ್ರಗಳನ್ನು ಅತ್ಯಾಧುನಿಕ ಕ್ಯಾಮೆರಾ ಬಳಸಿ ಸೆರೆಹಿಡಿಯಲಾಗಿದೆ. ಅಂದಹಾಗೆ ನಾಸಾದ ಇಷ್ಟೆಲ್ಲಾ ಪರಿಶ್ರಮಕ್ಕೆ ಫಲವೆಂಬಂತೆ ಆಳಾಂತರಿಕ್ಷದ ಮನೋಜ್ಞ ಚಿತ್ರಗಳು ಸೆರೆಸಿಕ್ಕಿವೆ.

ಅಂದಹಾಗೆ ಹಬಲ್‌ ತೆಗೆದಿರುವ ಚಿತ್ರಗಳ ವಿಡಿಯೋ ತುಣುಕನ್ನು ಒಮ್ಮೆ ನೋಡಿ ಬಹ್ಯಾಕಾಶದಲ್ಲಿ ಒಮ್ಮೆ ತೇಲಿಬನ್ನಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot