ಯಾರು ಹೋಗದ ಗ್ರಹಕ್ಕೆ ಹೋಗಲಿದೆ ಹೊಸ ಸ್ಪೇಸ್‌ಶಿಪ್
ಭೂಮಿಗೆ ಏಲಿಯನ್ ಬಂದು ಹೋಗಿಯಾಯ್ತು. ಮಾನವ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಹೋಗಿ ಬಂದದ್ದಾಯಿತು. ಈ ಬಾಕಿ ಇನ್ನೇನು ಉಳಿದಿದೆ. ಅನ್ಯ ಗ್ರಹಗಳಿಗೆ ಹೋಗೋ ಎಲ್ಲಾ ರೀತಿಯ ಯೋಜನೆಗಳನ್ನು ನಾಸಾ ನಿರ್ವಹಿಸಿ ಆಗಿದೆ ಅಂದುಕೊಂಡಿರಬಹುದು. ಆದರೆ ನಾಸಾದ ಬಗ್ಗೆ ಹೇಳೊ ವಾಸ್ತವ ವಿಷಯವೇ ಬೇರೇ ಇದೆ. ಡಾ|| ಹೆರಾಲ್ಡ್ "ಸನ್ನಿ" ವೈಟ್ ಎನ್ನುವವರು ಪ್ರಸ್ತುತದಲ್ಲಿ ವಾರ್ಪ್ ಡ್ರೈವ್ ಕೆಲಸದಲ್ಲಿ ನಾಸಾದ ಜಾನ್ಸನ್ ಸ್ಪೇಸ್ ಕೇಂದ್ರದಲ್ಲಿ ನಿರತರಾಗಿದ್ದಾರೆ. ಇವರು ನಿರ್ವಹಿಸುತ್ತಿರುವ ಸ್ಟಾರ್‌ಶಿಪ್ ಯೋಜನೆ ಒಂದು ಇನ್ನು ಪ್ರಯೋಗದ ಹಂತದಲ್ಲೇ ಇದೆ. ಇವರ ಈ ಸ್ಟಾರ್‌ಶಿಪ್ ಲೆಕ್ಕಚಾರ ಇದುವರೆಗೂ ಸಹ ಮಾನವ ಕಾಲಿಡದ ಗ್ರಹಕ್ಕೆ ಹೋಗುವುದು ಇವರ ಕನಸಾಗಿದೆ. ಅಂದಹಾಗೆ ಅದ್ಯಾವ ಸ್ಟಾರ್‌ಶಿಪ್ ಅದು, ಹೇಗಿದೆ, ವಿಶೇಷತೆ ಏನು ತಿಳಿಯಬೇಕೇ? ಈ ಲೇಖನ ಓದಿ.

1
ಅಂದಹಾಗೆ ಡಾ|| ಹೆರಾಲ್ಡ್ "ಸನ್ನಿ" ವೈಟ್ ಇದುವರೆಗೂ ಮಾನವರೇ ಹೋಗದ ಸ್ಥಳಕ್ಕೆ ಹೋಗಲು ಅಭಿವೃದ್ದಿಪಡಿಸುತ್ತಿರುವ ಸ್ಟಾರ್‌ಶಿಪ್ ಇದು.
ಚಿತ್ರ ಕೃಪೆ : HOLLAND SPACE YARDS

2
ಡಾ|| ಹೆರಾಲ್ಡ್ ನಿರ್ಮಿಸುತ್ತಿರುವ ಈ ಸ್ಟಾರ್‌ಶಿಪ್ ವಿಶೇಷತೆ ಅಂದ್ರೆ ಚಿಕ್ಕ ಕ್ಲಿಂಗನ್ ಹುಡುಗಿ ರೀತಿಯಲ್ಲಿ ಸೌಂಡ್ ಮಾಡುತ್ತದಂತೆ.

3
3D ಕಲ್ಪನೆ ಕಲಾವಿದರಾದ ಮಾರ್ಕ್ ರೇಡ್‌ಮೇಕರ್ ವೈಟ್ ರವರೊಂದಿಗೆ ಅಪ್‌ಡೇಟೆಡ್ ಮಾದರಿಯ ಸ್ಟಾರ್‌ಶಿಪ್ ನಿರ್ವಹಿಸುವಲ್ಲಿ ನಿರತರಾಗಿದ್ದಾರೆ. ಸ್ಟಾರ್‌ಶಿಪ್ ಎರಡು ಉಂಗುರಗಳ ನಡುವೆ ನಡುವೆ ನೆಲೆಸಿದ್ದು ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಚಿತ್ರ ಕೃಪೆ : HOLLAND SPACE YARDS

4
ಪ್ರಸ್ತುತಕ್ಕಿಂತ ಮೊದಲು ವಿನ್ಯಾಸಗೊಳಿಸಿದ್ದ ಸ್ಟಾರ್‌ಶಿಪ್ ಚಿತ್ರದಲ್ಲಿರುವಂತೆ ವಿನ್ಯಾಸಹೊಂದಿತ್ತು.
ಚಿತ್ರ ಕೃಪೆ :RADEMAKERdrex files

5
ಡಾ|| ವೈಟ್ ದಿನನಿತ್ಯವು ಸಹ ಭವಿಷ್ಯದ ನೋದನ ಪರಿಹಾರಕ್ಕೆ ಅಂತರ ಗ್ರಹಗಳ ಪಯಣಕ್ಕಾಗಿ ಪ್ರಯೋಗಾತ್ಮಕವಾದ ಕೆಲಸ ನಿರ್ವಹಿಸುತ್ತಾರೆ.
ಚಿತ್ರ ಕೃಪೆ : HOLLAND SPACE YARDS

6
ಪ್ರಸ್ತುತದಲ್ಲಿ ಅಭಿವೃದ್ದಿಪಡಿಸುತ್ತಿರುವ ಸ್ಪೇಸ್‌ಶಿಪ್ ಸುಸಜ್ಜಿತವಾಗಿದ್ದು ಅತಿವೇಗವಾಗೊ ವಾರ್ಪ್ ಡ್ರೈವ್ ಮಾಡಲು ಅವಕಾಶ ನೀಡುತ್ತದೆ. ಆದರೆ ಐನ್‌ಸ್ಟೈನ್‌ರ 'ಲೈಟ್ ಡ್ರೈವ್" ಅನ್ನು ಉಲ್ಲಂಘನೆ ಮಾಡುವುದಿಲ್ಲ.
ಚಿತ್ರ ಕೃಪೆ : HOLLAND SPACE YARDS

IXS ಎಂಟರ್ಪ್ರೈಸ್
ವಾರ್ಪ್ ಡ್ರೈವ್ ಸ್ಟಾರ್‌ಶಿಪ್ ಅಭಿವೃದ್ದಿ ಪಡಿಸುವಾಗಿನ IXS ಎಂಟರ್ಪ್ರೈಸ್‌ನ ಚಿತ್ರವಿದು.
ಚಿತ್ರ ಕೃಪೆ : HOLLAND SPACE YARDS

IXS ಎಂಟರ್ಪ್ರೈಸ್
ವಾರ್ಪ್ ಡ್ರೈವ್ ಸ್ಟಾರ್‌ಶಿಪ್ ಅಭಿವೃದ್ದಿ ಪಡಿಸುವಾಗಿನ IXS ಎಂಟರ್ಪ್ರೈಸ್‌ನ ಚಿತ್ರವಿದು.
ಚಿತ್ರ ಕೃಪೆ : HOLLAND SPACE YARDS

ಗಿಜ್‌ಬಾಟ್

ಗಿಜ್‌ಬಾಟ್
ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್, ಓದಿರಿ ಕನ್ನಡ.ಗಿಜ್‌ಬಾಟ್.ಕಾಂ


Click it and Unblock the Notifications








